ಹುಬ್ಬಳ್ಳಿ: ಮೈಸೂರಲ್ಲಿ ದಿ. 7ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ಆರಂಭಗೊಳ್ಳಲಿರುವ ಮಹಾರಾಜ ಟ್ರೋಫಿ ಟಿ೨೦ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಮಂಗಳೂರು ಯುನೈಟೆಡ್ ವಿರುದ್ಧ ಸೆಣಸಲಿದೆ ಎಂದು ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೆನನ್ ಪತ್ರಿಕಾಗೋಷ್ಠಿಯಲ್ಲಿ ಇಂದು ಟ್ರೋಫಿ ಅನಾವರಣಗೊಳಿಸುವ ಮೊದಲು ಮಾತನಾಡಿದರು.
ಹುಬ್ಬಳ್ಳಿ ಟೈಗರ್ಸ್ ತಂಡವು ಸ್ಟಾರ್ ಆಟಗಾರರಿಂದ ಕೂಡಿದ್ದು, ಮಾಜಿ ಕ್ರಿಕೆಟಿಗೆ ದೀಪಕ್ ಚೌಗಲೆ ಅವರು ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ತರಬೇತಿ ನೀಡಿದ್ದು, ಸಹಾಯಕ ಕೋಟ್ ರಾಜು ಭಟ್ಕಳ ಮತ್ತು ಆಯ್ಕೆಗಾರ ಆನಂದ ಕಟ್ಟಿ ಮಾರ್ಗದರ್ಶನಲ್ಲಿ ಅಭಿಮನ್ನು ಮಿಥುನ್ ಮತ್ತು ಅವನೀತ್, ಸಿಸೋಡಿಯಾ ಅವರನ್ನೊಳಗೊಂಡ ಬಲಿಷ್ಟ ತಂಡ ಇದಾಗಿದ್ದು, ತಂಡಕ್ಕೆ ಜಿಂದಾಲ್ ಸ್ಟೀಲ್ಸ್ ಟೂರ್ನಿಗೆ ಸಂಪೂರ್ಣ ಬೆಂಬಲ ನೀಡಿದೆ ಎಂದರು.
ಮೈಸೂರಿನಲ್ಲಿ ಮೊದಲ ಹಂತದಲ್ಲಿ 18 ಪಂದ್ಯಗಳು ನಡೆಯಲಿದ್ದು, ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯಲಿವೆ ಎಂದು ತಿಳಿಸಿದರು.
ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಟೈಟಲ್ ಪ್ರಾಯೋಜಕತ್ವವನ್ನು ಶ್ರೀರಾಮ್ ಗ್ರೂಪ್ ವಹಿಸಲಿದೆ, ಈ ಋತು ಸೇರಿದಂತೆ ಒಟ್ಟು ಮೂರು ಋತುಗಳಿಗೆ ಶ್ರೀರಾಮ್ ಗ್ರೂಪ್ ಪ್ರಾಯೋಜಕತ್ಯ, ವಹಿಸಲಿದೆ ಎಂದರು.
ಮೂರು ವಾರಗಳ ಪರ್ಯಂತ ನಡೆಯುವ ಟಿ20 ಕ್ರಿಕೆಟ್ ಹಬ್ಬದ ಪ್ರಾಯೋಜಕವನ್ನು ಸ್ಮಾರ್‌ಸ್ಟೋರ್ಟ್ಸ್ ಮತ್ತು ಕಾನ್ ಸಿಟ್ ಕನ್ನಡದಲ್ಲಿ ನೇರಪ್ರಸಾರವಾಗಲಿದೆ, ಹೆಚ್ಚಿನ ಪ್ರಮಾಣದ ಬಳಕೆಗಾಗಿ ಫ್ಯಾನ್‌ಕೋಡ್ ಆಪ್‌ನಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದರು.
ಕೆಎಸ್‌ಸಿಎ ಸದಸ್ಯ ಜಯಸಿಂಹ ಮೆನನ್, ಧಾರವಾಡ ವಲಯ ನಿಮಂತ್ರಕ ಅವಿನಾಶ ಪೊದ್ದಾರ್, ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ವೀರಣ್ಣ ಸವಡಿ, ಕೆಎಸ್‌ಸಿಎ ಎಂಸಿ. ಸದಸ್ಯ ಶಶಿಧರ, ಧಾರವಾಡ ವಲಯದ ಸಂಚಾಲಕ ಮುರಳಿಧರ, ಶಿವಾನಂದ ಗುಂಜಾಳ, ಕೆಎಸ್‌ಸಿಎ ಸದಸ್ಯರಾದ ಅಲ್ತಾಫ್ ನವಾಜ್ ಕಿತ್ತೂರ, ವಸಂತ ಮುರ್ಡೇಶ್ವರ ಇನ್ನಿತರರಿದ್ದರು.
ಹುಬ್ಬಳ್ಳಿ ಟೈಗರ್ಸ್ ತಂಡ:
ದೀಪಕ್ ಚೌಗಲೆ (ಕೋಚ್), ರಾಜು ಭಟ್ಕಳ (ಸಹಾಯಕ ಕೋಚ್), ಆನಂದ್ ಕಟ್ಟಿ (ಆಯ್ಕೆಗಾರ), ಶಶಿಕುಮಾರ್ (ವೀಡಿಯೊ ಎನಾಲಿಸ್ಟ್), ಅಭಿಮನ್ಯು ಮಿಥುನ್, ಲವನಿಚ್ ಸಿಸೋಡಿಯಾ, ಕೌಶಿಕ್ ವಿ, ಲಿಯಾನ್ ಖಾನ್, ನವಿನ್ ಎಂ.ಜಿ, ಆನಂದ್ ದೊಡಮನಿ, ಶಿವಕುಮಾರ್ ಬಿ.ಯು, ತುಷಾರ್ ಸಿಂಗ್, ಅಕ್ಷನ್ ರಾವ್, ಜಹೂರ್ ಫರೂಕಿ, ರೋಹನ್ ನವೀನ್, ಸೌರವ್ ಶ್ರೀವಾಸ್ತವ್, ಸಾಗರ್ ಸೊಲಾಂಕಿ, ಗೌತಮ್ ಸಾಗರ್, ರೋಶನ್ ಎ., ರಾಹುಲ್ ಸಿಂಗ್ ರಾವತ್, ಶಿಶಿರ್ ಭವಾನೆ, ಶರಣಗೌಡ, ನಿರ್ಮಿತ್ ಶಶಿಧರ, ಸ್ವಪ್ನಿಲ್ ಎಲಾವೆ.