ಹುಬ್ಬಳ್ಳಿ-ಧಾರವಾಡ ಸುದ್ದಿ

ಸ್ನೇಹಪರ ಪಂದ್ಯದಲ್ಲಿ ಖಾಕಿ ತಂಡಕ್ಕೆ ಜಯ

ಹುಬ್ಬಳ್ಳಿ: ಪೊಲೀಸ್ ಕಮೀಷ್ನರೇಟ್ ವಾರ್ಷಿಕ ಕ್ರೀಡಾಕೂಟದಂಗವಾಗಿ ಇಂದು ನಡೆದ ಸ್ನೇಹಪರ ಪಂದ್ಯದಲ್ಲಿ ಪೊಲೀಸ್ ಇಲೆವನ್ ಮಾಧ್ಯಮ ಇಲೆವನ್ ವಿರುದ್ಧ 43ರನ್ನುಗಳ ಗೆಲುವು ದಾಖಲಿಸಿತು.


ನಗರದ ಬಿಡಿಕೆ ಮೈದಾನದಲ್ಲಿಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪೊಲೀಸ್ ತಂಡ ನಿಗದಿತ 12 ಓವರ್‌ಗಳಲ್ಲಿ 117ರನ್ನ ಗಳಿಸಿದರೆ ಮಾಧ್ಯಮ ಇಲೆವನ್ 74ರನ್‌ಗಳಿಸಲಷ್ಟೆ ಶಕ್ತವಾಯಿತು. ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ, ಆರ್ ಪಿಐ ಮಾರುತಿ ಹೆಗಡೆ ಬ್ಯಾಟಿಂಗ್‌ನಲ್ಲಿ ಮಿಂಚಿ ಶತಕದ ಗಡಿ ದಾಟಿಸಿದರೆ, ಎಸಿಪಿ ವಿನೋದ ಮುಕ್ತೆದಾರ, ಪಿಐಗಳಾದ ಆನಂದ ಒಣಕುದರೆ, ರಮೇಶ ಹೂಗಾರ ಉತ್ತಮ ಬೌಲಿಂಗ ಪ್ರದರ್ಶನ ನೀಡಿದರು.


ಪತ್ರಕರ್ತರ ಸಂಘದ ಪದಾಧಿಕಾರಿಗಳು, ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *