ರೋಹಿತಕುಮಾರ ಮಂಗಳೂರು ಯುನೈಟೆಡ್ ಪಾಲು
ಹುಬ್ಬಳ್ಳಿ : ದಿ. 7ರಿಂದ ಮಹಾರಾಜ ಟ್ರೋಫಿ ಚುಟುಕು ಕ್ರಿಕೆಟ್ ಸಮರ ಆರಂಭಗೊಳ್ಳಲಿದ್ದು (ಎಂಪಿಎಲ್) ನಾಳೆ ಹುಬ್ಬಳ್ಳಿಯಲ್ಲಿ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯುತ್ತಿದ್ದು ಹುಬ್ಬಳ್ಳಿಯ ಮತ್ತೊಬ್ಬ ಆಟಗಾರ ಮಂಗಳೂರು ಯುನೈಟೆಡ್ ತಂಡದಲ್ಲಿ ಸ್ಥಾನ ಪಡೆದಿದ್ದಾನೆ.
ಈಗಾಗಲೇ ಸಿ.ಕೆ.ನಾಯ್ಡು ಟ್ರೋಫಿಯಲ್ಲಿ ಆಡಿರುವ ಹುಬ್ಬಳ್ಳಿ ಸ್ಪೋರ್ಟ್ಸ ಕ್ಲಬ್ ಪರ ಕಳೆದ ೬ ವರ್ಷದಿಂದ ಆಡುತ್ತಿರುವ ಎಡಗೈ ಸ್ಪಿನ್ ಬೌಲರ್ ರೋಹಿತ ಕುಮಾರ ಎಸಿ ಆಯ್ಕೆಯಾದ ಆಟಗಾರನಾಗಿದ್ದಾರೆ. ಅಶೋಕನಗರ ನಿವಾಸಿಯಾದ ರೋಹಿತ್ ಧಾರವಾಡ ಜೆಎಸ್ ಎಸ್ ಕಾಲೇಜಲ್ಲಿ ಬಿಕಾಂ ಓದುತ್ತಿದ್ದಾನೆ.
ಕೆಪಿಎಲ್ ಮಾದರಿಯಲ್ಲೇ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯಾವಳಿ ನಡೆಯುತ್ತಿದ್ದು ಮಹಾರಾಜಾ ಟ್ರೋಪಿಯಲ್ಲಿ ಭಾಗವಹಿಸಲಿರುವ ೬ ತಂಡಗಳಲ್ಲೊಂದಾದ ಮಂಗಳೂರು ಯುನೈಟೆಡ್ ಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆಟಗಾರರ ಡ್ರಾಪ್ಟ್ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದಾರೆ. ಕರಾವಳಿ ತಂಡದಲ್ಲಿ ತಂಡದಲ್ಲಿ ಅಭಿನವ ಮನೋಹರ, ಆರ್.ಸಮರ್ಥ ಅಮಿತ ವರ್ಮಾ,ಅನೀಶ್ವರ ಗೌತಮ ಸಹಿತ ಉತ್ತಮ ಆಟಗಾರರ ದಂಡೆ ಇದೆ.
ಹುಬ್ಬಳ್ಳಿಯ ಪ್ರತಿಭೆ ರಾಜ್ಯಮಟ್ಟದ ಪ್ರತಿಷ್ಠಿತ ಚುಟುಕು ಕ್ರಿಕೆಟ್ ಸಮರಕ್ಕೆ ಆಯ್ಕೆಯಾಗಿದ್ದು ಈಗಾಗಲೇ ರಾಜೇಂದ್ರ ಡಂಗನವರ, ನಿತಿನ್ ಬಿಲ್ಲೆ, ಶಿಶಿರ ಭವಾನೆ ಮುಂತಾದವರು ಎಂಪಿಎಲ್ ಸಮರದಲ್ಲಿ ಸ್ಥಾನ ಪಡೆದಿದ್ದಾರೆ.
ರೋಹಿತ್ ಮಂಗಳೂರು ತಂಡಕ್ಕೆ ಆಯ್ಕೆ ಆಗಿರುವುದು ನಿಜಕ್ಕೂ ಖುಷಿ ತಂದಿದೆ. ಹುಬ್ಬಳ್ಳಿ ಸ್ಪೋರ್ಟ್ಸ ಕ್ಲಬ್‌ದಲ್ಲಿ ಉತ್ತಮವಾಗಿ ಆಡಿ ಸಾಧನೆ ಮಾಡಿದ್ದಲ್ಲದೇ ಸಿ.ಕೆ.ನಾಯ್ಡು ಟ್ರೋಪಿಯಲ್ಲೂ 24 ವಿಕೆಟ್ ಕಬಳಿಸಿ ಸಾಮರ್ಥ್ಯ ಸಾಭೀತುಪಡಿಸಿದ್ದು ಇಲ್ಲಿಯೂ ಉತ್ತಮ ಸಾಧನೆ ಮಾಡಬಹುದಾಗಿದೆ.
ವೀರಣ್ಣ ಸವಡಿ
ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು