ಬೆಳಗಾವಿಯ ಶ್ರೇಯಾ ಪೋತೆಗೂ ತಂಡದಲ್ಲಿ ಸ್ಥಾನ
ಹುಬ್ಬಳ್ಳಿ: ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನ ಆಟಗಾರ್ತಿ ರಿಮ್‌ಜಿಮ್ ಶುಕ್ಲಾ ಹಾಗೂ ಬೆಳಗಾವಿಯ ಶ್ರೇಯಾ ಪೋತೆ
ಬಿಸಿಸಿಐ 15 ವರ್ಷದೊಳಗಿನವರ ಬಾಲಕಿಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕೆಎಸ್‌ಸಿಎ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ರೈಲ್ವೆ ಉದ್ಯೋಗಿ ರಾಜದೇವ ಶುಕ್ಲಾ ಅವರ ಪುತ್ರಿ ರಿಮ್‌ಜಿಮ್ ರಾಜ್ಯ ತಂಡದಲ್ಲಿ ಉಪನಾಯಕಿ ಕೂಡಾ ಆಗಿದ್ದಾರೆ.

ಟೂರ್ನಿ ರಾಜ್‌ಕೋಟ್‌ನಲ್ಲಿ ಡಿ.26ರಿಂದ ಜ.3ರ ವರೆಗೆ ನಡೆಯಲಿದೆ. ತಂಡ ಇಂತಿದೆ: ವಂದಿತಾ ರಾವ್ (ನಾಯಕಿ), ರಿಮಜಿಮ್ ಶುಕ್ಲಾ (ಉಪನಾಯಕಿ), ಇಂಚರಾ ಸಿಯು, ಬಾವಿಕಾ ರೆಡ್ಡಿ, ಲಾವಣ್ಯ ಚಾಲನಾ, ಶ್ರೇಯಾ ಚವ್ಹಾಣ (ವಿಕೆಟ್ ಕಿಪರ್), ಆರ್.ಹರ್ಷಿತಾ, ಸಾಕ್ಷಿ ಮುನವಳ್ಳಿ, ವೇದ ವರ್ಷಿಣಿ, ಆರ್.ಪ್ರಜ್ಞಾ ವೀರ ಬ್ರಾಹ್ಮಿನಿ, ರಕ್ಷಿತಾ ಮೊದ್ರಾ, ಶ್ರೇಯಾ ಪೋತೆ, ಪ್ರೀಯಾ ಎಸ್ ಚವ್ಹಾಣ, ಶೈನಾ ಕಪೂರ, ಪ್ರಾರ್ಥನಾ ಎಸ್.

ತರಬೇತುದಾರರಾಗಿ ವಿನಿತಾ ವಿ.ಆರ್, ಪಿಜಿಯೋ ಪೂಜಾ ಎಸ್, ಸಹ ತರಬೇತುದಾರರಾಗಿ ಪ್ರೀತಿ ಬಿ ನಿಯುಕ್ತಿಗೊಂಡಿದ್ದಾರೆ.