ಹುಬ್ಬಳ್ಳಿ-ಧಾರವಾಡ ಸುದ್ದಿ
ಉಣಕಲ್ ಪ್ರದೇಶದಲ್ಲಿ ‘ಅವಿರೋಧ’ಕ್ಕೆ ಬಿಜೆಪಿ ಸ್ಕೆಚ್!   ಸಾಮ, ಭೇದ, ದಂಡ ಪ್ರಯೋಗ ಆರಂಭ?

ಉಣಕಲ್ ಪ್ರದೇಶದಲ್ಲಿ ‘ಅವಿರೋಧ’ಕ್ಕೆ ಬಿಜೆಪಿ ಸ್ಕೆಚ್! ಸಾಮ, ಭೇದ, ದಂಡ ಪ್ರಯೋಗ ಆರಂಭ?

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯ ಅಬ್ಬರ ಇನ್ನೂ ಆರಂಭವಾಗಿಲ್ಲವಾದರೂ ಅಜಾತ ಶತ್ರು ಎಂದೆ ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿನಿಧಿಸುವ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಉಣಕಲ್ ಪ್ರದೇಶದ ಮೂರು ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಸಾಮ, ಭೇದ ಹಾಗೂ ದಂಡ ಉಪಯೋಗಿಸುವ ಯತ್ನ ಆರಂಭವಾಗಿದೆ ಎಂಬ ಮಾತುಗಳು ಕೇಳಿ ಬರಲಾರಂಬಿಸಿವೆ.
ಸೆAಟ್ರಲ್ ಕ್ಷೇತ್ರ ವ್ಯಾಪ್ತಿಯ ೩೬, ೩೭ ಹಾಗೂ ೩೮ ಮೂರು ಕ್ಷೇತ್ರಗಳಲ್ಲಿ ಈಗಾಗಲೇ ಪಾಲಿಕೆಗೆ ಬಲಗಾಲಿಟ್ಟು ಎಲ್ಲ ಆಳ-ಅಗಲ ಬಲ್ಲ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂಬ ಯತ್ನಕ್ಕೆ ಕೆಲವರು ಮುಂದಾಗಿದ್ದಾರೆನ್ನಲಾಗಿದೆ.
ಜೆಡಿಎಸ್‌ನಿದ ರಾಜಣ್ಣ ಕೊರವಿಯನ್ನೂ ತನ್ನ ತೆಕ್ಕೆಗೆ ಬಿಜೆಪಿ ತೆಗೆದುಕೊಂಡ ನಂತರ ಕಾಂಗ್ರೆಸ್, ಸಹಿತ ಇತರ ಪಕ್ಷಗಳಲ್ಲಿ ಪ್ರಭಾವಿ ಮುಖಂಡರಿಲ್ಲವಾದರೂ ಎರಡನೇ ಹಂತದ ಸಾಂಪ್ರದಾಯಿಕವಾಗಿ ಬೇರೆ ಪಕ್ಷ ಬೆಂಬಲಿಸುತ್ತಲೇ ಬಂದಿರುವ ದೊಡ್ಡ ಮತದಾರರ ಪಡೆ ಇದೆ. ೩೬,೩೭ ಎರಡೂ ಸಾಮಾನ್ಯರಿಗೆ ಹಾಗೂ ೩೮ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದ್ದು, ಈ ಮೂವರ ವಿರುದ್ದ ಯಾರೂ ಸ್ಪರ್ಧಿಸದಂತೆ ನೋಡಿಕೊಳ್ಳುವ ಯತ್ನವನ್ನು ಕೆಲವರು ನಡೆಸಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಬೇರೆ ಪಕ್ಷಗಳ ಆಕಾಂಕ್ಷಿಗಳ ಮೂಲ ಹುಡುಕುವ, ಮನವೊಲಿಸುವ ಅಲ್ಲದೇ ಅವರ ಹಿರಿಯರಿಗೆ ಆಮಿಷವೊಡ್ಡುವ ಅಲ್ಲದೇ ಅದಕ್ಕೂ ಮಿಕ್ಕಿದಲ್ಲಿ ‘ದಂಡ’ದ ಪ್ರಯೋಗದ ಅನಿವಾರ್ಯ ಎನ್ನುವ ಮಾತುಗಳು ಕೇಳಿ ಬರಲಾರಂಬಿಸಿವೆ. ಈಗಾಗಲೇ ಕಾಂಗ್ರೆಸ್ ಮತ್ತು ಆಪ್ ಸಹಿತ ಅನೇಕರಿಗೆ ಇಂತಹ ಅನುಭವ ಆಗಿದೆ ಎನ್ನಲಾಗುತ್ತಿದೆ. ನಾಮಪತ್ರ ಸಲ್ಲಿಸಲು ಮುಂದಾದರೂ ಅಂತವರ ಮೇಲೆ ಇನ್ನಿಲ್ಲದ ಒತ್ತಡ ತಂದು ನಾಮಪತ್ರವನ್ನೇ ವಾಪಸ್ ಪಡೆಯುವಂತ ಯತ್ನಕ್ಕೆ ಕೆಲವರು ಮುಂದಾಗಬಹುದಾಗಿದ್ದು ಬಿಹಾರ ರಾಜಕಾರಣದ ನೆರಳು ಗೋಚರಿಸಲಾರಂಭಿಸಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿವೆ.
ಉಣಕಲ್ ಪ್ರದೇಶ ಇನ್ನೂ ಹಳ್ಳಿ ಮತ್ತು ನಗರದ ಸಮ್ಮಿಶ್ರಣದಂತಿದ್ದು, ಪ್ರಭಾವಿಗಳ ಬಿಗಿ ಹಿಡಿತವಿರುವುದರಿಂದ ಇಂತಹ ಯತ್ನ ನಡೆದಿದೆ ಎನ್ನಲಾಗಿದ್ದು ಮುಂದಿನ ೨-೩ ದಿನಗಳಲ್ಲಿ ಯಾವ ಯಾವ ತಿರುವು ಪಡೆಯುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಹಾಲಿ ಸಿಎಂ ಬಸವರಾಜ ಬೊಮ್ಮಾಯಿಯವರ ತಂದೆ ಮಾಜಿ ಸಿಎಂ ದಿ. ಎಸ್.ಆರ್. ಬೊಮ್ಮಾಯಿ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರವೇ ಆಗಿದ್ದ ಉಣಕಲ್ ಪ್ರದೇಶದಲ್ಲಿ ಬೊಮ್ಮಾಯಿಯವರ ಅಪಾರ ಬೆಂಬಲಿಗರ ಪಡೆ ಇದೆ ಎನ್ನುವುದು ಮಹತ್ವದ ಅಂಶವಾಗಿದೆ.

ಟಿಕೆಟ್ ಅಂತಿಮಕ್ಕೆ ಮುಂದುವರಿದ ಕಸರತ್ತು
ಸಂಜೆ ಕೋರ್ ಕಮೀಟಿ-ನಾಳೆ ಮೊದಲ ಪಟ್ಟಿ

 

ಹುಬ್ಬಳ್ಳಿ: ಹುಬ್ಬಳ್ಳಿ ಮೂಲದವರೇ ಆದ ಬಸವರಾಜ ಬೊಮ್ಮಾಯಿ ರಾಜ್ಯದ ಚುಕ್ಕಾಣಿ ಹಿಡಿದ ನಂತರ ಮೊದಲ ಚುನಾವಣೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು ಇಂದು ಚುನಾವಣಾ ನಿರ್ವಹಣಾ ಸಮಿತಿಯ ಮಹತ್ವದ ಸಭೆ ಮೂರು ಪಾಲಿಕೆಗಳ ಚುನಾವಣಾ ಉಸ್ತುವಾರಿಯಾಗಿರುವ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ ನೇತೃತ್ವದಲ್ಲಿ ನಡೆದಿದೆ.
ಬಿಜೆಪಿಯಲ್ಲಿ ಟಿಕೆಟ್‌ಗಾಗಿ ೮೦೦ಕ್ಕೂ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಸ್ವತಃ ಮುಖಂಡರಿಗೆ ತಲೆ ನೋವು ತಂದ ಹಿನ್ನೆಲೆಯಲ್ಲಿ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡುವದಾಗಿ ಹೇಳಲಾಗಿತ್ತಾದರೂ ನಾಳೆ ಹಳಬರ, ಅನುಭವಿಗಳ, ಅಲ್ಲದೇ ನಾಯಕರುಗಳ ನಂಬುಗೆಯನ್ನು ಗಳಿಸಿರುವವರ ಮೊದಲ ಪಟ್ಟಿಯನ್ನು ಹು.ಧಾ ಉಸ್ತುವಾರಿ, ಮಾಜಿ ಡಿಸಿಎಂ ಲಕ್ಷö್ಮಣ ಸವದಿ ಅವರು ಪ್ರಕಟಿಸುವ ಸಾಧ್ಯತೆಗಳಿವೆ.
ಇಂದು ನಿರ್ವಹಣಾ ಸಮಿತಿ ಸಭೆ ನಂತರ ಸ್ಕಿçÃನಿಂಗ್ ಕಮೀಟಿ ಸಭೆ ವಿಮಾನ ನಿಲ್ದಾಣದ ಹತ್ತಿರದ ಹೊಟೆಲ್‌ನಲ್ಲಿ ನಡೆದಿದ್ದು, ಸಂಜೆ ಕೋರ್ ಕಮೀಟಿ ಸಭೆ ನಡೆಯಲಿದ್ದು, ಯಾವುದೇ ಸಮಸ್ಯೆಯಿಲ್ಲದ ೨೦ರಿಂದ ೩೦ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ನಿಶ್ಚಿತ ಎನ್ನಲಾಗುತ್ತಿದೆ.
ಈಗಾಗಲೇ ಉಪ ಸಮಿತಿಗಳಿಗೆ ಚುನಾವಣಾ ಜವಾಬ್ದಾರಿ ವಹಿಸಲಾಗಿದ್ದರೂ ಒಂದೊAದು ವಾರ್ಡನಲ್ಲಿ ೮-೧೦ ಆಕಾಂಕ್ಷಿಗಳಿದ್ದು, ಕೆಲವೆಡೆ ಅಲ್ಲಲ್ಲಿ ಬಂಡಾಯದ ಮುನ್ಸೂಚನೆ ಈಗಲೇ ದೊರೆಯಲಾರಂಬಿಸಿದೆ.
ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಪಶ್ಚಿಮ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಅವರೇ ನಿರ್ಣಾಯಕರಾಗಿದ್ದು ಅವರಿಬ್ಬರು ಹೇಳಿದವರೇ ಅಂತಿಮವಾಗಬಹುದಾಗಿದ್ದು, ಪೂರ್ವದಲ್ಲಿ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹಾಗೂ ಧಾರವಾಡ ೭೧ರಲ್ಲಿ ಅಮೃತ ದೇಸಾಯಿ ನಿರ್ಣಾಯಕರಾಗಬಹುದಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಾಸಕರು ಹಾಗೂ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ, ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *