ಹುಬ್ಬಳ್ಳಿ-ಧಾರವಾಡ ಸುದ್ದಿ

ಮಕ್ಕಳ ಮೇಲೆ ಒತ್ತಡ ಹೇರಬೇಡಿ: ಅಭಿಜಿತ್ ಬೆಂಗೇರಿ

ಎಸ್‌ಡಿಎಂಸಿಎ 24ನೇ ಬೇಸಿಗೆ ಶಿಬಿರ ಸಮಾರೋಪ

ಧಾರವಾಡ: ಮಕ್ಕಳಿಗೆ ಯಾವುದೇ ತರಹದ ಒತ್ತಡ ಹೇರಬೇಡಿ ಎಂದು ಬಿಸಿಸಿಐ ನಿರ್ಣಾಯಕರಾದ ಅಭಿಜಿತ್ ಬೆಂಗೇರಿ ಪಾಲಕರಿಗೆ ಕಿವಿಮಾತು ಹೇಳಿದರು.
ಎಸ್‌ಡಿಎಂಸಿಎ 24ನೇ ವಾರ್ಷಿಕ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,
ಮತ್ತೊಬ್ಬರೊಂದಿಗೆ ಎಂದೂ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡಬೇಡಿ. ಬೇರೆ ಯಾವುದೇ ಕ್ಷೇತ್ರ ಸೋಲನ್ನು ಕಲಿಸಲ್ಲ. ಆದರೆ ಕ್ರಿಕೆಟ್ ಆಟ ಮಾತ್ರ ನಿಮಗೆ ಸೋಲು ಹಾಗೂ ಗೆಲುವು ಕಲಿಸುತ್ತದೆ ಎಂದರು.


ಕಠಿಣ ಪರಿಶ್ರಮಕ್ಕೆ ಯಾವಾಗಲು ಜಯ ಸಿಗುತ್ತದೆ. ಆದ್ದರಿಂದ ನೀವು ಯಾವುದೇ ಕೆಲಸ ಮಾಡಿ ಅದಕ್ಕೆ ಕಠಿಣ ಶ್ರಮ ವಹಿಸಿ ಎಂದು ಕಿವಿಮಾತು ಹೇಳಿದ ಅವರು, ಪಾಲಕರು ಮಕ್ಕಳ ಆಟಕ್ಕೂ ಹಾಗೂ ಪಾಠಕ್ಕೂ ಸಮಾನ ಆದ್ಯತೆ ನೀಡಬೇಕು. ನೀವು ಜೀವನದಲ್ಲಿ ಯಾವುದೇ ವಸ್ತು ಕಳೆದುಕೊಂಡದ್ದನ್ನು ಹುಡಕಬಹುದು. ಆದರೆ ಸಮಯ ಮಾತ್ರ ಮತ್ತೆ ಪಡೆಯಲು ಆಗಲ್ಲ. ಆದ್ದರಿಂದ ಸಮಯಕ್ಕೆ ಹೆಚ್ಚು ಮಹತ್ವ ನೀಡಿ ಎಂದು ಹೇಳಿದರು.


ಎಸ್‌ಡಿಎಂ ಸೊಸೈಟಿಯ ಉಪಾಧ್ಯಕ್ಷ ಜೀವೇಂದ್ರಕುಮಾರ ಮಾತನಾಡಿ, ಬರುವ ವರ್ಷ ತಮ್ಮ ಅಕಾಡೆಮಿಗೆ ಬೆಳ್ಳಿ ಸಂಭ್ರಮ. ಅದಕ್ಕೆ ಆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡೋಣ. ಅದಕ್ಕೆ ಸಂಸ್ಥೆಯಿಂದ ಬೇಕಾದ ಎಲ್ಲ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಎಸ್‌ಡಿಎಂ ಎಂಜಿನಿಯರ್ ಕಾಲೇಜು ಪ್ರಿನ್ಸಿಪಾಲ ಡಾ.ಗೋಪಿನಾಥ ಮಾತನಾಡಿ, ಕ್ರಿಕೆಟ್ ಮೈದಾನವೇ ಒಂದು ಗುಡಿ ಇದ್ದ ಹಾಗೆ. ಇಲ್ಲಿ ನೀವು ಶಿಸ್ತು ಪಾಲನೆ ಹಾಗೂ ತರಬೇತುದಾರರು ಕಲಿಸಿದ್ದನ್ನು ಶ್ರದ್ಧೆಯಿಂದ ಕಲಿಯಿರಿ ಎಂದು ಕಿವಿಮಾತು ಹೇಳಿದರು.


ಎಸ್‌ಡಿಎಂ ಸೊಸೈಟಿಯ ಮ್ಯಾನೇಜರ್ ಪ್ರಶಾಂತ ಉಪಾಧ್ಯ, ಎಸ್‌ಡಿಎಂ ಎಂಜಿನಿಯರ್ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಎಸ್‌ಡಿಎಂಸಿಎ ಕಾರ್ಯದರ್ಶಿ ಡಾ. ಮಂಜುನಾಥ ಇದ್ದರು. ಎಸ್‌ಡಿಎಂಸಿಎ ಜಂಟಿ ಕಾರ್ಯದರ್ಶಿ ನಿತೀನ್ ಬಿಲ್ಲೆ ವಾರ್ಷಿಕ ವರದಿ ವಾಚಿಸಿದರು. ಹಿರಿಯ ತರಬೇತುದಾರ ಶಿವಾಜಿ ವಡ್ಡರ ಅತಿಥಿಗಳನ್ನು ಪರಿಚಯಿಸಿದರು.


ಶಿಬಿರದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಅಕಾಡೆಮಿ ತರಬೇತುದಾರರಾದ ಹಬೀಬ ತಾಡಪತ್ರಿ, ಹನುಮಂತ ಮಾಂಗಲೆ, ಮಲ್ಲಿಕಜಾನ್ ನರೇಗಲ್, ಆದರ್ಶ ಹಿರೇಮಠ, ಆದಿತ್ಯ ಹಿರೇಮಠ, ಕಾಸೀಮ್ ಅಲಿ, ಪಾಲಕರಾದ ಶಂಕರಗೌಡ ಪಾಟೀಲ, ಪೀರಜಾಧೆ ಸೇರಿದಂತೆ ಇತರರಿದ್ದರು.
ಹಿರಿಯ ಆಟಗಾರ ಭರತ ಇಟಗಿ ಕಾರ್ಯಕ್ರಮ ನಿರೂಪಿಸಿದರು. ಸಿದ್ಧಾರ್ಥ ವಂದಿಸಿದರು.

 

administrator

Related Articles

Leave a Reply

Your email address will not be published. Required fields are marked *