ಹುಬ್ಬಳ್ಳಿ-ಧಾರವಾಡ ಸುದ್ದಿ

ಜು.೪ಕ್ಕೆ ಪೊಗರು ಕವರ್ ಸಾಂಗ್ ಬಿಡುಗಡೆ

ಹುಬ್ಬಳ್ಳಿ: ಹಿರೋಯಿಜಮ್ ಆಧರಿಸಿದ ಪೊಗರು ಕವರ್ ಸಾಂಗ್ ಜುಲೈ ೪ ರಂದು ಶಾಬುಖಾನ್ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ದೇಶಕ ಮಂಜು ಜೀವಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲ್ಬಂ ಸಾಂಗ್ ತುಂಬಾ ಚೆನ್ನಾಗಿ ಚಿತ್ರೀಕರಿಸಲಾಗಿದ್ದು, ಹಾಡಿನ ಛಾಯಾಗ್ರಹಣವನ್ನು ಸಚಿನ್ ಎಸ್ ಪಿ ಮಾಡಿದ್ದು, ವಾಣಿಜ್ಯ ರಾಜಧಾನಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ ಎಂದರು.
ನಾಯಕ ನಟನಾಗಿ ಶಾಬುಖಾನ ಜತೆ ತನ್ವಿ ಎಸ್ ಜೆ, ಭಾಗ್ಯಶ್ರೀ, ವಿದ್ಯಾ, ಕಿರಣ, ವಿನಾಯಕ, ರೀಷಿ, ಮಂಜುನಾಥ, ರೋಹನ್, ರಫೀಕ್, ರಾಹುಲ್, ಸಾಯಿ, ಶಾಹಿದ್, ಸೋಹನ್, ಸಮೀರ್ ಸೇರಿದಂತೆ ಮುಂತಾದವರು ಅಭಿನಯಿಸಿದ್ದಾರೆ. ನೃತ್ಯ ಸಂಯೋಜನೆಯನ್ನು ಅಜಯ ಜೈಕೃಷ್ಣ ಅವರು ಮಾಡಿದ್ದು, ಇದೇ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಗೋಷ್ಠಿಯಲ್ಲಿ ಅಜಯ ಜೈಕೃಷ್ಣ, ಶಾಬುಖಾನ್, ಅಲ್ಲಾವುದ್ದೀನ್ ಸೇರಿದಂತೆ ಮುಂತಾದವರು ಇದ್ದರು.

 

administrator

Related Articles

Leave a Reply

Your email address will not be published. Required fields are marked *