ಧಾರವಾಡ: ಇಲ್ಲಿಯ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಕಿತ್ತೂರ ರಾಣಿ ಚೆನ್ನಮ್ಮ ಮೈದಾನದಲ್ಲಿ ಕೆನರಾ ಬ್ಯಾಂಕಿನ ಅಂತರ-ಕ್ಷೇತ್ರಿಯ ’ಕೆನರಾ ಪ್ರೀಮಿಯರ್ ಲೀಗ್’ (ಸಿಪಿಎಲ್) ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್ ಟೂರ್ನಿಗೆ ಭಾನುವಾರ ಹಿರಿಯ ಕ್ರಿಕೆಟ್ ಆಟಗಾರ ವಸಂತ ಮುರ್ಡೇಶ್ವರ ಚಾಲನೆ ನೀಡಿದರು.
ನಂತರ ಮಾತನಾಡಿ, ಎಲ್ಲ ಕ್ರಿಡಾಪಟುಗಳಿಗೆ ಹಾಗೂ ಟೂರ್ನಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕೆನರಾ ಬ್ಯಾಂಕ್ ಡಿಜಿಎಂ ಐ.ಪಿ. ಮಿಥಾಂತಯ್ಯ, ಎಜಿಎಂಗಳಾದ ರಣಜಿತ ಜೆನಾ, ಡಬ್ಲು.ಟಿ. ಸುರೇಶ, ಡಿಸಿಲ್ವಾ ರಾಬರ್ಟ್, ರತಿಕಾಂತ ಡೋರಾ, ಮ್ಯಾನೇಜರ್ ಉದಯ ಮಹಾಲೆ, ಸೋಮಶೇಖರ ಶಿರಗುಪ್ಪಿ ಸೇರಿದಂತೆ ವಿವಿಧ ಭಾಗದ ಬ್ಯಾಂಕ್ ಸಿಬ್ಬಂದಿ ಇದ್ದರು.
ದೇಶದಾದ್ಯಂತ ಈ ಸ್ಪರ್ಧೆಗಳು ನಡೆಯಲಿವೆ. ಹುಬ್ಬಳ್ಳಿ ಸರ್ಕಲ್ ವಿಭಾಗದ ಸ್ಪರ್ಧೆಗಳು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕಾಲೇಜು ಮೈದಾನಗಳಲ್ಲಿ ಏಕಕಾಲಕ್ಕೆ ಜರುಗಿದವು.
ಪುರುಷರಿಗಾಗಿ ನಡೆಯಲಿರುವ ಕ್ರಿಕೆಟ್ನಲ್ಲಿ ಹುಬ್ಬಳ್ಳಿ ಸರ್ಕಲ್ನ ಎರಡು ತಂಡಗಳ ಹೊರತಾಗಿ ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಬೆಳಗಾವಿ, ಕಲಬುರಗಿ ಹಾಗೂ ರಾಯಚೂರು ತಂಡಗಳು ಪಾಲ್ಗೊಂಡಿದ್ದವು. ಮಹಿಳೆಯರು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.