ಹುಬ್ಬಳ್ಳಿ-ಧಾರವಾಡ ಸುದ್ದಿ
ಎಐಟಿಡಬ್ಲುಪಿ ಭಾರತ ತಂಡಕ್ಕೆ ರೆಹಾನ್ ನದಾಫ್ ಆಯ್ಕೆ

ಎಐಟಿಡಬ್ಲುಪಿ ಭಾರತ ತಂಡಕ್ಕೆ ರೆಹಾನ್ ನದಾಫ್ ಆಯ್ಕೆ

ರಷ್ಯಾದ ಯಾಕುಟಿಯಾದಲ್ಲಿ 27ರಿಂದ ಜು.7ರ ವರೆಗೆ ನಡೆಯಲಿರುವ 8ನೇ ಏಷ್ಯಾದ ಮಕ್ಕಳ ಅಂತರರಾಷ್ಟ್ರೀಯ ಕ್ರೀಡಾಕೂಟ

ಕ್ರೀಡಾಕೂಟದಲ್ಲಿ ಪದಕ ಗಳಿಸಿ ದೇಶಕ್ಕೆ ಕೀರ್ತಿ ತರುವಂತೆ ಶುಭ ಹಾರೈಸಿದ ಧಾರವಾಡ ಅಂಜುಮನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ, ಅಂಜುಮನ್ ಸರ್ವ ಸದಸ್ಯರು ಹಾಗೂ ಪೇಡಾನಗರ ಜನತೆ


ಧಾರವಾಡ: ನಗರದ ಮಾಸ್ಟರ್ ರೆಹಾನ್ ಮಲಿಕ್ ನದಾಫ್ (60 ಕೆಜಿ ಬಾಲಕರು, ಅಲಿಶ್ ಬೆಲ್ಟ್ ರೆಸ್ಲಿಂಗ್) ಅವರು ರಷ್ಯಾದ ಯಾಕುಟಿಯಾದ ನಡೆಯಲಿರುವ 8ನೇ ಏಷ್ಯಾದ ಮಕ್ಕಳ ಅಂತರರಾಷ್ಟ್ರೀಯ ಕ್ರೀಡಾಕೂಟ 2024ರಲ್ಲಿ ಭಾಗವಹಿಸಲು ಎಐಟಿಡಬ್ಲುಪಿ ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.


ರೆಹಾನ್ ಅವರೊಂದಿಗೆ ತಂತಿ ದೆಬಾಂಗನ್, ಕ್ರಿಶ್ ಜೆತೆನ್, ಅರ್ಶಿತ್, ಯುಗಾಮ್, ತೇಜಸ್ ಕೂಡಾ ತಂಡದಲ್ಲಿದ್ದಾರೆ. ಈ ಕ್ರೀಡಾಕೂಟವನ್ನು ಜೂ. 25 ರಿಂದ ಜು.7 ರಂದು ರಷ್ಯಾದ ಒಕ್ಕೂಟದ ಕ್ರೀಡಾ ಸಚಿವಾಲಯ, ಸಖಾ ಗಣರಾಜ್ಯದ ಸರ್ಕಾರದಿಂದ ಆಯೋಜಿಸಿದೆ. ರಷ್ಯಾದ (ಯಾಕುಟಿಯಾ) ಒಲಿಂಪಿಕ್ ಸಮಿತಿ ಮತ್ತು ಚಿಲ್ಡ್ರನ್ ಆಫ್ ಏಷ್ಯಾ ಇಂಟರ್‌ನ್ಯಾಷನಲ್ ಬೆಂಬಲದೊಂದಿಗೆ ಸಮಿತಿ. ವರ್ಲ್ಡ್ ಅಲಿಶ್ ಫೆಡರೇಶನ್ ಅನುಮತಿಯೊಂದಿಗೆ ಸ್ಪರ್ಧೆಗಳು ನಡೆಯಲಿವೆ.


ಭಾರತೀಯ ತಂಡವು ಮೂರು ಸಾಂಪ್ರದಾಯಿಕ ಕುಸ್ತಿ ಶೈಲಿಗಳಲ್ಲಿ – ಅಲಿಶ್ ಬೆಲ್ಟ್ ರೆಸ್ಲಿಂಗ್, ಮಾಸ್- ರೆಸ್ಲಿಂಗ್ ಮತ್ತು ಕಾಪ್ಸಗಾಯ್ ರೆಸ್ಲಿಂಗ್‌ನಲ್ಲಿ ಭಾಗವಹಿಸಲಿದೆ ಎಂದು ಎಐಟಿಡಬ್ಲುಪಿ ಅಧ್ಯಕ್ಷ ಒಮರ್‌ಮುಕ್ತರ ತಾಂಬೊಳಿ ಪ್ರಟಕಣೆಯಲ್ಲಿ ತಿಳಿಸಿದ್ದಾರೆ. ಈ ಎಲ್ಲ ಕ್ರಿಡಾಪಟುಗಳು ಸ್ಪರ್ಧೆಯಲ್ಲಿ ಜಯಗಳಿಸಿ ದೇಶದ ಕೀರ್ತಿ ಹೆಚ್ಚಿಸಲಿ ಎಂದು ಧಾರವಾಡ ಅಂಜುಮನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಸೇರಿದಂತೆ ಅಂಜುಮನ್ ಸರ್ವ ಸದಸ್ಯರು ಹಾಗೂ ಪೇಡಾನಗರ ಜನತೆ ಶುಭ ಹಾರೈಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *