ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಸಹಾಯ, ಸಹಕಾರದ ಭರವಸೆ ನೀಡಿದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಶಂಕರ ಮುಗದ, ಮಹೇಶ ಶೆಟ್ಟಿ, ಪಿ.ಎಚ್.ನೀರಲಕೇರಿ, ಸವಿತಾ ಅಮರಶೆಟ್ಟಿ
ಧಾರವಾಡ: ಕ್ರೀಡಾ ದಿನಾಚರಣೆ ಅಂಗವಾಗಿ ಜಿಲ್ಲಾ ಓಲಿಂಪಿಕ್ ಅಸೋಸಿಯೇಷನ್ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮುಕ್ತ ಕ್ರಾಸ್‌ಕಂಟ್ರಿ ಓಟದ 10 ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಬೆಳಗಾವಿಯ ಶಿವಾನಂದ ನಾಯಕ, ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ರಾಶಿ ಸಿ.ಎಂ. ವೇಗದ ಓಟಗಾರರಾಗಿ ಹೊರಹೊಮ್ಮಿದರು.
ಸುಮಾರು ರಾಜ್ಯದ ವಿವಿಧ ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ಫಲಿತಾಂಶ : 10 ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ 1. ಬೆಳಗಾವಿಯ ಶಿವಾನಂದ ನಾಯಕ, 2.ಹುಬ್ಬಳ್ಳಿಯ ನಾಗರಾಜ ದಿವಟೆ, 3. ಬೆಂಗಳೂರಿನ ವೆಂಕಟೇಶ ಕೆ.ಕೆ.,4. ಬೆಂಗಳೂರಿನ ಪ್ರಭು ಲಮಾಣಿ, 5. ಬಾಗಲಕೋಟೆಯ ಸಂಗಮೇಶ ಹಳ್ಳಿ, 6. ಹಾವೇರಿಯ ಸಂಜು ಬೆಟ್ಟಪ್ಪನವರ ಕ್ರಮವಾಗಿ 1ರಿಂದ 6ನೇ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ : 1. ಬೆಂಗಳೂರಿನ ರಾಶಿ ಸಿ.ಎಂ., 2. ಧಾರವಾಡದ ಶಿಲ್ಪಾ ಹೊಸಮನಿ, 3ಶಿವಮೊಗ್ಗದ ಎಚ್.ವಿ. ದೀಕ್ಷಾ, 4. ಧಾರವಾಡದ ಸುಷ್ಮಿತಾ ಮುಗಳಿ, 5. ಧಾರವಾಡದ ಸುಪ್ರಿತಾ ಸಿದ್ದಿ, 6. ಧಾರವಾಡದ ವಿಜಯಲಕ್ಷ್ಮಿ ಕರಲಿಂಗಣ್ಣವರ ಕ್ರಮವಾಗಿ 1ರಿಂದ 6ನೇ ಸ್ಥಾನ ಪಡೆದರು.
4 ಕಿ.ಮೀ. ಓಟದ ೧೬ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ: 1. ಚೇತನ ದೊಡ್ಡಮನಿ, 2. ರಾಮನಗೌಡ ಪಾಟೀಲ, 3. ವೀರನಗೌಡ ಪಾಟೀಲ, 4. ಕಾರ್ತಿಕ ಜೋಡಳ್ಳಿ, 5. ಬಸವರಾಜ ರಾಮಶೆಟ್ಟಿ, 6. ಉಮೇಶ ರಾಠೋಡ (ಎಲ್ಲರೂ ಧಾರವಾಡದವರು) ಕ್ರಮವಾಗಿ 1ರಿಂದ 6 ಸ್ಥಾನ ಗಳಿಸಿದರು.
4 ಕಿ.ಮಿ ಓಟದ ೧೬ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ : 1. ಧಾರವಾಡದ ಶ್ವೇತಾ ಬಡಿಗೇರ, 2. ಧಾರವಾಡದ ಲಕ್ಷ್ಮಿ ಗೋನದಿನ್ನಿ, 3. ವರೂರಿನ ಪ್ರೀತಿ ಬಿ. ಅಮಾತಿ, 4. ವರೂರಿನ ಚೈತ್ರಾ ಎಂ. ಪುಟ್ಟಣ್ಣವರ, 5. ಧಾರವಾಡದ ಪೃಥ್ವಿ ಎಚ್.ಪೂಜೇರ, 6. ಧಾರವಾಡದ ಲಕ್ಷ್ಮಿ ಬಿ. ಓಬಣ್ಣವರ ಕ್ರಮವಾಗಿ 1ರಿಂದ 6ನೇ ಸ್ಥಾನ ಪಡೆದರು.
ಬೆಳಗ್ಗೆ ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ರವೀಂದ್ರ ಕುರಬಗಟ್ಟಿ ಮತ್ತು ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಓಟದ ಸ್ಫರ್ಧೆಗಳಿಗೆ ಚಾಲನೆ ನೀಡಿದರು.
ಅಸೋಸಿಯೇಷನ್ ಅಧ್ಯಕ್ಷ ಹಾಗೂ ಪಾಲಿಕೆ ಮಾಜಿ ಮೇಯರ್ ಶಿವು ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಷನ್ ಗೌರವ ಅಧ್ಯಕ್ಷ ಆನಂದ ನಾಡಗೀರ, ವಿಲಾಸ ನೀಲಗುಂದ ಉಪಸ್ಥಿತರಿದ್ದರು.
ನಂತರ ನಡೆದ ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಈ ರೀತಿಯ ಎಲ್ಲ ಕ್ರೀಡೆಗೆ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.
ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಹಿರಿಯ ವಕೀಲ ಪಿ.ಎಚ್.ನೀರಲಕೇರಿ ಬಹುಮಾನ ವಿತರಿಸಿದರು. ಕೆ.ಎಸ್. ಭೀಮಣ್ಣವರ, ಉದ್ಯಮಿ ಮಹೇಶ ಶೆಟ್ಟಿ, ಸವಿತಾ ಅಮರಶೆಟ್ಟಿ, ರವೀಂದ್ರ ಕುರಬಗಟ್ಟಿ, ಡಾ.ಕಿರಣ ಕುಲಕರ್ಣಿ, ಖಾಲಿದ ಖಾನ್, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ಶಂಬುಗೌಡ ಸಾಲಮನಿ, ಉಪಸ್ಥಿತರಿದ್ದರು.
ಅಸೋಶಿಯೇಷನ್ ಪ್ರಧಾನ ಕಾರ್ಯದರ್ಶಿ ಬಸವರಾಜ ತಾಳಿಕೋಟಿ ಸ್ವಾಗತಿಸಿದರು. ಆರ್.ಕೆ.ಪಡತಾರೆ ವಂದಿಸಿದರು.