ಸಾಗರ ಕಮ್ಮಾರ, ರಿಹಾನ್ ತಮಾಟಗಾರ ಆಲ್‌ರೌಂಡ್ ಆಟ
ಹುಬ್ಬಳ್ಳಿ: ಸಾಗರ ಕಮ್ಮಾರ 8-4-18-5, ಸಂದೀಪ ಎನ್ 1-0-5-2, ರಿಹಾನ್ ತಮಾಟಗಾರ 8-5-8-1 ಅವರ ಉತ್ತಮ ಆಲ್‌ರೌಂಡ್ ಆಟದಿಂದ ಶ್ರೀ ಸಿದ್ದಾರೂಡ ಸ್ವಾಮಿ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ವಿಲಾಸ ಬೇಂದ್ರೆ ಕ್ರಿಕೆಟ್ ಅಕಾಡೆಮಿ 93ರನ್‌ಗಳಿಂದ ಜಯ ಸಾಧಿಸಿತು.
ಇಲ್ಲಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಈ ಸಾಲಿನ 14 ವರ್ಷದೊಳಗಿನ ಕೆಎಸ್‌ಸಿಎ ಧಾರವಾಡ ವಲಯದ ಇಂಟರ್ ಕ್ಲಬ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ವಿಲಾಸ ಬೇಂದ್ರ ಕ್ರಿಕೆಟ್ ಅಕಾಡೆಮಿ ತಂಡ 35.1ಓವರನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 136 ರನ್ ಗಳಿಸಿತು. ತಂಡದ ಪರ ಸಾಗರ ಕಮ್ಮಾರ 25(39ಎ, 2×4), ರಿಹಾನ್ ತಮಾಟಗಾರ 21(24ಎ, 3×4), ಅಮಿತ್ ದಾಸ 15(38ಎ, 1×4), ಆದರ್ಶ ಎಚ್. 10-1-34-4, ಮುಸ್ತಾಫಜೀ.ಕೆ 10-1-42-3, ಮೆಹರಾನ್ ಎನ್.7.1-1-26-2 ವಿಕೆಟ್ ಪಡೆದರು.
ಈ ರನ್ ಬೆನ್ನು ಹತ್ತಿದ ಶ್ರೀ ಸಿದ್ದಾರೂಡ ಸ್ವಾಮಿ ಸ್ಪೋರ್ಟ್ಸ್ ಕ್ಲಬ್ 20.1ಓವರನಲ್ಲಿ 43ರನ್‌ಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು. ತಂಡದ ಪರ ಪಿ.ವಿರೇನ್ 11ರನ್ ಗಳಿಸಿದರು. ಸಾಗರ ಕಮ್ಮಾರ 8-4-18-5, ಸಂದೀಪ ಎನ್ 1-0-5-2, ರಿಹಾನ್ ತಮಾಟಗಾರ 8-5-8-1, ರೀತ್ ಜೈನ್ 3-0-9-1ಅವರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಸಿಗ್ನೇಚರ್ ಸ್ಪೋರ್ಟ್ಸ್ ಕ್ಲಬ್‌ಗೆ ಜಯ: ಮತ್ತೊಂದು ಪಂದ್ಯದಲ್ಲಿ ನೀತಿನ್ ಪುಷ್ಕರ್ 7-3-19-6, ಸಮರ್ಥ ಪಾಟೀಲ 54 (93ಎ, 5×4), ಆದಿತ್ಯ ಜಾಧವ 47(90ಎ, 2 x4) ಅವರ ಉತ್ತಮ ಆಟದಿಂದ ಆನಂದ ಕ್ರಿಕೆಟ್ ಕೋಚಿಂಗ್ ಅಕಾಡೆಮಿ ವಿರುದ್ಧ ಸಿಗ್ನೇಚರ್ ಸ್ಪೋರ್ಟ್ಸ್ ಕ್ಲಬ್ 109ರನ್‌ಗಳಿಂದ ಜಯ ಗಳಿಸಿತು.
ಮೊದಲ ಬ್ಯಾಟಿಂಗ್ ಮಾಡಿದ ಸಿಗ್ನೇಚರ್ ಸ್ಪೋರ್ಟ್ಸ್ ಕ್ಲಬ್ 49.4ಓವರನಲ್ಲಿ 9ವಿಕೆಟ್ ಕಳೆದುಕೊಂಡು 213ರನ್ ಗಳಿಸಿದರು. ತಂಡದ ಪರ ಸಮರ್ಥ ಪಾಟೀಲ 54 (93ಎ, 5×4), ಆದಿತ್ಯ ಜಾಧವ 47(90ಎ, 2 x4), ಜಿ.ವಿ.ವಿಶೇಷ 10-0-30-3, ಶಲೋಕ್ ಚಡಿಚಾಳ 10-1-23-02, ಶ್ರೀ ಬೋಸಲೆ 5.4-0-27-2 ವಿಕೆಟ್ ಪಡೆದರು.
ಈ ಬೃಹತ್ ರನ್ ಬೆನ್ನು ಹತ್ತಿದ ಆನಂದ ಕ್ರಿಕೆಟ್ ಕೋಚಿಂಗ್ ಅಕಾಡೆಮಿ 36.1ಓವರನಲ್ಲಿ 104ರನ್‌ಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು. ತಂಡದ ಪರ ಉತ್ತರೇಶ ಜಾಹಾ 29(99ಎ, 4 x4), ಸುರಜ್ ಮಂಗಾವ್ 19(50ಎ, 2 x4), ನೀತಿನ್ ಪುಷ್ಕರ್ 7-3-19-6, ಸಮರ್ಥ ಪಾಟೀಲ, ಸಮರ್ಥ ಕೊಂಕಣಿ, ಅಥರ್ವ ಕರಾಡೆ ತಲಾ ಒಂದು ವಿಕೆಟ್ ಪಡೆದುಕೊಂಡರು.