ಧಾರವಾಡ: ಚರಂತಿಮಠ ಗಾರ್ಡನ್ ಬಳಿ ಇರುವ ಸಂಗೋಳ್ಳಿ ಪ್ಲಾಟ್ನಲ್ಲಿ ಸೋಮವಾರ ಸಂಜೆ ಧಾರವಾಡ ಪ್ರೀಮಿಯರ್ ಲೀಗ್ ಸಿಸನ್ 5ರ ತಂಡದ ಟೀ ಶರ್ಟ್ಗಳನ್ನು ಉದ್ಯಮಿ ಗಿರೀಶ ಶೆಟ್ಟಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮೊದಲು ಈಚೆಗೆ ನಿಧನರಾದ ಡಿಪಿಎಲ್ ಅಭಿಮಾನಿಯಾಗಿದ್ದ ಈರಣ್ಣ ಮಲ್ಲಿಗವಾಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ.
ಮೊದಲ ಬಹುಮಾನ 1.50ಲಕ್ಷ ಈರಣ್ಣ ಮಲ್ಲಿಗವಾಡ, 2ನೇ ಬಹುಮಾನ 1ಲಕ್ಷ ಸಮೀ ಮತ್ತು ಲಖನ್ ನೀಡಿದ್ದಾರೆ. ಪ್ರತಿ ಪಂದ್ಯಕ್ಕೂ ಪಂದ್ಯ ಶ್ರೇಷ್ಠ ಪಶಸ್ತಿ ನೀಡಲಾಗುವುದು. ಟೂರ್ನಿಯಲ್ಲಿ ಸರಣಿ ಶ್ರೇಷ್ಟ ಆದವರಿಗೆ ಟಿವಿ, ಉತ್ತಮ ಬೌಲರ ಹಾಗೂ ಬಾಲಿಂಗ್ ಮಾಡಿದವರಿಗೆ ಸೈಕಲ್ ವಿತರಿಸಲಾಗುವುದು. ಅಲ್ಲದೇ ಪ್ರೇಕ್ಷಕರಿಗಾಗಿ ಒಂದು ಲಕ್ಕಿ ಡ್ರಾ ಮಾಡಲಾಗುವುದು ಅದರಲ್ಲಿ ವಿಜೇತರಿಗೂ ಸಹ ಸೈಕಲ್ ನೀಡಲಾಗುವುದು ಎಂದು ಡಿಪಿಎಲ್ ಆಯೋಜಕರು ತಿಳಿಸಿದ್ದಾರೆ.
ಕಲ್ಲಪ್ಪ ಸಂಗೋಳ್ಳಿ, ಶ್ರೀಕಠ ಶೇಟ್, ಕಲ್ಲಪ್ಪಣ್ಣ ಸಿಗಿಹಳ್ಳಿ, ಅಶೋಕ ಶೆಟ್ಟ, ಮಂಜುನಾಥ ಸೇರಿದಂತೆ ಡಿಪಿಎಲ್ ಸದಸ್ಯರು ಹಾಗೂ ತಂಡದ ಮಾಲೀಕರು, ಆಟಗಾರರು ಇದ್ದರು.