ಧಾರವಾಡ: ಇಲ್ಲಿಯ ಎಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸೋಮವಾರದಿಂದ ಆರಂಭವಾದ ಮಹಮ್ಮದ್ ಅತ್ತಾರ ಅವರ ಸ್ಮರಣಾರ್ಥ ನಡೆದ 14 ವರ್ಷದೊಳಗಿನ ಅಂತರ ಕ್ಯಾಂಪ್‌ಗಳ ಆಹ್ವಾನಿತ ಕ್ರಿಕೆಟ್ ಟೂರ್ನಿಗೆ ಉದ್ಯಮಿ ಗಿರೀಶ ಬಣವಿ ಚಾಲನೆ ನೀಡಿದರು.
ನಂತರ ಮಾತನಾಡಿ, ಆಟದಲ್ಲಿ ಸೋಲು ಗೆಲವು ಸಾಮಾನ್ಯ. ಕ್ರೀಡಾಮನೋಭಾವದಿಂದ ಟೂರ್ನಿಯಲ್ಲಿ ಭಾಗವಹಿಸಿ. ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಆಟಗಾರರರು ಆರೋಗ್ಯದ ಹೆಚ್ಚು ಗಮನವಹಿಸಲು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಹಿರಿಯ ಕ್ರಿಕೆಟ್ ಆಟಗಾರ ವಸಂತ ಮುರ್ಡೇಶ್ವರ ಮಾತನಾಡಿ, ಮಹಮ್ಮದ್ ಅತ್ತಾರ ಒಬ್ಬ ಒಳ್ಳೆಯ ಆಟಗಾರ ಹಾಗೂ ಉತ್ತಮ ತರಬೇತುದಾರರಾಗಿದ್ದರು. ಅವರ ಸ್ಮರಣಾರ್ಥ ಈ ಟೂರ್ನಿ ಏರ್ಪಡಿಸಿದ್ದು ಒಬ್ಬ ಕ್ರಿಕೆಟ್ ಆಟಗಾರ ಸಂದ ಗೌರವ. ಈ ಕಾರ್ಯವನ್ನು ಎಸ್‌ಡಿಎಂಸಿಎ ಅಕಾಡೆಮಿ ಮಾಡಿದ್ದು ಒಳ್ಳೆಯ ಕೆಲಸ ಎಂದು ಹೇಳಿದರು.
ಅಲ್ಲದೇ ಮಹಮ್ಮದ್ ಅತ್ತಾರ ಅವರ ಒಡನಾಟದ ಬಗ್ಗೆ ಸವಿವರವಾಗಿ ತಿಳಿಸಿದರು. ಟೂರ್ನಿಗೆ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.
ಮಹಮ್ಮದ್ ಅತ್ತಾರ ಅವರ ಪತ್ನಿ ಸಬೀನಾ, ಪುತ್ರರಾದ ಮಹಮ್ಮದ್ ಸಾಕೀಬ್, ಮಹಮ್ಮದ್ ಮೂವಿಜ್, ಮಹಮ್ಮದ್ ಜಕೀರಿಯಾ, ದೈಹಿಕ ನಿರ್ದೇಶಕ ಡಾ.ಕೆ.ಮಂಜುನಾಥ, ಪತ್ರಕರ್ತ ಪ್ರಸನ್ನಕುಮಾರ ಹಿರೇಮಠ, ತರಬೇತುದಾರರಾದ ಶಿವಾಜಿ ವಡ್ಡರ, ಹಬೀಬ ತಾಡಪತ್ರಿ, ಅಜೀಮ್, ವಿನಯ ಅರಳಿಕಟ್ಟಿ, ಹನುಮಂತ ಮಂಗಲಿ, ಕಾಶೀಮ, ಮಲ್ಲಿಕಜಾನ್ ನರೇಗಲ್ ಸೇರಿದಂತೆ ಆಟಗಾರರು ಹಾಗೂ ಪಾಲಕರು ಇದ್ದರು.
ಇಮ್ರಾನ್ ಖಾನ್ ಕಾರ್ಯಕ್ರಮ ನಿರೂಪಿಸಿದರು. ರಾಜು ಕಲಾಲ ವಂದಿಸಿದರು.