ಹುಬ್ಬಳ್ಳಿ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಗ್ರಹಿಸಿ ಆಲಮಟ್ಟಿಯಿಂದ, ಮಹದಾಯಿ ಯೋಜನೆಗಾಗಿ ಬೆಳಗಾವಿಯಿಂದ ಪಾದಯಾತ್ರೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಷ್ಟಿçÃಯ ಪಕ್ಷಗಳಿಂದ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಕೇಂದ್ರದ ಕಣ್ಣು ತೆರೆಸಲು ಪಾದಯಾತ್ರೆ ಮಾಡಲಿದ್ದು, ಕೊರೊನಾ ಕಡಿಮೆಯಾದರೆ ವಿಜಯದಶಮಿಯಿಂದ ನಮ್ಮ ಹೋರಾಟ ಆರಂಭವಾಗಲಿದೆ ಎಂದರು.
ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಯಾವುದೇ ಸಂದೇಶ ಇಲ್ಲ. ಅದರಲ್ಲಿ ಗುಂಡು ಹಾರಿಸುವುದು, ಹಾರ ತುರಾಯಿಗೆ ಮಾತ್ರ ಮಾಡಲಾಗಿದೆ ಎಂದರು.
‘ಯುವ ಮುಖಂಡರಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರಿಗೆ ರಾಜಕೀಯದಲ್ಲಿ ಇನ್ನೂ ಅನುಭವ ಬೇಕು. ನನಗೇ ಹಲವು ವರ್ಷಗಳು ಬೇಕಾಯಿತು. ಹೋರಾಟ ಮತ್ತು ಪಾದಯಾತ್ರೆಗಳನ್ನು ಕೈಗೊಳ್ಳಲು ಅವರಿನ್ನೂ ಪಳಗಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಬಸವರಾಜ ಬೊಮ್ಮಾಯಿ ಅವರು, ಮುಖ್ಯಮಂತ್ರಿಯಾದ ಬಳಿಕವೂ ನಾನು ಜನತಾ ಪರಿವಾರದವನು ಎಂದು ನೆನೆಪಿಸಿಕೊಂಡಿದ್ದಾರೆ. ಹಾಗಾಗಿಯೇ, ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ, ಎಂದಿಗೂ ಜನತಾ ಪರಿವಾರದವನು ಎನ್ನಲಿಲ್ಲ. ಅವರ ಮೊದಲ ಅಜೆಂಡಾ ಜೆಡಿಎಸ್ ಮುಗಿಸುವುದೇ ಆಗಿತ್ತು’ ಎಂದರು.
ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಮಹಾನಗರ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ, ಬಿ.ಬಿ.ಗಂಗಾಧರಮಠ,ಗಜಾನನ ಅಣ್ವೇಕರ ಇನ್ನಿತರರಿದ್ದರು.
ಕಾರ್ಯಕರ್ತರು ಸರಿಯಿಲ್ಲ
ತಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಲ್ಲ ಎಂದು ಪಕ್ಷದ ಅಧ್ಯಕ್ಷರಾದ ಕುಮಾರಸ್ವಾಮಿಯವರೇ ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ. ಕಾರ್ಯಕರ್ತರಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ನಾನು ಬೆಂಗಳೂರಿಗೆ ಹೋಗುತ್ತಿದ್ದಂತೆ , ಮನೆಗೆ ಹೋಗಿ ಮಲಗುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಜನತಾ ಪರಿವಾರದ ಹಳಬರನ್ನು ಒಟ್ಟುಗೂಡಿಸುವ ಆಸಕ್ತಿ ಇಲ್ಲ. ಹೊಸಬ ರಿಂದಲೇ ಪಕ್ಷ ಕಟ್ಟುತ್ತೇನೆ.ನನಗೆ ಮಮತಾ ಬ್ಯಾನರ್ಜಿಯವರೇ ಸ್ಪೂರ್ತಿ ಎಂದು ಹೇಳಿದರು.