ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಸಿಸನ್-2
ಹುಬ್ಬಳ್ಳಿ: ಪ್ರೀತೇಶ್ ಸಾಳುಂಕೆ 31(22ಎ, 4×4, 1×6), ಶಿವಾ 25(19ಎ, 5×4) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಸಿಸನ್-2ರಲ್ಲಿ ಹುಬ್ಬಳ್ಳಿ ಧಾರವಾಡ ಲೆಜೆಂಡ್ಸ್ ತಂಡ ಜನೊಪೇಂಥರ್ ಲೇಜೆಂಡ್ಸ್ ತಂಡದ ವಿರುದ್ಧ 5ವಿಕೆಟ್‌ಗಳಿಂದ ಜಯಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇಲ್ಲಿಯ ಆರ್‌ಐಎಸ್ ಮೈದಾನದಲ್ಲಿ ನಡೆದ ಪೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜನೊಪೇಂಥರ್ ಲೇಜೆಂಡ್ಸ್ ತಂಡ 15ಓವರ್‌ನಲ್ಲಿ 109/7ರನ್ ಗಳಿಸಿತು. ತಂಡದ ಪರ ರಾಘವೇಂದ್ರ ಬಡಿಗೇರ 18(13ಎ, 3×4), ಶರಭಾನ್ ನಾಯಕ್ 33(33ಎ, 2×4, 3×6), ವಿನಾಯಕ ಬಾರಕರ್ 24(19ಎ, 3×4) ರನ್‌ಗಳಿಸಿದರು.
ಈ ರನ್ ಬೆನ್ನು ಹತ್ತಿದ ಹುಬ್ಬಳ್ಳಿ ಧಾರವಾಡ ಲೆಜೆಂಡ್ಸ್ ತಂಡ 12.3ಓವರ್‌ನಲ್ಲಿ 112/5ಕ್ಕೆ ರನ್ ಗಳಿಸಿ ಜಯ ಸಾಧಿಸಿತು. ತಂಡದ ಪರ ಪ್ರೀತೇಶ್ ಸಾಳುಂಕೆ 31(22ಎ, 4×4, 1×6), ಶಿವಾ 25(19ಎ, 5×4), ಹಬೀಬ ತಾಡಪತ್ರಿ 19(16ಎ, 3×4), ದೇವರಾಜ ಕೊಟಿ 15(10ಎ, 2×4) ರನ್ ಗಳಿಸಿದರು.
ಲಿಗ್ ಪಂದ್ಯದಲ್ಲಿ ಶತಕ ಗಳಿಸಿದ ಪ್ರೀತೇಶ್ ಸಾಳುಂಕೆ 165 (52ಎ) ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಸುನೀಲ ಕುಮಾರ ಉತ್ತಮ ಬೌಲರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
35 ವರ್ಷ ಮೇಲ್ಪಟ್ಟ ಲೈನ್ಸ್ ಕ್ರಿಕೆಟ್ ಕ್ಲಬ್, ಧಾರವಾಡ ಬುಲ್ಸ್, ಜನೊಪೇಂಥರ್ ಲೇಜೆಂಡ್ಸ್, ಇಂಡಿಯಾನ್ ಕ್ರಿಕೆಟ್ ಕ್ಲಬ್, ಹುಬ್ಬಳ್ಳಿ ಧಾರವಾಡ ಲೆಜೆಂಡ್ಸ್, ಹುಬ್ಬಳ್ಳಿ ಲಾಡ್ಸ್, ಹೊಸಪೇಟ್ ಸ್ಟೀಲ್ಸ್, ಕೆಎಲ್‌ಇ ಲೇಜಂಡ್ಸ್, ಹಾವೇರಿ, ಗದಗ, ಹಗರಿಬೊಮ್ಮನಳ್ಳಿ, ಹುಬ್ಬಳ್ಳಿ ಧಾರವಾಡ ಸೇರಿದಂತೆ ಒಟ್ಟು 8ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಹುಬ್ಬಳ್ಳಿ ಧಾರವಾಡ ಲೆಜೆಂಡ್ಸ್ ಈ ಪಂದ್ಯಾವಳಿ ಆಯೋಜಿಸಿತ್ತು.
ಸಂಘಟನಾ ಸಮಿತಿಯ ಕಾರ್ಯದರ್ಶಿ ಶಿವಾನಂದ ನಾಯಕ, ಜಂಟಿ ಕಾರ್ಯದರ್ಶಿ ಗುರಮಿತ್ ಸಿಂಗ, ರೈಲ್ವೇ ಚಿಪ್ ಆಫೀಸರ್ ಶಾಯುಜ್ ಮೆಹಮೂದ್ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.
ಲಿಂಗರಾಜ, ರಮೇಶ ಮಾಹದೇಪ್ಪನವರ, ಶ್ರೀವತ್ಸ ಪುರಾಣಿಕ, ಆನಂದ ಉಪ್ಪಿನ, ಶಂಕರ ಸೊಲ್ಲಾಪುರ, ಮೋಹನಲಾಲ ಜೈನ್, ಶಿವಾಜಿ ವಡ್ಡರ, ಸಂದೀಪ ಪೈ, ಚಿನಿ ಬಸು, ರಾಜು ಕಲಾಲ ಸೇರಿದಂತೆ ಇನ್ನಿತರರರಿದ್ದರು.