ರಿಹಾನ್ ತಮಾಟಗಾರ, ಸಾಗರ ಕಮ್ಮಾರ ಮಾರಕ ಬೌಲಿಂಗ್
ಹುಬ್ಬಳ್ಳಿ: ಸಾಗರ ಕಮ್ಮಾರ, ರಿಹಾನ್ ತಮಾಟಗಾರ ಅವರ ಉತ್ತಮ ಬೌಲಿಂಗ್ ಹಾಗೂ ಮಹಾದೇವಗೌಡ ದೇಸಾಯಿ ಬ್ಯಾಟಿಂಗ್ ನೆರವಿನಿಂದ ’ಎಚ್ಸಿಎ ಕಪ್’ ಅಂತರ- ಕ್ಯಾಂಪ್ ಕ್ರಿಕೆಟ್ ಟೂರ್ನಿಯಲ್ಲಿ ಧಾರವಾಡ ಕ್ರಿಕೆಟ್ ಕ್ಲಬ್ ವಿರುದ್ಧ ಫಸ್ಟ್ ಕ್ರಿಕೆಟ್ ಅಕಾಡೆಮಿ 9ವಿಕೆಟ್ನಿಂದ ಜಯಗಳಿಸಿತು.
ಇಲ್ಲಿಯ ಜಿಮಖಾನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಧಾರವಾಡ ಕ್ರಿಕೆಟ್ ಕ್ಲಬ್ 21.1ಓವರನಲ್ಲಿ 50ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ತಂಡದ ಪರ ಅದಿತ್ಯ ಕೆ. 4 ಬೌಂಡರಿಗಳ (19ರನ್ 24ಎ). ಸಾಗರ ಕಮ್ಮಾರ 6-2-19-5, ರಿಹಾನ್ ತಮಾಟಗಾರ 6-4-9-3 ಬೌಲಿಂಗ್ನಲ್ಲಿ ಮಿಂಚಿದರು.
ಅಲ್ಪ ರನ್ ಬೆನ್ನು ಹತ್ತಿದ ಫಸ್ಟ್ ಕ್ರಿಕೆಟ್ ಅಕಾಡೆಮಿ 7.1ಓವರನಲ್ಲಿ 1ವಿಕೆಟ್ ಕಳೆದುಕೊಂಡು 53ರನ್ ಗಳಿಸಿ ಪಂದ್ಯ ತಮ್ಮದಾಗಿಸಿಕೊಂಡಿತು. ತಂಡದ ಪರ ಮಹಾದೇವಗೌಡ 5 ಬೌಂಡರಿ ಹೊಡೆದು (33ರನ್, 29ಎ) ಬ್ಯಾಟಿಂಗ್ ಬಲದಿಂದ ಜಯ ಗಳಿಸಿತು.
ಫಲಿತಾಂಶ: ಕ್ರಿಕೆಟ್ ಅಕಾಡೆಮಿಗೆ 9ವಿಕೆಟ್ ಗೆಲವು.
’ಎಚ್ಸಿಎ ಕಪ್’ ಸೆಮಿಪೈನಲ್ಗೆ ಎಸ್ಡಿಎಂಸಿಎ
ಹುಬ್ಬಳ್ಳಿ: ಉಜಿರ್ ಪೀರಜಾದೆ ಉತ್ತಮ ಬೌಲಿಂಗ್ ಹಾಗೂ ರಿಹಾನ್ ಸೈಯದ್ ಅವರ ಅರ್ಧ ಶತಕದ ನೆರವಿನಿಂದ ’ಎಚ್ಸಿಎ ಕಪ್’ ಅಂತರ- ಕ್ಯಾಂಪ್ ಕ್ರಿಕೆಟ್ ಟೂರ್ನಿಯಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ತಂಡದ ವಿರುದ್ಧ ಎಸ್ಡಿಎಂಸಿಎ ತಂಡ 7ವಿಕೆಟ್ನಿಂದ ಜಯ ಗಳಿಸಿ ಸೆಮಿಫೈನಲ್ ತಲುಪಿತು.
ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಸ್ಪೋರ್ಟ್ಸ್ 30ಓವರ್ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 123ರನ್ ಗಳಿಸಿತು. ತಂಡದ ಪರ ಅಮೃತ ರಾಘವ 5 ಬೌಂಡರಿಗಳ (28ರನ್, 51ಎ), ಎಂ.ಡಿ. ಹುಸೇನ್ 2 ಬೌಂಡರಿ(17ರನ್, 38ಎ). ಉಜಿರ ಪೀರಜಾದೆ 3-0-15-3, ಸಾಯಿ ಪೊಲಾರ್ಡ್ 5-0-24-2, ಹರ್ಷಿತ್ ಬಾಹುಬಲಿ 6-2-12-2.
ಈ ಮೊತ್ತ ಬೆನ್ನು ಹತ್ತಿದ ಎಸ್ಡಿಎಂಸಿಎ ತಂಡ 21.2ಓವರನಲ್ಲಿ 3 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿ ಪಂದ್ಯ ತನ್ನದಾಗಿಸಿಕೊಂಡಿತು. ತಂಡದ ಪರ ರಿಯಾನ್ ಸೈಯದ್ 8 ಬೌಂಡರಿಗಳ (56ರನ್, 61ಎ), ಹರ್ಷಿತ್ ಬಾಹುಬಲಿ 3 ಬೌಂಡರಿಗಳ (29ರನ್, 49ಎ). ಡಿಧಮ್ 3-0-18-2, ಸಮೃದ್ಧ ದೇಸಾಯಿ 3.2-0-17-1.
ಫಲಿತಾಂಶ: ಎಸ್ಡಿಎಂಸಿಎ ತಂಡಕ್ಕೆ 7ವಿಕೆಟ್ ಗೆಲವು.