ಹುಬ್ಬಳ್ಳಿ: ಕಳೆದ ದಿ. 13ರಿಂದ 17ರವರೆಗೆ ನಡೆದ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ವರ್ಲ್ಡ ಮಿನಿ ಫೆಸ್ಟಿವಲ್ನಲ್ಲಿ ಪಾಲ್ಗೊಂಡ ರೋಟರಿ ಇಂಟರನ್ಯಾಶನಲ್ ಡಿಸ್ಟ್ರಿಕ್ಟ್ 3170ರ ಹುಬ್ಬಳ್ಳಿ ಧಾರವಾಡ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.
ಪಂದ್ಯಾವಳಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿ ಉತ್ತಮ ಸಾಧನೆ ಮಾಡಿತು.ಶ್ರೀಲಂಕಾ, ನೇಪಾಳಬಾಂಗ್ಲಾ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿದ್ದವು.
ಸುಮೇರಮಲ್ ಓಸ್ತವಾಲ್ ನೇತೃತ್ವದ ತಂಡದಲ್ಲಿ ಸಂಜಯ ಇಂಗಳೆ, ಪ್ರಕಾಶ ಇರಕಲ್, ಗುರದೀಪ್ ಸಿಂಗ್, ಜಯಂತಿಲಾಲ್, ಶಿವಾನಂದ ಗುಂಜಾಳ, ಕೌಸ್ತುಭ ಸಂಶಿಕರ, ಬಸವರಾಜ ಕಲ್ಯಾಳ, ರವಿ ಮುಧೋಳ, ಶಿವಣ್ಣ ಪಾಟೀಲ, ವಿಶ್ವನಾಥ ನಾಯಕ, ರಾಜು ಕರೂರ, ನರಸಿಂಹಮೂರ್ತಿ, ಸುಶೀಲ ಕಾಟ್ಕರ್, ಅರುಣ ಹೆಬ್ಲೀಕರ ಮುಂತಾದವರಿದ್ದರು.