ಹುಬ್ಬಳ್ಳಿ-ಧಾರವಾಡ ಸುದ್ದಿ

ರಮೇಶ ಜಿಗಜಿಣಗಿ ಮಂತ್ರಿ ಮಾಡಿ

ಹುಬ್ಬಳ್ಳಿ: ಪ್ರಸ್ತುತ ವಿಸ್ತರಣೆಯಾಗಲಿರುವ ಕೇಂದ್ರ ಸಚಿವ ಸಂಪುಟದಲ್ಲಿ ವಿಜಯಪುರದ ಸಂಸದರು ಹಾಗೂ ಹಿರಿಯರಾದ ರಮೇಶ ಜಿಗಜಿಣಗಿ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವಂತೆ ಕರ್ನಾಟಕ ರಾಜ್ಯ ಮಾದರ(ಪರಿಶಿಷ್ಟ ಜಾತಿ) ಪದವೀಧರರ ಸಂಘ(ರಿ)ದ ಧಾರವಾಡ ಜಿಲ್ಲಾ ಘಟಕ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಂದ್ರಪ್ಪ ಹಾದಿಮನಿ ಅವರು, ಕೇಂದ್ರ ಸಚಿವ ಸಂಪುಟವನ್ನು ಸಧ್ಯದಲ್ಲೇ ವಿಸ್ತರಿಸುತ್ತಿದ್ದು, ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕರ್ನಾಟಕ ರಾಜ್ಯ ಮಾದರ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಒತ್ತಾಯಿಸಿದರು.
ಈ ಹಿಂದಿನ ಚುನಾವಣೆಗಳಲ್ಲಿ ಮಾದರ ಸಮಾಜವು ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ಬೇಡಿಕೆ ಇಡದೇ ಭೇಷರತ್ ಬೆಂಬಲಿಸಿ ಅತೀ ಹೆಚ್ಚು ಸಂಸದರನ್ನು ಕೇಮದ್ರಕ್ಕೆ ಕಳುಹಿಸಿದೆ. ಸಮಾಜದ ೫೩ ಲಕ್ಷ ಮತಗಳು ಕರ್ನಾಟಕ ರಾಜ್ಯದಲ್ಲಿ ನಿರ್ಣಾಯಕವಾಗಿವೆ. ರಾಜ್ಯದಿಂದ ವಿಜಯಪುರದ ರಮೇಶ ಜಿಗಜಿಣಗಿ ಹಾಗೂ ಚಿತ್ರದುರ್ಗದ ಎ.ನಾರಾಯಣ ಸ್ವಾಮಿ ಅವರು ಅಧಿಕ ಮತಗಳ ಅಂತರದಿಂದ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಜಿಗಜಿಣಗಿ ಅವರಿಗೆ ಕ್ಯಾಬಿನೆಟ್ ಸ್ಥಾನ ನೀಡಿ ಅವರ ಹಿರಿಯ ಮುತ್ಸದ್ದಿತನಕ್ಕೆ ಸಲ್ಲಬೇಕಾದ ಗೌರವವನ್ನು ಕೊಡುವಿರೆಂಬ ವಿಶ್ವಾಸವನ್ನು ಇಟ್ಟಿದ್ದೇವೆ. ಸಮುದಾಯವನ್ನು ಈ ಬಾರಿ ಕಡೆಗಣಿಸಿದಲ್ಲಿ ಪಕ್ಷವು ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆತ್ತಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಬಸಪ್ಪ ಮಾದರ, ಡಾ.ಬ್ಯಾಲ್ಯಾಳ, ರಾಜೇಶ ಸಂಕನಾಳ, ಬಸವರಾಜ ದಿಂಡಾದರ, ಗುರುನಾಥ ರೋಣ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *