ಹುಬ್ಬಳ್ಳಿ-ಧಾರವಾಡ ಸುದ್ದಿ
ಫಸ್ಟ್ ಕ್ಲಾಸ್ ಕ್ರಿಕೆಟ್‌ಗೆ ನಿತಿನ್ ಭಿಲ್ಲೆ ವಿದಾಯ

ಫಸ್ಟ್ ಕ್ಲಾಸ್ ಕ್ರಿಕೆಟ್‌ಗೆ ನಿತಿನ್ ಭಿಲ್ಲೆ ವಿದಾಯ

ಧಾರವಾಡ: ಫಸ್ಟ್ ಕ್ಲಾಸ್ ಕ್ರಿಕೆಟ್‌ನ ಎಲ್ಲ ಮಾದರಿಯ ಆಟಕ್ಕೆ ನಿವೃತ್ತಿ ಘೋಷಿಸಿರುವುದಾಗಿ ರಣಜಿ ಆಟಗಾರ ನಿತಿನ್ ಬಿಲ್ಲೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


2011-12ರಲ್ಲಿ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದೆ. 2019ರಲ್ಲಿ ಬರೋಡ ವಿರುದ್ಧ ಮೋತಿಭಾಗ ಕ್ರೀಡಾಂಗಣದಲ್ಲಿ ಕೊನೆಯ ರಣಜಿ ಪಂದ್ಯ ಆಡಿದ್ದೇನೆ. 46 ರಣಜಿ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದೇನೆ. ನಾಲ್ಕು ಶತಕ, 8 ಅರ್ಧ ಶತಕ ಗಳಿಸಿದ್ದೇನೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಸಚಿನ್ ತೆಂಡಲ್ಕೂರ್, ಅಜಿತ್ ಅಗರ್ಕರ್, ಜಹೀರ್ ಖಾನ್ ಜೊತೆಗೆ ಆಟವಾಡಿದ್ದು, ಮರೆಯಲಾಗದ ಕ್ಷಣವಾಗಿತ್ತು ಎಂದು ನೆನಪಿಸಿಕೊಂಡರು.

2011ರಲ್ಲಿ ಉತ್ತರ ಪ್ರದೇಶ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ 126 ರನ್ ಹಾಗೂ 2018ರಲ್ಲಿ ಗುಜರಾತ್ ವಿರುದ್ಧ 125 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದೆ. ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಮೈಸೂರು ಮಹರಾಜ, ಬೆಳಗಾವಿ ಪ್ಯಾಂಥರ್ಸ್ ತಂಡ ಪ್ರತಿನಿಧಿಸಿದ್ದೇನೆ. ಪ್ಲೇಯಿಂಗ್ ಇಂಡೇನ್ ರೈಲ್ವೇಸ್ ತಂಡದ ನಾಯಕನಾಗುವ ಅವಕಾಶ ಲಭಿಸಿತು ಎಂದರು.


ಧಾರವಾಡದ ಗಾಂಧಿನಗರದಲ್ಲಿ ವಾಸವಾಗಿದ್ದೇನೆ. 1999ರಲ್ಲಿ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದೆ. ನಿಧಜ್‌ಕುಮಾರ ಜೈನ್ ತರಬೇತಿ ನೀಡಿದರು. ಧಾರವಾಡ ವಲಯ ಮತ್ತು ರಾಜ್ಯ ತಂಡಗಳ ಪರವಾಗಿ 15, 17, 19, 22 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದ್ದೇನೆ. ಮುಂದಿನ ದಿನದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದೇನೆ ಎಂದರು.

administrator

Related Articles

Leave a Reply

Your email address will not be published. Required fields are marked *