ಹುಬ್ಬಳ್ಳಿ: ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ, ಹಂಗರಕಿ ಧಣಿ ಅಮೃತ ದೇಸಾಯಿ ಅವರ ಪುತ್ರಿ ಸ್ವರೂಪಿಣಿ ಅವರು ದಕ್ಷಿಣ ವಲಯದ ಶೂಟಿಂಗ್ ಸ್ಪರ್ಧೆಯಲ್ಲಿ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಕರ್ನಾಟಕ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ 368 ಅಂಕಗಳನ್ನು ಪಡೆದು ದಕ್ಷಿಣ ವಲಯದ ಅರ್ಹತಾ ಸುತ್ತಿಗೆ ಪ್ರವೇಶಿಸಿದ್ದಾರೆ. ಇವರು ಹುಬ್ಬಳ್ಳಿ ಕ್ರೀಡಾ ಶೂಟಿಂಗ್ ಅಕಾಡೆಮಿಯಲ್ಲಿ ರವಿಚಂದ್ರ ಬಾಲೆಹೊಸೂರ ಅವರಲ್ಲಿ ತರಬೇತಿ ಪಡೆದಿದ್ದರು.

ಮಗಳ ಸಾಧನೆಗೆ ಅಮೃತ್ ದೇಸಾಯಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದೆಯೂ ಹೀಗೆ ಉತ್ತಮ ಸಾಧನೆ ಮಾಡುತ್ತಾ ರಾಜ್ಯದ ಮತ್ತು ರಾಷ್ಟ್ರದ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಲಿ ಎಂದು ಹಾರೈಸಿದ್ದಾರೆ.


