ಹುಬ್ಬಳ್ಳಿ-ಧಾರವಾಡ ಸುದ್ದಿ
ಐಎಸ್‌ಎಫ್ ಕ್ರೀಡಾಕೂಟ: ಪ್ರಿಯಾಂಕಾಗೆ ಕಂಚು

ಐಎಸ್‌ಎಫ್ ಕ್ರೀಡಾಕೂಟ: ಪ್ರಿಯಾಂಕಾಗೆ ಕಂಚು

ಹುಬ್ಬಳ್ಳಿ: ಫ್ರ್ರಾನ್ಸ್‌ನಲ್ಲಿ ನಡೆದ 19ನೇ ಅಂತರರಾಷ್ಟ್ರೀಯ ಶಾಲಾ ಸ್ಫೋರ್ಟ್ಸ್ ಫೆಡರೇಶನ್ ಕ್ರೀಡಾಕೂಟದಲ್ಲಿ ಧಾರವಾಡ ತಾಲೂಕು ಮುಗಳಿ ಗ್ರಾಮದ ಅಥ್ಲೀಟಿ ಪ್ರಿಯಾಂಕಾ ಓಲೇಕಾರ ಕಂಚಿನ ಪಡೆದಿದ್ದಾರೆ.

ಪ್ರಿಯಾಂಕ ಓಲೇಕಾರ ಜೊತೆ ತರಬೇತುದಾರರಾದ ಶ್ಯಾಮಲಾ ಪಾಟೀಲ

ಪ್ರಿಯಾಂಕಾ ಶಾಟ್ ಮಿಡ್ಲ್ ರಿಲೆ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. 800ಮೀ ಓಟದ ವಿಭಾಗದಲ್ಲಿಯೂ ಭಾಗವಹಿಸಿದ್ದ ಪ್ರಿಯಾಂಕಾ ನಗರದ ಆರ್‌ಎನ್ ಶೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಅಭ್ಯಸುತ್ತಿದ್ದು, ಡಿವೈಇಎಸ್‌ಎಸ್ ಕ್ರೀಡಾ ನಿಲಯದಲ್ಲಿ ಅಥ್ಲೆಟಿಕ್ ಕೋಚ್ ಶ್ಯಾಮಲಾ ಪಾಟೀಲ ಅವರ ಬಳಿ ತರಬೇತಿ ಪಡೆದಿದ್ದಾರೆ.

ಕೋಚ್‌ಆಗಿ ತೆರಳಿದ್ದ ಶ್ಯಾಮಲಾ ಮತ್ತು ಪದಕ ಗಳಿಸಿದ ಪ್ರಿಯಾಂಕಾ ಅವರನ್ನು ಕ್ರೀಡಾಪ್ರೇಮಿಗಳು ಹಾಗೂ ಅಥ್ಲೆಟಿಕ ತರಬೇತಿದಾರರು ಸನ್ಮಾನಿಸಿದರು.

ಪ್ರಿಯಾಂಕಾ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ 400, 600 ಮತ್ತು 800 ಮೀ ಓಟದ ಸ್ಪರ್ಧೆಗಳಲ್ಲಿ ಒಂಬತ್ತು ಪದಕಗಳನ್ನು ಗೆಲುವು ಸಾಧಿಸಿದ್ದಾರೆ. ಐಎಸ್‌ಎಫ್ ಕ್ರೀಡಾಕೂಟಕ್ಕೆ ಭಾರತ ಬಾಲಕಿಯರ ತಂಡದ ಕೋಚ್‌ಆಗಿ ತೆರಳಿದ್ದ ಶ್ಯಾಮಲಾ ಮತ್ತು ಪದಕ ಗಳಿಸಿದ ಪ್ರಿಯಾಂಕಾ ಅವರನ್ನು ಕ್ರೀಡಾಪ್ರೇಮಿಗಳು ಹಾಗೂ ಅಥ್ಲೆಟಿಕ ತರಬೇತಿದಾರರು ಸನ್ಮಾನಿಸಿದರು.

ಅಕ್ಕ ಅನಿತಾಳೊಂದಿಗೆ ಪ್ರಿಯಂಕಾ
administrator

Related Articles

Leave a Reply

Your email address will not be published. Required fields are marked *