ಹುಬ್ಬಳ್ಳಿ-ಧಾರವಾಡ ಸುದ್ದಿ

ಜೆಡಿಎಸ್‌ನಿಂದ 19 ಅಭ್ಯರ್ಥಿಗಳ ಮೊದಲ ಪಟ್ಟಿ

 

 


ಧಾರವಾಡ : ಮಹಾನಗರ ಪಾಲಿಕೆಯ ಚುನಾವಣೆಗೆ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಯಿತು.
ನಗರದಲ್ಲಿ ಜರುಗಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಎನ್.ಹೆಚ್.ಕೋನರಡ್ಡಿ ಮತ್ತು ಮಹಾನಗರ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು.
ಪಾಲಿಕೆ ಚುನಾವಣೆ ಪ್ರಥಮ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಪ್ರಕಟಣೆಯಾಗದ ವಾರ್ಡ್ಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಅಧಿಕವಿದ್ದು. ಈ ಕುರಿತು ಪಕ್ಷದ ಚೌಕಟ್ಟಿನಲ್ಲಿ ಸಮಾಲೋಚನೆ ನಡೆಸಿ ನಾಳೆ ಮತ್ತು ನಾಡಿದ್ದು ಎಲ್ಲ ವಾರ್ಡ್ಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಲಾಗುವುದು ಎಂದರು.
ನಾಗವ್ವ ಈಶ್ವರಪ್ಪ ಗಾಣಿಗೇರ (ವಾರ್ಡ್ ನಂ. 6 ), ಲತಾ ಮಂಜುನಾಥ ಆರೇರ(ವಾರ್ಡ್ ನಂ. 10), ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ (ವಾರ್ಡ್ ನಂ. 12), ರಾಜು ಅಂಬೋರೆ (ವಾರ್ಡ್ ನಂ.13), ರಶೀದಾ ಮಹ್ಮದರಫೀಕ ಕಿರಶ್ಯಾಳ (ವಾರ್ಡ್ ನಂ.22 ), ಬಸವರಾಜ ಮೆಣಸಿಂಡಿ (ವಾರ್ಡ್ ನಂ.28 ), ಮುದಕಪ್ಪ ಮಲ್ಲಾರಿ(ವಾರ್ಡ್ ನಂ.29 ), ರಮೇಶ ಕಂಬಾರ (ವಾರ್ಡ್ ನಂ.30 ), ಸಂಜಮ್ಮ ಬಳ್ಳಾರಿ(ವಾರ್ಡ್ ನಂ.31 ), ವಿಕಾಸ ಕುಬಸದ (ವಾರ್ಡ್ ನಂ.32 ), ಲಕ್ಷö್ಮಣ ಪಿ.ರೋಕಾ (ವಾರ್ಡ್ ನಂ.35 ), ರಾಜು ಅನಂತಸಾ ನಾಯಕವಾಡಿ (ವಾರ್ಡ್ ನಂ. 51), ಶ್ರೀಕಾಂತ ಶಂಕರ ತೆಲಗಾರ (ವಾರ್ಡ್ ನಂ.61), ಇರ್ಷಾದ ಅಹ್ಮದ ಭದ್ರಾಪೂರ (ವಾರ್ಡ್ ನಂ.63), ನಸೀಮಾ ಮಂಚಿನಕೊಪ್ಪ (ವಾರ್ಡ್ ನಂ.64), ಈರನಗೌಡ ಫ.ಪಾಟೀಲ (ವಾರ್ಡ್ ನಂ.67), ಕುಮಾರೇಶ್ವರ ಹೊಂಗಲ (ವಾರ್ಡ್ ನಂ.68), ಹಜರತಬಿ ಬುಡ್ಡೇಸಾಬ ಬೆಟಗೇರಿ (ವಾರ್ಡ್ ನಂ.74) ಮತ್ತು ಶೋಭಾ ಕದರೆಪ್ಪ ಪಾಲವಾಯಿ (ವಾರ್ಡ್ ನಂ.75).
ಪಕ್ಷದ ಮುಖಂಡರಾದ ರಾಜು ಅಂಬೋರೆ, ಐ.ಎಂ.ನದಾಫ್ ಮತ್ತಿತರರು ಉಪಸ್ಥಿತರಿದ್ದರು.

 

administrator

Related Articles

Leave a Reply

Your email address will not be published. Required fields are marked *