ಹುಬ್ಬಳ್ಳಿ-ಧಾರವಾಡ ಸುದ್ದಿ

ಹಿರಿಯ ಮುಖಂಡ ಎಚ್.ಕೆ.ಗೆ ಮಂತ್ರಿ ಭಾಗ್ಯ

ಖರ್ಗೆ ನಿಕಟವರ್ತಿಗೆ ಕಾನೂನಿನ ಹೊಣೆ

ಹುಬ್ಬಳ್ಳಿ : ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಉತ್ತರ ಕರ್ನಾಟಕದ ಗಟ್ಟಿ ಧ್ವನಿ ಎನಿಸಿಕೊಳ್ಳಲಿರುವ ಎಚ್ .ಕೆ.ಪಾಟೀಲರು ಪ್ರಸಕ್ತ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಸ್ಥಾನ ಪಡೆದಿದ್ದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಅಲ್ಲದೇ ಪ್ರವಾಸೋದ್ಯಮ ಖಾತೆ ಲಭಿಸಿದೆ.


ಗದಗ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದು ಅಲ್ಲದೇ 1984ರಿಂದ 2008ರವರೆಗೆ ಸತತ ನಾಲ್ಕು ಬಾರಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. 1993-94ರಲ್ಲಿ ಜವಳಿ, 1999ರಲ್ಲಿ ಜಲಸಂಪನ್ಮೂಲ, 2003ರಲ್ಲಿ ಕೃಷಿ, 2004ರಲ್ಲಿ ಕಾನೂನು ಮತ್ತು ಸಂಸದೀಯ ಖಾತೆ,ಅಲ್ಲದೆ 2013ರ ಸಿದ್ದು ಸಂಪುಟದಲ್ಲಿ ಗ್ರಾಮೀಣಾಭಿವೃದ್ದಿ ಸಚಿವರಾಗಿ ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಯಿ ಅಲ್ಲದೇ ಸಿದ್ದರಾಮಯ್ಯ ಮುಂತಾದವರ ಸಂಪುಟದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.


ಪ್ರಸಕ್ತ ಚುನಾವಣೆಯಲ್ಲಿ ಅನಿಲ ಮೆಣಸಿನಕಾಯಿ ವಿರುದ್ಧ ದೊಡ್ಡ ಅಂತರದ ಗೆಲುವು ಪಡೆದಿರುವ ಎಚ್.ಕೆ.ಪಾಟೀಲ ಧಾರವಾಡ, ಕಲಬುರಗಿ ಸಂಚಾರಿ ಪೀಠಗಳು ಅಲ್ಲದೇ ಗದಗಿನ ಗ್ರಾಮೀಣಾಭಿವೃದ್ದಿ ವಿ.ವಿ. ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

ರಾಜ್ಯ ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾಮಂಡಳ,ರಾಷ್ಟ್ರೀಯ ಮಹಾಮಂಡಳದ, ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಇವರು ಗದಗ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬ ದಿಶೆಯಲ್ಲಿ ಪ್ರಾಮಾಣಿಕತೆಯಿಂದ ಕಾರ್ಯ ಮಾಡುತ್ತಿದ್ದು ಇವರ ಹಿಂದೆ ಸಶಕ್ತ ಕ್ರೀಯಾಶೀಲ ಯುವಕರ ತಂಡವಿದೆ.

ಹಲವು ಹಿರಿಯರಿಗೆ ಈ ಬಾರಿ ಸಂಪುಟದಿಂದ ಕೈ ಬಿಡಲಾದರೂ ಸದನದಲ್ಲಿ ಸಮರ್ಥವಾಗಿ ಸರ್ಕಾರದ ನಿಲುವು ಸಮರ್ಥಿಸಬಲ್ಲ ಎಚ್.ಕೆ.ಯವರಿಗೆ ವರಿಷ್ಠರೇ ಕರೆದು ಮಣೆ ಹಾಕಿದ್ದು ಇವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿಕಟವರ್ತಿಯೂ ಆಗಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *