ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್‌ಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಬಿಜೆಪಿಯಲ್ಲಿ ಘಟಾನುಘಟಿಗಳಿಗೆ ಕೊಕ್ ನೀಡಲಾಗಿದ್ದು ಕಳೆದ ಬಾರಿಯ ಸದಸ್ಯರಾದ ಮಾಜಿ ಉಪ ಮೇಯರ್ ಲಕ್ಷಿö್ಮ ಉಪ್ಪಾರ, ಮಹೇಶ ಬುರ್ಲಿ, ಕಮಲಾಕ್ಷಿ ಸಜ್ಜನರ, ನಾರಾಯಣ ಜರತಾರಘರ,ಶಿವಾನಂದ ಮುತ್ತಣ್ಣವರ, ಪೂರ್ಣಾ ಪಾಟೀಲ, ಬಲರಾಮ ಕುಸುಗಲ್ ಮುಂತಾದವರಿಗೆ ಟಿಕೆಟ್ ನಿರಾಕರಿಸಲಾಗಿದ್ದು ಮಾಜಿ ಮೇಯರ್ ಡಿ.ಕೆ.ಚವ್ಹಾಣ ಸೊಸೆಗೆ, ಲಕ್ಷö್ಮಣ ಗಂಡಗಾಳೇಕರ ಪತ್ನಿಗೆ ಸಹ ಟಿಕೆಟ್ ನಿರಾಕರಿಸಿದ್ದು, ಮಾಧ್ಯಮ ವಕ್ತಾರ ರವಿನಾಯಕ ಪತ್ನಿ ಕಲ್ಪನಾ ನಾಯಕ್‌ಗೂ ಕಾಗೆ ಹಾರಿಸಲಾಗಿದೆ.
ಪಶ್ಚಿಮ ಕ್ಷೇತ್ರದಲ್ಲಿ 3ನೇ ವಾರ್ಡಲ್ಲಿ ಬಿಜೆಪಿ ಕಟ್ಟಾ ಕಾರ್ಯಕರ್ತ ಮಂಜುನಾಥ ನಡಟ್ಟಿ ವಿರೇಶ ಅಂಚಟಗೇರಿಗೆ ಸೆಡ್ಡು ಹೊಡೆದಿದ್ದಾರೆ.
ಈಗಾಗಲೇ ಲಕ್ಷಿö್ಮ ಉಪ್ಪಾರ(47),ಯಶೋಧಾ ಗಂಡಗಾಳೇಕರ(54) ಮುಂತಾದವರು ಪಕ್ಷೇತರರಾಗಿ ಸೆಡ್ಡು ಹೊಡೆಯಲು ಮುಂದಾಗಿದ್ದು, 52ನೇ ವಾರ್ಡಿನಲ್ಲಿ ಬಿಜೆಪಿಯ ವರೇ ಆಗಿದ್ದ ಸಂತೋಷ ಶೆಟ್ಟಿ ಕೂಡ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.
೨೮ನೇ ವಾರ್ಡಲ್ಲಿ ಇಂದು ಬೆಳಿಗ್ಗೆ ಚಂದ್ರಶೇಖರ ಮನಗುಂಡಿಗೆ ಟಿಕೆಟ್ ಖಾತ್ರಿಯಾಗುತ್ತಿದ್ದಂತೆ ಕೋವಿಡ್ ಸಮಯದಲ್ಲಿ ಆಹಾರ ಕಿಟ್ ವಿತರಿಸಿ ವಾರ್ಡಿನ ಮನೆ,ಮನ ತಲುಪಿರುವ ಬಿಜೆಪಿ ಮುಖಂಡ ವಿಜಯಕುಮಾರ ಅಪ್ಪಾಜಿ ಬಂಡಾಯ ಅಭ್ಯರ್ಥಿಯಾಗುವುದಾಗಿ ಹೇಳಿದ್ದಾರೆ.
