ಹುಬ್ಬಳ್ಳಿ: ಅಭಿಶೇಕ ನಾಯ್ಕ್ (39ರನ್, 28ಎ 4×6), ಶುಭ್ ಮುಂಗರುವಾಡಿ (29ರನ್, 26ಎ, 4 x5) ಉತ್ತಮ ಬ್ಯಾಟಿಂಗ್ ನೆರವಿನಿಂದ ’ಚಾಲೆಂಜರ್‍ಸ್’ತಂಡವು ಸುಪರ್‌ಕಿಂಗ್ಸ್ ತಂಡದ ವಿರುದ್ಧ ಜಯಗಳಿಸಿತು.
ಇಲ್ಲಿಯ ಗದಗ ರಸ್ತೆಯಲ್ಲಿರುವ ಆರ್‌ಐಎಸ್ ಮೈದಾನದಲ್ಲಿ ನಡೆದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಆಶ್ರಯದಲ್ಲಿ ನಡೆದ ಟಿಎಸ್‌ಸಿಎ ಪ್ರೀಮಿಯರ್ ಲೀಗ್ -2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ’ಚಾಲೆಂಜರ್‍ಸ್’ತಂಡವು 25 ಓವರ್‌ನಲ್ಲಿ 170/9 ರನ್ ಗಳಿಸಿತು. ತಂಡದ ಪರ ಅಭಿಶೇಕ ನಾಯ್ಕ್ (39ರನ್, 28ಎ 4×6), ಶುಭ್ ಮುಂಗರವಾಡಿ (29ರನ್, 26ಎ, 4 x5), ಶಿವಯೋಗಿ ಮುದಿಗೌಡರ (21ರನ್, 21ಎ, 4×3), ಅರ್ಜುನ ರಮೇಶ (23ರನ್, 30ಎ, 4×1), ಆದಿತ್ಯ ಹುಬ್ಬಳ್ಳಿ (15ರನ್, 13ಎ, 4×1)ರನ್ ಗಳಿಸಿದರು. ನಿಖಿಲ 5-0-21-3, ಸುರಜ್ ಬಿರಾದಾರ 2-0-16-2, ಆದರ್ಶಸಿಂಗ್ ರಜಪುತ್ 5-0-36-2.
ಉತ್ತರವಾಗಿ ಸುಪರ್‌ಕಿಂಗ್ಸ್ ತಂಡ 25 ಓವರನಲ್ಲಿ 164/9 ರನ್ ಗಳಿಸಿತು. ತಂಡದ ಪರ ಚಾಕರೆ (27ರನ್, 28ಎ, 44), ಆದಿ (31ರನ್, 31ಎ, 4 x3, 6×1), ಸಚಿನ್ ಆರ್ (27ರನ್, 19ಎ, 4 x2, 6×2), ಎ.ನಿಖಿಲ(25ರನ್, 19ಎ, 4 x3, 6 x1)ರನ್ ಗಳಿಸಿದರು. ತೇಜಸ್ ಹಳೆಉಪ್ಪಾರ 5-0-35-2, ಶೀವಯೋಗಿ ಮುದಿಗೌಡರ 5-0-36-2, ಅರ್ನವ್ ವರ್ಮಾ 4-0-25-4 ಬೌಲಿಂಗ್‌ನಿಂದ ’ಚಾಲೆಂಜರ್‍ಸ್’ ತಂಡ 7ರನ್‌ಗಳಿಂದ ಜಯಗಳಿಸಿದರು.
ಈ ಟೂರ್ನಿಯಲ್ಲಿ ತಮ್ಮ ಅಕಾಡೆಮಿಯಲ್ಲಿ ಜಂಟ್ಸ್, ಟೈಟನ್ಸ್, ಸುಪರ್‌ಕಿಂಗ್ಸ್, ’ಚಾಲೆಂಜರ್‍ಸ್’ಸೇರಿದಂತೆ 4 ತಂಡ ಮಾಡಿ ಈ ಟೂರ್ನಿ ಆಯೋಜಿಸಲಾಗಿತ್ತು. ರಿಹಾನ್ ಮೊಹಮ್ಮದ್ ಬೆಸ್ಟ್ ಕ್ಯಾಚ್, ಸುರಜ್ ಬಿರಾದರ್ ಇಂಪ್ಯಾಕ್ಟ್ ಪ್ಲೇಯರ್, ಜೀವನ್ ಚಿಟ್ಟಮ್ ಬೆಸ್ಟ್ ಬ್ಯಾಟ್ಸಮನ್, ಸಾಯಿನಾಥ ರಾಜಗೋಲಿ, ವೈಭವ ಕರಿಸಕ್ರಣ್ಣನವರ ಬೆಸ್ಟ್ ಬೌಲರ್, ಅಭಿಶೇಕ ನಾಯಕ್ ಬೆಸ್ಟ್ ಆಲ್‌ರೌಂಡರ್, ಶಿವಪ್ರಸಾದ ಹೊಸೂರ ಮ್ಯಾನ್ ಆಪ್ ದಿ ಸಿರಿಜ್, ನಿಖಿಲ್ ಮೊಸ್ಟ್ ವೆಲುಯುಬಲ್ ಪ್ಲೇಯರ್, ತೇಜಸ್ ಹಳೆಉಪ್ಪಾರ ಎಮರ್‌ಜಿಂಗ್ ಪ್ಲೇಯರ್ ಪ್ರಶಸ್ತಿ ಪಡೆದುಕೊಂಡರು.
ಸ್ವರ್ಣಾ ಗ್ರುಪ್ ಆಪ್ ಚೇರಮನ್ ಡಾ.ಚಿ.ವಿ.ಎಸ್.ವಿಪ್ರಸಾದ ವಿಜೇತ ತಂಡಕ್ಕೆ ಟ್ರೋಫಿ ಹಾಗೂ ವಿವಿಧ ಆಟಗಾರರಿಗೆ ಬಹುಮಾನ ವಿತರಿಸಿದರು. ನಂತರ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲವು ಸಮಾನವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು. ಎಲ್ಲ ಕ್ರೀಡಾಪಟುಗಳಿಗೆ ಮುಂದೆ ರಾಜ್ಯ ಸೇರಿದಂತೆ ದೇಶದ ತಂಡಕ್ಕೆ ಆಯ್ಕೆಯಾಗಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿ.ಟಿ.ಕರಿಸಕ್ರಣ್ಣನವರ, ಸಿ.ಡಿ. ಮುಂಗರುವಾಡಿ, ಶಿವಾನಂದ ಹಿರೇಮಠ, ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಮೆಂಟರ್ ಸೋಮಶೇಖರ ಶಿರಗುಪ್ಪಿ, ಮಂಜು ದೊಡಮನಿ, ಚಂದ್ರಶೇಖರ್ ಅಣ್ಣಿಗೇರಿ, ರಾಜು ಹಾಗೂ ಅಕಾಡೆಮಿಯ ತರಬೇತುದಾರರು, ಆಟಗಾರರ ಪಾಲಕರು ಇದ್ದರು. ಪ್ರಮೋದ ಜಂಬಂಗಿ ವಂದಿಸಿದರು.