ಹುಬ್ಬಳ್ಳಿ-ಧಾರವಾಡ ಸುದ್ದಿ
ಅಥ್ಲೇಟಿಕ್: ಬೆಳ್ಳಿ ಗೆದ್ದ ಗ್ರಾಮೀಣ ಪ್ರತಿಭೆ ‘ಪ್ರಿಯಾಂಕ’

ಅಥ್ಲೇಟಿಕ್: ಬೆಳ್ಳಿ ಗೆದ್ದ ಗ್ರಾಮೀಣ ಪ್ರತಿಭೆ ‘ಪ್ರಿಯಾಂಕ’

  1. ಧಾರವಾಡ: ದೆಹಲಿಯ ಜವಾಹರಲಾಲ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ 3ನೇ ನ್ಯಾಷನಲ್ ಓಪನ್ 400ಮೀ ಚಾಂಪಿಯನ್ಸ್ -2021 ಓಟದಲ್ಲಿ ಬೆಳ್ಳಿ ಪದಕ ಪಡೆದಿರುವ ಕೀರ್ತಿಗೆ ಧಾರವಾಡ ತಾಲೂಕಿನ ಮುಗಳಿ ಗ್ರಾಮದ ಪ್ರಿಯಾಂಕ ಮಡಿವಾಳಪ್ಪ ಓಲೇಕಾರ ಪಾತ್ರರಾಗಿದ್ದಾರೆ.

ಸದ್ಯ 10ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ಸರ್ಕಾರಿ ಶಾಲೆಯಲ್ಲಿ ಕಲಿತು, ಹಳ್ಳಿಗಾಡಿನ ಪ್ರತಿಭೆ ಊರಿನ ಹಾಗೂ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ಪ್ರಿಯಾಂಕ ಧಾರವಾಡದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ತಮ್ಮ ಕ್ರೀಡಾ ಅಭ್ಯಾಸ ನಡೆಸಿದ್ದಾರೆ.

ಪ್ರಿಯಾಂಕ ಸಾಧನೆಯಿಂದ ತಮಗೆ ತುಂಬಾ ಖೂಷಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಸರು ಮಾಡಲಿ ಎಂದು ಮಾಡಲಿ ಎಂದು ತರಬೇತಿದಾರರಾದ ಶಾಮಲಾ ಪಾಟೀಲ ತಮ್ಮ ವಿದ್ಯಾರ್ಥಿನಿ ಸಾಧನೆಗೆ ಹರ್ಷ ವ್ಯಕ್ತಪಡಿಸದ್ದಾರೆ.

ಪ್ರಿಯಾಂಕ 2019ರಲ್ಲಿ ನ್ಯಾಶನಲ್ ಇಂಟರ್ ಡಿಸ್ಟ್ರಿಕ್ಟ್ ಜೂನಿಯರ್ ಅಥ್ಲೆಟಿಕ್ ತಿರುಪತಿಯಲ್ಲಿ 600 ಮೀಟರ್ ಓಟದಲ್ಲಿ ಪ್ರಥಮ, ಆಂಧ್ರದಲ್ಲಿ ಜರುಗಿದ 600 ಮೀಟರ್ ನ್ಯಾಶನಲ್ ಜೂನೀಯರ್ ಪಂದ್ಯದಲ್ಲಿ ತೃತೀಯ ಸ್ಥಾನ, ಉಡುಪಿಯಲ್ಲಿ ಜರುಗಿದ ಸೌಥ್ ಜೋನ್ ನ್ಯಾಶನಲ್ ಚಾಂಪಿಯನ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು.

2020ರಲ್ಲಿ ಬೆಂಗಳೂರಿನಲ್ಲಿ ಜರುಗಿದ 400, 600, ಮಿನಿ ನ್ಯಾಶನಲ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಪ್ರಥಮ, ಅಸ್ಸಾಂನಲ್ಲಿ 36ನೇ ಜೂನಿಯರ್ ಅಥ್ಲೇಟಿಕ್ 2021ರಲ್ಲಿ 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಳು. 3ಆರ್‌ಡಿ ನ್ಯಾಶನಲ್ ಓಪನ್ ಚಾಂಪಿಯನ್ ಶಿಪ್ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. 5ನೇ ನ್ಯಾಶನಲ್ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ಚಂಡಿಗಡದಲ್ಲಿ ಪಂದ್ಯದಲ್ಲಿ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಳು.

ಸರಕಾರಿ ಶಾಲೆಯಂದರೇ ಮೂಗು ಮುರಿಯುವವರ ನಡುವೆ ಅದೇ ಸರಕಾರಿ ಶಾಲೆಯಲ್ಲಿ ಕಲಿತು ದೇಶದಲ್ಲಿ ಕೀರ್ತಿ ಪತಾಕೆ ಹಾರಿಸಿ, ತನ್ನೂರಿಗೆ ಮರಳಿರುವ ವಿದ್ಯಾರ್ಥಿನಿಗೆ ಆಕೆಯ ಗುರುಗಳಾದ ಕೆ.ಎಂ. ಮುನವಳ್ಳಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಿಯಾಂಕ ಭವಿಷ್ಯ ಉಜ್ವಲವಾಗಲಿ, ನಾಡಿನ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯನ್ನುಗಳಿಸಲಿ ಎಂದು ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತ ಮಠದ ಸದ್ಗುರು ಶ್ರೀ ಗುರು ಕುಮಾರ ವಿರೂಪಾಕ್ಷ ಸ್ವಾಮೀಜಿ ಆಶಿಸಿದರು.

ಪ್ರಿಯಾಂಕ ಸಾಧನೆಯನ್ನು ಮುಕ್ತಕಂಠದಿ0ದ ಕೊಂಡಾಡಿದ, ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಗೌರವಾಧ್ಯಕ್ಷ ಭೀಮಪ್ಪ ಕಾಸಾಯಿ, ಅಧ್ಯಕ್ಷ ಎಲ್.ಐ.ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಅಕ್ಬರಲಿ ಸೋಲಾಪುರ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಕೋಶಾಧ್ಯಕ್ಷ  ಅಜಿತಸಿಂಗ ರಜಪೂತ, ಸಂಸ್ಥೆಯ ಮಹಾಪೋಷಕ ಗುರುಪುತ್ರಪ್ಪ ಶಿರೋಳ, ವಿದ್ಯಾ ನಾಡಿಗೇರ, ಡಾ.ರೇಣುಕಾ ಅಮಲಜರಿ, ವಿ.ಎನ್. ಕೀರ್ತಿವತಿ, ವೈ.ಬಿ.ಕಡಕೋಳ, ಆರ್. ನಾರಾಯಣಸ್ವಾಮಿ ಚಿಂತಾಮಣಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಸಂಚಾಲಕರುಗಳು ಹಾಗೂ ಸರ್ವಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *