ಬೆಳಗಾವಿ: ಹಿರಿಯ ಐಪಿಎಸ್ ಅಧಿಕಾರಿ ವಿಕಾಸಕುಮಾರ ವಿಕಾಸ ಇವರು ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ಬುಧವಾರದಂದು ಬೆಳಗಾವಿಯಲ್ಲಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಪೂರ್ವದಲ್ಲಿ ಅವರು ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂಲತಾ ಬಿಹಾರದ ಮುನಗೆರ್ದವರು. ಜಾರ್ಕಂಡ್ದ ತಿಲಾಯಿ ಸೈನಿಕ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಂದೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಜಿಯೋಗ್ರಾಫಿಯಲ್ಲಿ ಪದವಿ ಹಾಗೂ ಎಂಎ ಮಾಡಿದರು.
ವಿಕಾಶ್ ಕುಮಾರ್ ವಿಕಾಶ್, 2004 ರ ಐಪಿಎಸ್ ಬ್ಯಾಚ್ಗೆ ಸೇರಿದವರು ಮತ್ತು ಪ್ರಸ್ತುತ ಹೋಮ್ ಕೇಡರ್, ಕರ್ನಾಟಕ ರಾಜ್ಯ, ಡಿಐಜಿಪಿ ಮತ್ತು ಕಮಾಂಡರ್, ಆಂಟಿ-ನಕ್ಸಲ್ ಫೋರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್-ವಿರೋಧಿ ಕಾರ್ಯಾಚರಣೆಗಳನ್ನು ಯೋಜಿಸುವಲ್ಲಿ ಅಧಿಕಾರಿ ನಿಯಮಿತವಾಗಿ ತೊಡಗಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರೊಬೇಷನರ್ ಆಗಿದ್ದ ದಿನಗಳಿಂದ ತನಿಖಾ ಕ್ಷೇತ್ರದಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇತ್ತು.ಎಎಸ್ಪಿ (ಪ್ರೋಬ್) ಆಗಿ, ಶಸ್ತ್ರಾಸ್ತ್ರ ಕಾಯಿದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ಐಪಿಸಿ ಅಡಿಯಲ್ಲಿ ಮಾಡಿದ ಅಪರಾಧಗಳನ್ನು ಒಳಗೊಂಡಿರುವ ಪ್ರಕರಣಗಳಲ್ಲಿ ಒಂದನ್ನು ತನಿಖೆ ಮಾಡಿದ್ದಾರೆ. ಅದಕ್ಕೆ ಶಿಕ್ಷೆ ಕೂಡಾ ಕೊಡಿಸಿದ್ದಾರೆ. ತನಿಖೆಯ ಗುಣಮಟ್ಟಕ್ಕಾಗಿ, ಇವರಿಗೆ ಪ್ರಶಂಸಾ ಪತ್ರವನ್ನು ನೀಡಲಾಯಿತು. ಇವರ ಈ ತನಿಖೆಯನ್ನು ಮಾದರಿ ತನಿಖಾ ಎಂದು ಪರಿಗಣಿಸಲಾಗಿದೆ ಮತ್ತು ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು, ಡಿವೈಎಸ್ಪಿ ಮತ್ತು ಪಿಎಸ್ಐ ಪ್ರೊಬೇಷನಗಳಿಗೆ ಕಲಿಸಲು ಕಳುಹಿಸಲಾಗಿದೆ. ಇವರು ಬೆಂಗಳೂರು, ಹಾವೇರಿ, ಉತ್ತರ ಕನ್ನಡ ರಾಜ್ಯದ ವಿವಿಧ ಭಾಗದಲ್ಲಿ ವಿವಿಧ ಹುದ್ದೆಯಲ್ಲಿ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.