ಸಂತೋಷ ಶೇರೆಗಾರ ಮುಖ್ಯ ತರಬೇತುದಾರ
ಹುಬ್ಬಳ್ಳಿ : ಶೆಫಾಲಿ ಶರ್ಮಾ ನೇತೃತ್ವದ ಭಾರತ ಮಹಿಳೆಯರ ತಂಡ 19ರ ವಯೋಮಿತಿಯ ಚೊಚ್ಚಲ ವಿಶ್ವಕಪ್ ಗೆದ್ದು ಮಹಿಳಾ ಕ್ರಿಕೆಟ್ ಕ್ರಾಂತಿ ಮಾಡಿದ್ದು ಇದೇ ಸಂದರ್ಭದಲ್ಲಿ ಮಹಿಳಾ ಕ್ರಿಕೆಟ್‌ಗೆ ಪ್ರೋತ್ಸಾಹ ಹಾಗೂ ಉತ್ತಮ ತರಬೇತಿ ನೀಡುವ ಉದ್ದೇಶದಿಂದ ವಾಣಿಜ್ಯ ರಾಜಧಾನಿಯ ವಿಜಯ ನಗರ ತಿರುಪತಿ ಬಜಾರ್ ಬಳಿಯಲ್ಲಿ ನೋಂದಾಯಿತ ಮಹಿಳಾ ಕ್ರಿಕೆಟ್ ಅಕಾಡೆಮಿಯೊಂದು ಅಸ್ಥಿತ್ವಕ್ಕೆ ಬಂದಿದೆ.
ಧಾರವಾಡ,ಬೆಳಗಾವಿ,ಹಾವೇರಿ, ಕಾರವಾರ, ಗದಗ ಜಿಲ್ಲೆಗಳನ್ನೊಳಗೊಂಡ ಧಾರವಾಡ ವಲಯದಲ್ಲಿ ಅಸ್ಥಿತ್ವದಲ್ಲಿ ಬಂದ ಮೊದಲ ಮಹಿಳಾ ಕ್ರಿಕೆಟ್ ಅಕಾಡೆಮಿ ಇದಾಗಿದೆ.
ಸಂತೋಷ ಕಾಮತ್ ಅಕಾಡೆಮಿಯ ಅಧ್ಯಕ್ಷರಾಗಿದ್ದು, ವೃಂದಾ ಶಾನಭಾಗ ಕಾರ್ಯದರ್ಶಿಯಾಗಿದ್ದಾರೆ.ಕೆಎಸ್‌ಸಿಎ ಅರ್ಹತೆ ಪಡೆದ ತರಬೇತುದಾರ ಹಾಗೂ ನಿರ್ಣಾಯಕರಾದ ಸಂತೋಷಕುಮಾರ ಶೇರೆಗಾರ ಅಕಾಡೆಮಿಯ ಮುಖ್ಯ ತರಬೇತುದಾರರಾಗಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿಯರು,ಮಹಿಳೆಯರು ಮೊಬೈಲ್ ಸಂಖ್ಯೆ 6361471182 ಗೆ ಸಂಪರ್ಕಿಸಬಹುದು.