ಮೈಸೂರು: ನಾನು ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿರುವುದು ಸ್ವಾಮೀಜಿ ಯವರನ್ನು ಭೇಟಿ ಮಾಡಲಷ್ಟೇ. ಅದರಲ್ಲಿ ರಾಜಕೀಯವೇನಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ ಆಗಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಇಲ್ಲಿ ಬಂದಿರೋದು ಸ್ವಾಮೀಜಿಯನ್ನು ಭೇಟಿ ಮಾಡಲು ಮಾತ್ರ. ಅವರ ತಾಯಿ ದೈವಾಧೀನರಾಗಿದ್ದರು. ಅದಕ್ಕಾಗಿ ಬಂದಿದ್ದೇನೆರಿದು ರಾಜಕೀಯ ಭೇಟಿಯಲ್ಲ ಎಂದರು.
ನಾನು ಮುಂಬಯಿಗೆ ಹೋಗಿರೋದು ರಾಜಕೀಯ ಇರಬಹುದು. ಸರ್ಕಾರ ತಂದವನು ನಾನು, ನಾನು ಮಂತ್ರಿ ಸ್ಥಾನ ಕೇಳುತ್ತೇನೆ. ಆದರೆ ಮಂತ್ರಿ ಗೋಸ್ಕರ ನಾನು ಸ್ವಾಮೀಜಿಯನ್ನ ಭೇಟಿ ಮಾಡುತ್ತಿಲ್ಲ. ರಾಜೀನಾಮೆ ವಿಚಾರ ಮುಂಬೈನಲ್ಲಿ ಹೋಗಿ ಮಾತಾಡುತ್ತೇನೆ ಎಂದು ಪರೋಕ್ಷವಾಗಿ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳು ಭೇಟಿಯಾಗಲು ಹೇಳಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್ ಜಾರಕಿಹೊಳಿ, ಸಿಎಂ ಭೇಟಿ ಮಾಡಿ ಎಂದಿರುವುದು ನನಗೆ ಗೊತ್ತಿಲ್ಲ ಎಂದರು.
ಸಿಎಂ ಬುಲಾವ್ ?
ದೇವೇಂದ್ರ ಫಡ್ನವಿಸ್ ಜೊತೆಗೆ ರಮೇಶ್ ಜಾರಕಿಹೊಳಿ ಮಾತುಕತೆ ಯಶಸ್ವಿಯಾಗಿದೆ ಎನ್ನಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಿಡಿ ಪ್ರಕರಣದಿಂದ ಪಾರಾಗುವ ಸಂಬಂಧ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿಯಿದ್ದು,
ಫಡ್ನವಿಸ್ ಹೈಕಮಾಂಡ್ ನಾಯಕರ ಮೂಲಕ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದ್ದಾರೆನ್ನಲಾಗಿದೆ. ಸಿಎಂ ಭೇಟಿಯಾದಲ್ಲಿ
ಸಿಡಿ ಪ್ರಕರಣದಿಂದ ಪಾರಾಗಲು ಕ್ರಮವಹಿಸುವಂತೆ ಕೋರಲಿದ್ದಾರೆ ಎನ್ನಲಾಗಿದೆ.