ಹುಬ್ಬಳ್ಳಿ: ರಾಮನೂರು ಅಯೋಧ್ಯೆಗೂ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದ್ದು, ಅನೇಕ ಗಣ್ಯರು ರಾಮಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತದ ಕಾಣಿಕೆಯನ್ನೂ ನೀಡಿದ್ದಾರೆ. ನಾಳೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಲ್ಲದೇ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲು ಹುಬ್ಬಳ್ಳಿಯಿಂದ ಇಂದು ವಿಶೇಷ ವಿಮಾನದ ಮೂಲಕ ಆರು ಜನರ ತಂಡ ಅಯೋಧ್ಯೆಗೆ ಪ್ರಯಾಣ ಬೆಳೆಸಿದೆ.
ಸ್ವರ್ಣ ಸಮೂಹದ ಮಾಲಿಕರು ಹಾಗೂ ಸಮಾಜ ಸೇವಕರಾದ ಡಾ. ಚಿಗರುಪಾಟಿ ವಿ.ಎಸ್.ವಿ ಪ್ರಸಾದ, ಕೆಎಲ್‌ಇ ಚೇರಮನ್ ಪ್ರಭಾಕರ ಕೊರೆ, ಕೆಎಲ್‌ಇ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ವಿಶ್ವಹಿಂದೂ ಪರಿಷತ್ ಉತ್ತರ ಪ್ರಾಂತ್ರಯ ಅಧ್ಯಕ್ಷ, ಧಾರವಾಡದ ಹಿರಿಯ ಚೇತನ ಡಾ.ಎಂ.ಆರ್.ರಾಮನಗೌಡರ, ಉದ್ಯಮಿ ಜಿತೇಂದ್ರ ಮಜೇಥಿಯಾ ಮುಂತಾದ ಗಣ್ಯರು ಈ ತಂಡದಲ್ಲಿದ್ದಾರೆ.
ಅನೇಕ ದಶಕಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿದ್ದು, ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಭಾಗವಹಿಸುತ್ತಿರುವುದು ನಮ್ಮ ಸೌಭಾಗ್ಯ ಎಂದು ಡಾ.ಕೋರೆ ಅಭಿಪ್ರಾಯ ಪಡುತ್ತಾರೆ.
ನಾಳಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸುಯೋಗವೇ ಸರಿ. ೩ ಸಾವಿರ ಆಹ್ವಾನಿತರಲ್ಲಿ ನಾವೂ ಸೇರಿದ್ದೇವೆ. ಶ್ರೀರಾಮ ಸಕಲರಿಗೂ ಒಳ್ಳೆಯದನ್ನು ಮಾಡಲಿ, ದೇಶ ಸುಭೀಕ್ಷವಾಗಲಿ
ಶಂಕ್ರಣ್ಣ ಮುನವಳ್ಳಿ
ಕೆಎಲ್‌ಇ ನಿರ್ದೇಶಕಹುಬ್ಬಳ್ಳಿಯ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ದೊಡ್ಡ ಹೆಸರಾಗಿರುವ ಡಾವಿ.ಎಸ್.ವಿ.ಪ್ರಸಾದ ಪ್ರತಿ ವರ್ಷ ಅಯ್ಯಪ್ಪನ ಮಾಲಾಧಾರಿಯಾಗಿ ಕಠಿಣ ವೃತ ಮುಗಿಸಿ ಅಯೋಧ್ಯಾಪತಿಯ ದರ್ಶನಕ್ಕೆ ಹೊರಟಿದ್ದೇವೆ. ಕೋಟ್ಯಂತರ ಹಿಂದೂಗಳ ಐದುನೂರು ವರ್ಷಗಳ ಕನಸು ನಾಳೆ ನನಸಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದೆ. ಇದೀ ದೇಶದ ಜನರು ರಾಮ ನಾಮ ಜಪದಲ್ಲಿ ತಲ್ಲೀನರಾಗಿದ್ದು ಇಂತಹ ಅವಕಾಶ ನಮಗೆ ದೊರೆತಿರುವುದು ನಿಜಕ್ಕೂ ಸೌಭಾಗ್ಯ ಎಂದು ಭಾವಿಸುವೆ. ಅಲ್ಲದೇ ಸರ್ವ ಜನಾಂಗದ ಜನತೆಯೂ ಕಳೆದ 15 ದಿನಗಳಿಂದ ರಾಮನ ಪ್ರತಿಷ್ಠಾಪನೆಯನ್ನು ಮನೆಯ ಕಾರ್ಯಕ್ರಮವೆಂಬಂತೆ ಆಚರಿಸುತ್ತಿದ್ದು ಭಾರತ ವಿಶ್ವದಲ್ಲಿ ನಂ.1 ಆಗಲಿ ಎಂದು ಶ್ರೀರಾಮನಲ್ಲಿ ಪ್ರಾರ್ಥಿಸುವೆ.
ಡಾ. ಚಿಗರುಪಾಟಿ ವಿ.ಎಸ್.ವಿ ಪ್ರಸಾದ,
ಸ್ವರ್ಣ ಸಮೂಹದ ಮಾಲಿಕರು ಹಾಗೂ ಸಮಾಜ ಸೇವಕರು
ನಾಳಿನ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಡಾ.ರಾಮನಗೌಡರ ಹಾಗೂ ಉದ್ಯಮಿ ಜಿತೇಂದ್ರ ಮಜೇಥಿಯಾ ಅಭಿಪ್ರಾಯಪಟ್ಟರು.
ಎಲ್ಲ ಗಣ್ಯರ ಕುಟುಂಬವರ್ಗದವರು, ಹಿತೈಷಿಗಳು ಬೀಳ್ಕೊಟ್ಟರು.