ರಿಹಾನ್ ಐಟಿ ಆಲ್ರೌಂಡರ್ ಆಟ
ಹುಬ್ಬಳ್ಳಿ: ರಿಹಾನ್ ತಮಾಟಗಾರ (37ರನ್, 45 ಎ) ಹಾಗೂ 6-2-18-2 ವಿಕೆಟ್ ಪಡೆದು ಆಲ್ರೌಂಡರ್ ಆಟದ ನೆರವಿನಿಂದ ’ಎಚ್ಸಿಎ ಕಪ್’ ಅಂತರ- ಕ್ಯಾಂಪ್ ಕ್ರಿಕೆಟ್ ಟೂರ್ನಿಯಲ್ಲಿ ಎಸ್ಡಿಎಂಸಿಎ ತಂಡದ ವಿರುದ್ಧ ಫಸ್ಟ್ ಕ್ರಿಕೆಟ್ ಅಕಾಡೆಮಿ 37ರನ್ಗಳಿಂದ ಜಯ ಗಳಿಸಿ ಫೈನಲ್ ತಲುಪಿತು.
ಇಲ್ಲಿಯ ಜಿಮಖಾನ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಫಸ್ಟ್ ಕ್ರಿಕೆಟ್ ಅಕಾಡೆಮಿ 30ಓವರನಲ್ಲಿ 136/5 ರನ್ ಗಳಿಸಿತು. ತಂಡದ ಪರ ರಿಹಾನ್ ತಮಾಟಗಾರ 5 ಬೌಂಡರಿಗಳ (37ರನ್, 45 ಎ), ರಾಹುಲ ದೇವ್ ಸಿಂಗ್ 2ಬೌಂಡರಿ, (28ರನ್, 26ಎ), ಮಹಾದೇವಗೌಡ 3 ಬೌಂಡರಿ (24ರನ್ 29ಎ). ಉತ್ತಮ ಆಟವಾಡಿದರು.
ಈ ರನ್ ಬೆನ್ನು ಹತ್ತಿದ ಎಸ್ಡಿಎಂಸಿಎ ತಂಡ 22.1 ಓವರನಲ್ಲಿ 99 ರನ್ಗಳಿಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು. ಫಸ್ಟ್ ಕ್ರಿಕೆಟ್ ಅಕಾಡೆಮಿ ರಿಹಾನ್ ತಮಾಟಗಾರ 6-2-18-2, ಸಾಗರ ಕಮ್ಮಾರ 6-0-20-2, ಪ್ರಜ್ವಲ 3.1-0-13-2 ಉತ್ತಮ ಬೌಲಿಂಗ್ ಮಾಡಿದರು.
ಫಲಿತಾಂಶ: ಫಸ್ಟ್ ಕ್ರಿಕೆಟ್ ಅಕಾಡೆಮಿ 37 ರನ್ಗಳಿಂದ ಜಯ