ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡ ವಲಯ ಸಮಸ್ಯೆ ಇತ್ಯರ್ಥಕ್ಕೆ ಕೆಎಸ್‌ಸಿಎಗೆ ಪತ್ರ

ಧಾರವಾಡ ವಲಯ ಸಮಸ್ಯೆ ಇತ್ಯರ್ಥಕ್ಕೆ ಕೆಎಸ್‌ಸಿಎಗೆ ಪತ್ರ

ಶೀಘ್ರ ಸಭೆ ಕರೆಯುವುದಾಗಿ ಕಾರ್ಯದರ್ಶಿ ಭರವಸೆ: ಕೆಎಸ್ ಸಿಎ ಧಾರವಾಡ ವಲಯ ಚೇರಮನ್ ವೀರಣ್ಣ ಸವಡಿ

ಹುಬ್ಬಳ್ಳಿ: ಧಾರವಾಡ ವಲಯದಲ್ಲಿನ ಸಮಸ್ಯೆಗಳನ್ನು ಒಂದು ವಾರದೊಳಗೆ ಬಗೆಹರಿಸುವಂತೆ ತಾವು ಕರ್ನಾಟಕ ರಾಜ್ಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಶಂಕರ ಅವರಿಗೆ ವಿನಂತಿಸಿರುವುದಾಗಿ ಕೆಎಸ್ ಸಿಎ ಧಾರವಾಡ ವಲಯ ಚೇರಮನ್ ವೀರಣ್ಣ ಸವಡಿ ಹೇಳಿದ್ದಾರೆ.

ವಲಯ ನಿಮಂತ್ರಕ ನಿಖಿಲ ಭೂಸದ ಅವರು ಕೆಎಸ್‌ಸಿಎ ನಿಯಮ ಗಾಳಿಗೆ ತೂರಿದ್ದಾರೆಂದು ಈಗಾಗಲೇ ಅನೇಕ ಆಟಗಾರ ಪಾಲಕರು ಕೋರ್ಟ ಮೆಟ್ಟಿಲು ಹತ್ತಿದ್ದು, ಅನೇಕ ವಿವಿಧ ಕ್ಲಬ್‌ಗಳ ಪ್ರಮುಖರು, ವಿವಿಧ ರಾಜಕೀಯ ಮುಖಂಡರು, ಬಹಿರಂಗವಾಗೇ ಮಾಧ್ಯಮಗೋಷ್ಠಿ ನಡೆಸಿ ಕೇವಲ ಬಿಡಿಕೆ ಫೌಂಡೇಶನ್ ಲಾಭಕ್ಕೆ ಬಳಕೆ ಮಾಡುತ್ತಿದ್ದಾರೆಂದು ಆರೋಪಿಸಿದ್ದು  ಸಮಸ್ಯೆ ಉಲ್ಬಣಗೊಂಡಿರುವ ಕಾರಣ ತಾವು ಮೇಲ್ ಮೂಲಕ ಎಲ್ಲ ವಿವರಗಳನ್ನು ಕೆಎಸ್‌ಸಿಎ ಕಾರ್ಯದರ್ಶಿಗೆ ಅಲ್ಲದೇ ವಲಯ ನಿಮಂತ್ರಕರಿಗೂ ಮನವಿ ಮಾಡಿದ್ದಲ್ಲದೇ ದೂರವಾಣಿಯ ಮೂಲಕ ವಿವರಿಸಿ ವಲಯ ಸಮಿತಿ ಸಭೆಯನ್ನು ಕರೆಯಲು ಒತ್ತಾಯಿಸಿದ್ದೇನೆ ಎಂದರು.

ಕೆಎಸ್ ಸಿಎ ಕಾರ್ಯದರ್ಶಿಯವರು ಆದಷ್ಟು ಬೇಗ ಎಲ್ಲ ಕ್ಲಬ್‌ಗಳ ಸದಸ್ಯರ ಸಭೆ ಕರೆದು ವಾಸ್ತವ ಪರಿಶೀಲಿಸಿ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಇಷ್ಟರಲ್ಲೇ ಸಭೆ ನಡೆಯಬಹುದು ಎಂದರು.

23, 19, ಅಲ್ಲದೇ 16ವರ್ಷದೊಳಗಿನ ಧಾರವಾಡ ಆಯ್ಕೆಯಲ್ಲಿ ಅನ್ಯಾಯವಾಗಿದೆಯೆಂದು ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳ ಪಾಲಕರು ಆರೋಪಿಸಿದ್ದು ಅಲ್ಲದೇ ಹಿರಿಯ ಕೋಚ್‌ಗಳು ಸಹಿತ ಬಹಿರಂಗವಾಗಿ ದಾಖಲೆ ಬಿಡುಗಡೆ ಮಾಡಿದ್ದು ಆಯ್ಕೆ ಕಮಿಟಿಯವರು ನಡೆಸಬೇಕಿರುವ ಆಯ್ಕೆಯಲ್ಲಿ ವಲಯ ನಿಮಂತ್ರಕ ಭೂಸದ ಯಾವುದೇ ಕಾರಣಕ್ಕೂ ಭಾಗಿಯಾಗಬಾರದೆಂಬ ನಿಯಮ ಇದೆ. ಆದರೆ, ಇದ್ಯಾವುದನ್ನು ಪರಿಗಣಿಸದೇ, ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಂಡು ತಮಗೆ ಬೇಕಾದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆನ್ನುವ ದೂರು ಕೇಳಿ ಬಂದಿದ್ದು ಇದು ನೇರವಾಗಿ ದೇಶದಲ್ಲೇ ಮಾದರಿ ಸಂಸ್ಥೆಯಾಗಿರುವ ಕೆಎಸ್‌ಸಿಎ ಇಮೇಜಿಗೂ ಧಕ್ಕೆ ತರುತ್ತಿರುವ ಕಾರಣ ಪತ್ರ ಬರೆದಿರುವುದಾಗಿ ಹೇಳಿದರು.

ಹಿಂದೆಯೂ ಧಾರವಾಡ ವಲಯದಲ್ಲಿ ಆಯ್ಕೆ ವಿಷಯದಲ್ಲಿ ಸಣ್ಣ ಪುಣ್ಣ ಅಸಮಾಧಾನಗಳು ಹೊಗೆಯಾಡುತ್ತಿದ್ದವಾದರೂ ಆದರೆ ಈ ಬಾರಿಯಷ್ಟು ಬಹಿರಂಗವಾಗಿ ಸ್ಪೋಟಗೊಂಡಿರಲಿಲ್ಲ. ಅವುಗಳನ್ನು ಅಲ್ಲಿಯೇ ಪದಾಧಿಕಾರಿಗಳು ವಾಸ್ತವ ಮುಂದಿಟ್ಟು ಬಗೆಹರಿಸುವ ಯತ್ನ ಮಾಡಿಸುತ್ತಿದ್ದರು. ಆದರೆ ಈ ಬಾರಿ ನಿಖಿಲ್ ಭೂಸದ ನಿಮಂತ್ರಕರಾದ ನಂತರ ಹಳಬರನ್ನು ದೂರಿಟ್ಟು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮ್ಮದೇ ಹಿಡಿತ ಸಾಧಿಸಲು ಮುಂದಾದುದು ಕೋರ್ಟ್ ಮೆಟ್ಟಿಲೇರುವಂತಾಗಿದ್ದು, ಗಂಡ ಹೆಂಡಿರ ಜಗಳದಲ್ಲಿ ಕೂಸೂ ಬಡವಾದಂತೆ ಅನೇಕ ಪ್ರತಿಭೆಗಳ ಮೇಲೆ ಇದು ಪರಿಣಾಮ ಬೀಳುವಂತಾಗಿದೆ.

administrator

Related Articles

Leave a Reply

Your email address will not be published. Required fields are marked *