ಹುಬ್ಬಳ್ಳಿ: ಇಲ್ಲಿಯ ಆರ್‌ಐಎಸ್ ಮೈದಾನದಲ್ಲಿ ಇಂದು ಆರಂಭವಾದ 35 ವರ್ಷದ ಮೇಲ್ಪಟ್ಟ ಹಿರಿಯ ಆಟಗಾರರಿಗೆ ಆಯೋಜಿಸಲಾಗಿರುವ ಶ್ರೇಯಾ ಟಿ ಟ್ವೆಂಟಿ ಕಪ್-2022ಟೂರ್ನಿಗೆ ಧಾರವಾಡ ಜಿಲ್ಲಾ ಕೆಎಸ್‌ಸಿಎ ಮಾಜಿ ನಿಮಂತ್ರಕ ಬಾಬಾ ಬೂಸದ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಈ ಟೂರ್ನಿಯನ್ನು ಹುಬ್ಬಳ್ಳಿ ಧಾರವಾಡ ಲೆಜೆಂಡ್ಸ್ ಆಯೋಜಿಸಿದ್ದು ತುಂಬಾ ಸಂತಸ ತಂದಿದೆ ಎಂದರು.
ಈ ಎಲ್ಲ ಆಟಗಾರರು ಈ ಹಿಂದೆ ಹಲವು ಕ್ಲಬ್‌ಗಳಲ್ಲಿ ಆಟವಾಡಿದ್ದನ್ನು ನೋಡಿದ್ದೇನೆ. ವಯಸ್ಸು ಆಗುವುದು ಮನುಷ್ಯನಿಗೆ ಮಾತ್ರ ಆಟಕ್ಕೆ ಅಲ್ಲ. ಈಗಲೂ ಸಹ ತಾವು ಒಳ್ಳೆಯ ಆರೋಗ್ಯ ಕಾಪಾಡಿಕೊಂಡು ರಾಜ್ಯದ ಹಲವು ಭಾಗದ ಹಿರಿಯ ಆಟಗಾರರರು ಆಸಕ್ತಿಯಿಂದ ಟೂರ್ನಿಯಲ್ಲಿ ಭಾಗವಹಿಸಿದ್ದು ನೋಡಲು ನಿಜಕ್ಕೂ ಸಂತಸವಾಗುತ್ತದೆ ಎಂದು ಹೇಳಿದರು.
ಟೂರ್ನಿಯಲ್ಲಿ ಹುಬ್ಬಳ್ಳಿ ಧಾರವಾಡ ಲೆಜೆಂಡ್ಸ್, ಗದಗ ಜನೋಪಂಥರ್ ಲೆಜೆಂಡ್ಸ್, ಬೆಳಗಾವಿಯ ಕೆ.ಆರ್. ಶೆಟ್ಟಿ ಕಿಂಗ್ಸ್, ಬಳ್ಳಾರಿಯ ಕುಡತಿನಿ ಕ್ರಿಕೆಟ್ ಕ್ಲಬ್ ಸೇರಿದಂತೆ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದು, ನಾಳೆ 29ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಎಲ್ಲ ಹಿರಿಯ ಆಟಗಾರರನ್ನು ಸನ್ಮಾನಿಸಲಾಗುವುದು ಎಂದು ಆಯೋಜಕ ಗುರಮಿತ್ ತಿಳಿಸಿದರು.
ಶ್ರೇಯಾ ಬಿಲ್ಡ್‌ರ್ ಮಾಲೀಕರಾದ ಸುರಜ್ ಅಳವಂಡಿ, ವಿನೋದ ದೇಸಾಯಿ, ಸಚಿನ್ ಟೆಂಗಿನಕಾಯಿ, ರಾಘವೇಂದ್ರ ಶಾಮಿಯಾನ್ ಮಾಲೀಕರಾದ ಮಂಜುಳಾ, ಪತ್ರಕರ್ತ ಪ್ರಸನ್ನಕುಮಾರ ಹಿರೇಮಠ, ರೇಲ್ವೆ ರಣಜಿ ಆಟಗಾರ ನಿತೀನ್ ಬಿಲ್ಲೆ, ಆಯೋಜಕರಾದ ಎಸ್.ಗುರಮಿತ್, ಶಿವಾನಂದ ನಾಯ್ಕ್, ಸಾಗರ ಪರ್ವತಿ, ಸಂದೇಶ ಬೈಲಪ್ಪನವರ ಸೇರಿದಂತೆ ಇತರರಿದ್ದರು.