ಬಹುತೇಕ ಚುನಾವಣೆಗಳಲ್ಲಿ ಎಲ್ಲರಿಗಿಂತ ಮುಂದಿರುತ್ತಿದ್ದ ಈ ಬಾರಿ ಕಮಲ ಪಡೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಇಂದು ಸುಮಾರು 11ರ ಸುಮಾರಿಗೆ ತನ್ನ ಕೊನೆಯ 50ನೇ ವಾರ್ಡಿನ ಅಂತಿಮಗೊಳಿಸಿದೆ. ಉಸ್ತುವಾರಿ ಸಚಿವ ಶಂಕರಪಾಟೀಲರ ನಿಕಟವರ್ತಿ ಚಂದ್ರು ಮುಶಪ್ಪನವರ ಪತ್ನಿ ಹಾಗೂ ಶ್ರೀಮತಿ ಎಣ್ಣೆಚವಡಿ ಮಧ್ಯೆ ಪೈಪೋಟಿಯಲ್ಲಿ ಭಾಗೀರಥಿ ಮುಶಪ್ಪನವರಿಗೆ ಅಂತಿಮ ಗೊಂಡಿದೆ.
ಬೆಳಗಿನಜಾವ 4-30ರವರೆಗೂ ಕುಳಿತು ಅಂತಿಮವಾಗಿ ಬಾಕಿ ಉಳಿದಿದ್ದ 12 ಅಭ್ಯರ್ಥಿಗಳ ಪಟ್ಟಿಯನ್ನು ಬೆಳಿಗ್ಗೆ ಪ್ರಕಟಿಸಲಾಗಿದೆ.
ಪಶ್ಚಿಮ ಕ್ಷೇತ್ರದಲ್ಲಿ 15ನೇ ವಾರ್ಡಿಂದ ಅಂತಿಮಗೊ0ಡಿದ್ದ ಸಂಜಯ ಕಪಟಕರ್ ಅವರನ್ನು 23ಕ್ಕೆ ಬದಲಿಸಿದ್ದು 15ರಲ್ಲಿ ವಿಷ್ಣು ಕೊರ್ಲಹಳ್ಳಿಗೆ ನೀಡಲಾಗಿದೆ.
ಸೆಂಟ್ರಲ್ ಕ್ಷೇತ್ರದಲ್ಲಿನ ಪ್ರತಿಷ್ಠಿತ ದೇಶಪಾಂಡೆನಗರ ವಾರ್ಡ 57ರಲ್ಲಿ ಹುಡಾ ಸದಸ್ಯೆ ಮೀನಾಕ್ಷಿ ವಂಟಮೂರಿ ಅಂತಿಮಗೊ0ಡಿದ್ದು, ಕಳೆದ ಬಾರಿಯೂ ನಿರಾಸೆಗೊಂಡಿದ್ದ ಬಿಜೆಪಿ ವಕ್ತಾರ ರವಿ ನಾಯಕಗೆ ಮತ್ತೆ ಅದೃಷ್ಟ ಕೈ ಕೊಟ್ಟಿದೆ.ಅಂತಿಮ ಕ್ಷಣದವರೆಗೂ ಕಲ್ಪನಾ ನಾಯಕ ಹೆಸರಿತ್ತಾದರೂ ಕೊನೆಗೆ ಮೀನಾಕ್ಷಿ ಪರ ವಾಲಿದೆ.
28ರಲ್ಲಿ ಚಂದ್ರಶೇಖರ ಮನಗುಂಡಿಗೆ ಬಿಜೆಪಿ ಮಣೆ ಹಾಕಿದ್ದು ವಿಜಯಕುಮಾರ ಅಪ್ಪಾಜಿಗೆ ಟಿಕೆಟ್ ಕೈ ತಪ್ಪಿದೆ. 30ನೇ ವಾರ್ಡಲ್ಲಿ ಹಿರಿಯ ಮುಖಂಡ ಹುಚ್ಚಪ್ಪ ರೂಗಿಯವರ ಸೊಸೆ ಕೈ ಕೊನೆಗೂ ಮೇಲಾಗಿದೆ.
ಕಾಂಗ್ರೆಸ್‌ನಲ್ಲಿ ಸಹ ಅಸಮಾಧಾನ ವ್ಯಾಪಕವಾಗಿದ್ದು 43ನೇ ವಾರ್ಡಿಂದ ಸಮೀರ ಖಾನ್, ೫೦ನೇ ವಾರ್ಡಿಂದ ಸುಶೀಲಾ ಗುಡಿಹಾಳ, ಅಲ್ಲದೇ 50ನೇ ವಾರ್ಡನಲ್ಲಿ ಕೈ ಟಿಕೆಟ್ ಆಕಾಂಕ್ಷಿ ಮಂಜುಳಾ ಗುರು ಯಾತಗೇರಿ ತೆನೆ ಹೊತ್ತು ನಾಮಪತ್ರ ಸಲ್ಲಿಸಿದ್ದಾಳೆ.
