ಹುಬ್ಬಳ್ಳಿ-ಧಾರವಾಡ ಸುದ್ದಿ
ಟೇಕ್ವಾಂಡೋ: ಅದಿರ, ಅದಿತಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಟೇಕ್ವಾಂಡೋ: ಅದಿರ, ಅದಿತಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಧಾರವಾಡ: 40ನೇ ರಾಜ್ಯಮಟ್ಟದ ಟೇಕ್ವಾಂಡೋ ಕ್ರೀಡಾಕೂಟ 2023-24 ರಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಪಾಲಾಕ್ಷ ಪೋದಾರ್ ಜಂಬೋ ಕಿಡ್ಸ್ ಮತ್ತು ಪಾಲಾಕ್ಷ ಪೋದಾರ್ ಲರ್ನ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಾಲಾಕ್ಷ ಎಜ್ಯುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ ಬೆಂಗಳೂರಿನ ಶ್ರೀ ಸಾಯಿ ಪ್ಯಾಲೇಸ್, ತಿರುಮಲಶೆಟ್ಟಿ ಹಳ್ಳಿಯಲ್ಲಿ ಜೂ. 23 ರಿಂದ 25 ರವರೆಗೆ 40ನೇ ರಾಜ್ಯಮಟ್ಟದ ಟೇಕ್ವಾಂಡೋ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.


ಪೋದಾರ್ ಜಂಬೋ ಕಿಡ್ಸ್ ವಿದ್ಯಾರ್ಥಿ ಅದಿರ ಎಂ.ಹಿರೇಮಠ 18ಕೆಜಿಗಿಂತ ಕೆಳಗಿನವರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಮಮ್ಮಿಗಟ್ಟಿಯ ಪಾಲಾಕ್ಷ ಪೋದಾರ್ ಲರ್ನ್ ಸ್ಕೂಲ್‌ನ ವಿದ್ಯಾರ್ಥಿನಿ ಅದಿತಿ ಕಂಬಳಿ 47ಕೆಜಿಗಿಂತ ಕೆಳಗಿನವರ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. ಈ ಇಬ್ಬರೂ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.


ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಆನಂದ ಕಿಟದಾಳ ಟೇಕ್ವಾಂಡೋ ತರಬೇತಿ ನೀಡಿದ್ದರು. ಟ್ರಸ್ಟ್ ಅಧ್ಯಕ್ಷ ಪಂಕಜ ದೇಸಾಯಿ, ಪ್ರಾಚಾರ್ಯ ಪ್ರಿಯಾಂಕ ಗೌಡ, ಉಪಪ್ರಾಚಾರ್ಯರಾದ ಕ್ಯಾರೋಲಿನ್ ಸಂಕೇಶ್ವರ, ಶಿಕ್ಷಕರು, ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *