2ನೇ ಡಿವಿಜನ್ ಅರ್ಹತೆ ಪಡೆದ ವಿಬಿಸಿಎ, ಟಿಎಸ್‌ಸಿ
ಹುಬ್ಬಳ್ಳಿ: ಧಾರವಾಡದ ವಿಕಾಸ ಬೇಂದ್ರೆ ಕ್ರಿಕೆಟ್ ಅಕಾಡೆಮಿ(ವಿಬಿಸಿಎ) ಈ ಸಾಲಿನ ಕೆಎಸ್‌ಸಿಎ ೩ನೇ ಡಿವಿಜನ್ ಕ್ರಿಕೆಟ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಸೋಮವಾರ ನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ವಿಬಿಸಿಎ ಹುಬ್ಬಳ್ಳಿಯ ತಾನಾಜಿ ಸ್ಪೋರ್ಟ್ಸ ಕ್ಲಬ್ (ಟಿಎಸ್‌ಸಿ) ಎದರು 53 ಓಟಗಳಿಂದ ಜಯಗಳಿಸಿತು. ಎರಡು ತಂಡಗಳು ಮುಂದಿನ ಋತುವಿನಲ್ಲಿ 2ನೇ ಡಿವಿಜನ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡವು.
ಟಾಸ್ ಸೋತು ಬ್ಯಾಟಿಂಗ್‌ಗಿಗೆ ಇಳಿದ ವಿಬಿಸಿಎ ಸಾಯಿ ಶುಶೀಲ್ ರೆಡ್ಡಿ (89, 58ಎ,೭x4, 4×6) , ರಾಹುಲ್ ವರ್ಣೇಕರ(53, 41ಎ, 5×4, 1×6 ಸಿಕ್ಸರ್) ನೆರಿವಿನಿಂದ 29ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 202 ರ ಮೊತ್ತ ದಾಖಲಿಸಿತು. ಶಿವಶರಣ ಸಿ.(15ಕ್ಕೆ2) ಹಾಗೂ ಸಚಿನ್ ರೇವಣಕರ (35ಕ್ಕೆ2) ಟಿಎಸ್‌ಸಿ ಪರ ಯಶಸ್ವಿ ಬೌಲರ್‌ಗಳು. ಈ ಮೊತ್ತ ಬೆನ್ನು ಹತ್ತಿದ ಟಿಎಸ್‌ಸಿ ತಂಡದ ಪರ ಆಶ್ಪಕ್ ಎಂ.(70, 69ಎ, 6×4 ಬೌಂಡರಿ, 1×6) ಹಾಗೂ ಪ್ರಜ್ವಲ್ ಪ್ರಕಾಶ (38, 33ಎ, 5×4) 25.1 ಓವರ್‌ಗಳಲ್ಲಿ 149ಕ್ಕೆ ಆಲೌಟಾಯಿತು. ವಿಬಿಸಿಎ ಆದಿತ್ಯ ಮಣಿ (15ಕ್ಕೆ3), ಶ್ರೇಯಾಂಶ ನಾಗನೂರ(33ಕ್ಕೆ3)ವಿಕೆಟ್ ಪಡೆದರು.
ಈ ಟೂರ್ನಿಯಲ್ಲಿ 5ಲೀಗ್ ಪಂದ್ಯ, ಕ್ವಾಟರ್ ಪೈನ್‌ಲ್, ಸೆಮಿಫೈನಲ್ ಹಾಗೂ ಫೈನಲ್ ಸೇರಿದಂತೆ 8ಕ್ಕೆ 8 ಪಂದ್ಯವನ್ನು ಧಾರವಾಡದ ವಿಕಾಸ ಬೇಂದ್ರೆ ಕ್ರಿಕೆಟ್ ಅಕಾಡೆಮಿ ತಂಡ ಜಯಗಳಿಸಿತು.