66ರಲ್ಲಿ ಟಿಕೆಟ್ ಕೈ ತಪ್ಪಿದರೂ ಪಕ್ಷದ ತೀರ್ಮಾನಕ್ಕೆ ಬದ್ದವಾಗಿದ್ದು ತಮ್ಮ ತಾಯಿ ಕಮಲಾಕ್ಷಿ ಸಜ್ಜನರ ಪಕ್ಷೇತರಳಾಗಿ ಸ್ಪರ್ಧೆಗಿಳಿಯುವುದಿಲ್ಲ ಎಂದು ಬಿಜೆಪಿ ಮುಖಂಡ ವಿನಯ ಸಜ್ಜನರ ಸ್ಪಷ್ಟಪಡಿಸಿದ್ದಾರೆ.
ಪೂರ್ವ ಕ್ಷೇತ್ರದ 71ನೇ ವಾರ್ಡಲ್ಲಿ ಹಿರಿಯ ಮುಖಂಡ ಗಣೇಶ ಟಗರಗುಂಟಿ, 56ನೇ ವಾರ್ಡಲ್ಲಿ ಘೋಷಿಸಲ್ಪಟ್ಟಿದ್ದ ಮಾಜಿ ಮೇಯರ್ ವೆಂಕಟೇಶ ಮೇಸ್ತಿç ಪತ್ನಿ ಚಂದ್ರಿಕಾ ಮೇಸ್ತಿçಗೆ ಅಂತಿಮ ಕ್ಷಣದಲ್ಲಿ ಬೆಂಗಳೂರಲ್ಲೇ ಕೈ ಕೊಡಲಾಗಿದ್ದು, ಸಂತೋಷ ಜಕ್ಕಪ್ಪನವರ ಪತ್ನಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ. 54ನೇ ವಾರ್ಡಲ್ಲೂ ಶಿವಲೀಲಾ ಹಿರೇಮಠ ಬದಲಿಗೆ ಶ್ರೀಮತಿ ದಾಬಡೆ ಎನ್ನುವವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಧಾರವಾಡದ 6ನೇ ವಾರ್ಡಲ್ಲಿ ಯಾಸೀನ್ ಹಾವೇರಿಪೇಟ್ ಪತ್ನಿ ಶಾಹೀನ್ ಪಕ್ಷೇತರಳಾಗಿ ಕಣಕ್ಕೆ ಧುಮುಕಿದ್ದಾಳೆ.
ಹುದ್ದೆಯಲ್ಲಿದ್ದವರಿಗೆ ಮತ್ತೆ ಟಿಕೆಟ್ – ಬಿಜೆಪಿಯಲ್ಲಿ ಆಕ್ರೋಶ
ಹುಬ್ಬಳ್ಳಿ : ಅಧಿಕಾರ ಹೊಂದಿದವರಿಗೆ ಮತ್ತೆ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ನೀಡಿದ ಪಕ್ಷದ ಕ್ರಮವನ್ನು ಅನೇಕ ನಿಷ್ಟಾವಂತ ಕಾರ್ಯಕರ್ತರು ಅಲ್ಲದೇ ಟಿಕೆಟ್ ಸಿಗದೇ ನಿರಾಸೆ ಅನುಭವಿಸಿದ ಪ್ರಮುಖರು ಪ್ರಶ್ನಿಸಲಾರಂಭಿಸಿದ್ದಾರೆ.
ಅಧ್ಯಕ್ಷ ಹಾಗೂ ಸದಸ್ಯ ಸ್ಥಾನವನ್ನು ಹೊಂದಿ,ಲಾಭದಾಯಕ ಹುದ್ದೆ ಅನುಭವಿಸುತ್ತಿರುವ ಮರ‍್ನಾಲ್ಕು ಜನರಿಗೆ ಪಾಲಿಕೆ ಟಿಕೆಟ್ ನೀಡಿದ್ದು ಒಬ್ಬರಿಗೆ ಒಂದೇ ಹುದ್ದೆ ನಿಯಮ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದ್ದಾರೆ.
ಒಂದು ದಿನವೂ ವಾರ್ಡಿನ ಸಮಸ್ಯೆಗಳ ಬಗ್ಗೆ ಕಣ್ಣು ಹಾಯಿಸದವರಿಗೆ ‘ಅಡುಗೆ ಮನೆ’ ರಾಜಕೀಯ ವರವಾಗಿ ಪರಿಣಮಿಸಿದೆ ಎಂದು ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೆ ಪರಿಸ್ಥಿತಿ ಮುಂದುವರಿದಲ್ಲಿ ಕಾಂಗ್ರೆಸ್‌ನAತೆ ನಮ್ಮಲ್ಲೂ ಮಿತಿ ಮೀರಿದ ಗುಂಪುಗಾರಿಕೆ ನಿಶ್ಚಿತ.ಯಾವುದೇ ಸಿದ್ಧಾಂತವೂ ಇಲ್ಲದೇ ಟಿಕೆಟ್ ಹಂಚಲಾಗಿದೆ ಎಂದಿದ್ದಾರೆ.
ಟಿಕೆಟ್ ಸಿಕ್ಕರೂ ಕೈ ಕೊಟ್ಟ ಅದೃಷ್ಠ
ಧಾರವಾಡ: ಮಹಾನಗರ ಪಾಲಿಕೆಯ ಚುನಾವಣೆಯಗೆ ವಾರ್ಡ್ ನಂಬರ 13 ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕರೂ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಪ್ರಕರಣ ನಗರದಲ್ಲಿ ನಡೆದಿದೆ.
ಕಾಂಗ್ರೆಸ್ ಮುಖಂಡ ಆನಂದ ಜಾಧವ ನಾಮಪತ್ರ ಸಲ್ಲಿಸದ ಅಭ್ಯರ್ಥಿ. ನಿನ್ನೆ ರಾತ್ರಿ ಅಧಿಕ ರಕ್ತದೊತ್ತಡ ಇನ್ನಿತರ ಕಾರಣಗಳಿಂದ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಇಂದು ನಾಮಪತ್ರ ಸಲ್ಲಿಸದಂತಾಯಿತು.
ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯರ್ದರ್ಶಿಯಾಗಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಆನಂದ ಜಾಧವ ಅವರು, ತಮಗೆ ವಾರ್ಡ್ ನಂಬರ 13 ರಲ್ಲಿ ಸ್ಪರ್ಧಿಸಲು ಬಯಸಿ, ಪಕ್ಷದ ಮುಖಂಡರಿAದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಹಲವರ ಪೈಪೋಟಿ ಮಧ್ಯೆಯೂ ಟಿಕೆಟ್ ಗಿಟ್ಟಿಸಿಕೊಂಡಿದ್ದ ಜಾಧವ ಅವರಿಗೆ ಆರೋಗ್ಯ ಕೈಕೊಟ್ಟ ಪರಿಣಾಮ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಪಕ್ಷದ ಅಭ್ಯರ್ಥಿಯಾಗಲು ಕಳೆದ ಕೆಲವು ವರ್ಷಗಳಿಂದ ಪ್ರಯತ್ನಿಸುತ್ತ ಬಂದಿದ್ದ ಜಾಧವಗೆ ಈ ಬಾರಿ ಟಿಕೆಟ್ ಸಿಕ್ಕಿತ್ತು. ಆದರೆ, ಅದೃಷ್ಠ ಅವರಿಗೆ ಸಾಥ್ ನೀಡದೇ ಹೋಯಿತು.
ಜಾಧವರ ಅನಾರೋಗ್ಯದ ಕಾರಣದಿಂದ ನಾಮಪತ್ರ ಸಲ್ಲಿಸಲು ಸಾಧ್ಯ ವಾಗಲಿಲ್ಲ ಎಂದು ಜಿಲ್ಲಾ ವಕ್ತಾರ ರಾಬರ್ಟ್ ದದ್ದಾಪುರಿ ತಿಳಿಸಿದ್ದಾರೆ.
ಜಾಧವ್ ಅವರ ಸ್ಥಾನದಲ್ಲಿ ಹೇಮಂತ ಗುರ್ಲಹೊಸೂರ ಸ್ಪರ್ಧಿಸಲಿದ್ದು, ಅವರಿಗೆ ಬಿಫಾರಂ ನೀಡಲಾಗಿದೆ ಎಂದು ತಿಳಿದುಬಂದಿದೆ.
