ಹುಬ್ಬಳ್ಳಿ-ಧಾರವಾಡ ಸುದ್ದಿ
ಮಲಬಾರ್ ಗೋಲ್ಡ್‍ನಿಂದ 1 ಲಕ್ಷ ಉಚಿತ ಲಸಿಕೆ ಕೊಡುಗೆ

ಮಲಬಾರ್ ಗೋಲ್ಡ್‍ನಿಂದ 1 ಲಕ್ಷ ಉಚಿತ ಲಸಿಕೆ ಕೊಡುಗೆ

ಬೆಂಗಳೂರು: ವಿಶ್ವದಾದ್ಯಂತ 10 ಕ್ಕೂ ಹೆಚ್ಚು ದೇಶಗಳಲ್ಲಿ 260 ಕ್ಕೂ ಹೆಚ್ಚು ರೀಟೇಲ್ ಔಟ್‍ಲೆಟ್‍ಗಳ ಜಾಲವನ್ನು ಹೊಂದಿರುವ ಖ್ಯಾತನಾಮ ಆಭರಣ ರೀಟೇಲರ್ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದೆ. ಇದರ ಅಂಗವಾಗಿ ಸಂಸ್ಥೆಯು 1,00,000 ಉಚಿತ ಕೋವಿಡ್-19 ಲಸಿಕೆಗಳನ್ನು ಕೊಡುಗೆ ನೀಡಲು ನಿರ್ಧರಿಸಿದೆ.
ಆಭರಣ ತಯಾರಕರು, ಸಿಬ್ಬಂದಿ, ಹೂಡಿಕೆದಾರರು ಮತ್ತು ಅವರ ಕುಟುಂಬ ಸದಸ್ಯರಿಗಲ್ಲದೇ ದುರ್ಬಲ ವರ್ಗದವರಿಗೆ ಈ ಉಚಿತ ಲಸಿಕೆಗಳನ್ನು ನೀಡಲಾಗುತ್ತದೆ. ಕೋವಿಡ್-19 ರ ಸಾಂಕ್ರಾಮಿಕದ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಸರಣಿ ಸಿಎಸ್‍ಆರ್ ಉಪಕ್ರಮ ಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾರ್ವಜನಿಕರಿಗೆ ನೆರವಾಗುತ್ತಿದೆ.


ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎ.ಪಿ. ಅಹ್ಮದ್ ಅವರು ಈ ಕೊಡುಗೆ ಬಗ್ಗೆ ಮಾತನಾಡಿ, `ಕೋವಿಡ್-19 ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಡೀ ದೇಶ ಹೋರಾಟ ಮಾಡುತ್ತಿದೆ. ಈ ಸಾಂಕ್ರಾಮಿಕ ಹರಡುವುದನ್ನು ತಪ್ಪಿಸಲು ಲಸಿಕಾಕರಣ ಅತ್ಯಂತ ಮುಖ್ಯವಾಗಿದೆ. ರಾಷ್ಟ್ರವ್ಯಾಪಿ ಕೈಗೊಂಡಿ ರುವ ಲಸಿಕಾಕರಣ ಅಭಿಯಾನಕ್ಕೆ ಇದು ನಮ್ಮ ಮೊದಲ ಕೊಡುಗೆಯಾಗಿದೆ
ಈ ಲಸಿಕಾಕರಣ ಅಭಿಯಾನಕ್ಕೆಂದು ನಾವು 8 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದ್ದೇವೆ” ಎಂದಿದ್ದಾರೆ.
ಮಲಬಾರ್ ಗೋಲ್ಡ್ ಕಾರ್ಯನಿರ್ವಹಿಸುವ ಎಲ್ಲಾ ಪ್ರದೇಶಗಳಲ್ಲಿನ ಸಿಎಸ್‍ಆರ್ ಚಟುವಟಿಕೆಗಳಿಗಾಗಿ ಸಂಸ್ಥೆಯು ತನ್ನ ಲಾಭದ ಶೇ. 5ರಷ್ಟನ್ನು ಮೀಸಲಿಟ್ಟಿದೆ.

administrator

Related Articles

Leave a Reply

Your email address will not be published. Required fields are marked *