6ನೇ ವಾರ್ಡಿನಿಂದ ಶಾಹೀನ್ ನಾಮಪತ್ರ
ಧಾರವಾಡ: ಮಹಾನಗರ ಪಾಲಿಕೆಯ ಚುನಾವಣೆಗೆ ವಾರ್ಡ್ ನಂಬರ 6 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ಶಾಹೀನ ಹಾವೇರಿಪೇಟ್ ಇಂದು ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ನಿರೀಕ್ಷೆಯಲ್ಲಿದ್ದ ಶಾಹೀನ ಹಾವೇರಿಪೇಟ್ ಅವರಿಗೆ ಕೊನೆಗಳಿಗೆಯಲ್ಲಿ ಟಿಕೆಟ್ ಕೈತಪ್ಪಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಶಾಹೀನ ಅವರ ಪತಿ ಯಾಸೀನ್ ಹಾವೇರಿಪೇಟ್ ಕಳೆದ ಎರಡು ಅವಧಿಯಲ್ಲಿ ಪಾಲಿಕೆ ಸದಸ್ಯರಾಗಿ ಅನೇಕ ಅಭಿವೃದ್ಧಿ ಕಾರ್ಯ ಗಳನ್ನು ಕೈಕೊಂಡಿದ್ದು ಅಲ್ಲದೇ ವಾರ್ಡ್ನ ಎಲ್ಲ ಜನರ ಜೊತೆ ಅನ್ಯೋನ್ಯತೆ ಇಟ್ಟುಕೊಂಡಿದ್ದರು. ಈ ಬಾರಿ ವಾರ್ಡ್ ಮಹಿಳೆಯರಿಗೆ ಮೀಸಲಾಗಿದ್ದರಿಂದ ಯಾಸೀನ್ ತಮ್ಮ ಪತ್ನಿಗೆ ಟಿಕೆಟ್ ಕೊಡುವಂತೆ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಮುಖಂಡರು ಕೂಡ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು.
ಆದರೆ, ಅಂತಿಮವಾಗಿ ಮತ್ತೊಬ್ಬರಿಗೆ ಟಿಕೆಟ್ ಕೊಟ್ಟ ಪರಿಣಾಮ ಯಾಸೀನ್ ಅರವು ತಮ್ಮ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ಪಕ್ಷದ ಮುಖಂಡರಿಗೆ ಪಾಠ ಕಲಿಸಲು ಸಜ್ಜಾಗಿದ್ದಾರೆ. ಶಾಹೀನ ಅವರ ಸ್ಪರ್ಧೆಯಿಂದ ಯಾರಿಗೆ ಜಯ ಲಭಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕಮಲ ಹಿಡಿದ ಶಿಂಧೆ
ಧಾರವಾಡ : ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿದ್ದ ಸುಭಾಸ ಶಿಂಧೆ ಈ ಬಾರಿ 14ನೇ ವಾರ್ಡನಿಂದ ಕಮಲ ಪಾಳೆಯದ ಅಭ್ಯರ್ಥಿಯಾಗಿದ್ದಾರೆ.
21ನೇ ವಾರ್ಡಿನಿಂದ ಸ್ಪರ್ಧಿಸಲು ಅವರು ಕಾಂಗ್ರೆಸ್ ಟಿಕೆಟ್ ನೀಡಿತ್ತಾದರೂ ನಿರಾಕರಿಸಿ ಇಂದು ಬೆಳಗಿನ ಜಾವ ಪ್ರಕಟಗೊಂಡ ನಾಲ್ಕನೇ ಪಟ್ಟಿಯಲ್ಲಿ ಬಿಜೆಪಿಯ ಟಿಕೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
14ನೇ ವಾರ್ಡಿನಿಂದ ಕಾಂಗ್ರೆಸ್‌ನಿ0ದ ಸ್ಪರ್ಧೆಗೆ ಇಚ್ಚಿಸಿದ್ದರಾದರೂ ಬೇರೆಯವರಿಗೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಕದ ತಟ್ಟಿದ್ದರು. ‘ಸಂಜೆ ದರ್ಪಣ’ ಶಿಂಧೆ ಅದೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ ಎಂಬುದನ್ನು ದಿ.20 ರ ಸಂಚಿಕೆಯಲ್ಲೇ ಪ್ರಕಟಿಸಿತ್ತು.ಅದು ಅಕ್ಷರಶಃ ನಿಜವಾಗಿದೆ.
ಪಾಲಿಕೆ ಚುನಾವಣೆ: ನಾಮಪತ್ರ ಭರಾಟೆ
ಹುಬ್ಬಳ್ಳಿ: ಮಹಾನಗರಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯವಾಗಿದ್ದು ಹುಬ್ಬಳ್ಳಿ ಮತ್ತು ಧಾರವಾಡದ ಅಂಗಳದಲ್ಲಿ ಜನಜಾತ್ರೆಯೇ ನೆರೆದಿದೆಯಲ್ಲದೇ ಪಾಲಿಕೆ ಆವರಣದ ಹೊರಗಡೆ ಗದ್ದಲದ ವಾತಾವರಣ ನಿರ್ಮಾಣವಾಗಿದೆ.
ಅಭ್ಯರ್ಥಿಗಳ ಜೊತೆ ಬೆಂಬಲಿಗರು ಗುಂಪು ಗುಂಪಾಗಿ ಬರುತ್ತಿದ್ದು, ಪೊಲೀಸರು ಅವರನ್ನು ಪಾಲಿಕೆ ಪ್ರವೇಶ ದ್ವಾರದಲ್ಲಿಯೇ ಬ್ಯಾರಿಕೇಡ್ ಹಾಕಿ ತಡೆಯುತ್ತಿದ್ದಾರೆ. ಇದರಿಂದ ಪೊಲೀಸರ ಹಾಗೂ ಅಭ್ಯರ್ಥಿಗಳ ನಡುವೆ ವಾಗ್ವಾದವೂ ನಡೆಯುತ್ತಿವೆ. ಪಕ್ಷದ ಅಭ್ಯರ್ಥಿ ಜೊತೆ ನಾಲ್ಕು ಮಂದಿ ಹಾಗೂ ಸ್ವತಂತ್ರ ಅಭ್ಯರ್ಥಿ ಜೊತೆ ಐದು ಮಂದಿಗೆ ಮಾತ್ರ ಪ್ರವೇಶ ನೀಡಿ, ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಕೋವಿಡ್ ನಿಯಮಾವಳಿ ಪಾಲಿಸಲು ಧ್ವನಿವರ್ಧಕದಲ್ಲಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ಆವರಣ ಹಾಗೂ ಹೊರಗಡೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಬಿಜೆಪಿ, ಕಾಂಗ್ರೆಸ್, ಇತರ ಪಕ್ಷಗಳೂ ಸೇರಿದಂತೆ ವಿವಿಧ ವಾರ್ಡಗಳ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ತಮ್ಮ ಸೀಮಿತ ಬೆಂಬಲಿಗರೊAದಿಗೆ ಆಗಮಿಸುತ್ತಿದ್ದರೂ ಇಂದೆ ಕಡೆಯ ದಿನವಾಗಿದ್ದರಿಂದ ೩ ಗಂಟೆಯೊಳಗೆ ಸಲ್ಲಿಸಲೇ ಬೇಕಾಗಿದೆ.
ಬಿಜೆಪಿ ಸೇರಿದಂತೆ ಎಲ್ಲರೂ ಬಂಡಾಯಕ್ಕೆ ಆಸ್ಪದವಾಗದಂತೆ ಅಂತಿಮ ಪಟ್ಟಿಯನ್ನು ಇಂದು ಬೆಳಗಿನ ಜಾವ ಅಂತಿಮಗೊಳಿಸಿದ್ದು ಹಾಗಾಗಿ ಸುಮಾರು ಎಲ್ಲ ದಾಖಲೆಗಳನ್ನು ಜೋಡಿಸಿ ಸಲ್ಲಿಸಲು ಪರದಾಡುವಂತಾಗಿದೆ.
ಈಗಾಗಲೇ ಅನೇಕರು ಬಿಜೆಪಿ ಚುನಾವಣೆ ಅಧಿಕಾರಿಗಳನ್ನು ಬಳಸಿಕೊಂಡು ವಿನಾಕಾರಣ ನಾಮಪತ್ರ ಸಲ್ಲಿಸಲು ಬರುವ ಪಕ್ಷೇತರ ಅಭ್ಯರ್ಥಿಗಳ ದಾಖಲೆಗಳಲ್ಲಿ, ತಪುö್ಪ ಹುಡುಕುವುದು, ಅನಗತ್ಯ ವಿಳಂಬ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬಂದಿವೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಡಿದ್ದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.