ಹುಬ್ಬಳ್ಳಿ-ಧಾರವಾಡ ಸುದ್ದಿ
ಪಾಲಿಕೆ ಚುನಾವಣೆ ಘೋಷಣೆ ವಿರುದ್ಧ ಸುಪ್ರೀಂಗೆ?

ಪಾಲಿಕೆ ಚುನಾವಣೆ ಘೋಷಣೆ ವಿರುದ್ಧ ಸುಪ್ರೀಂಗೆ?

ಹುಬ್ಬಳ್ಳಿ: ರಾಜ್ಯ ಚುನಾವಣಾ ಆಯೋಗದಿಂದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ 3 ಮಹಾನಗರ ಪಾಲಿಕೆಗಳ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಇದರ ವಿರುದ್ದ ಕೆಲವರು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾಗಿದ್ದಾರೆನ್ನಲಾಗಿದೆ.
ಪಾಲಿಕೆ ಚುನಾವಣೆ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರಾದರೂ ಇಷ್ಟು ದಿಢೀರ್ ಆಗಿ ಚುನಾವಣೆ ಘೋಷಣೆಯಾಗಿರುವುದು ಹಲವರಿಗೆ ಶಾಕ್ ನೀಡಿದ್ದು, ಇನ್ನು ಕೇವಲ 4 ದಿನದಲ್ಲಿ ಪಾಲಿಕೆ ಚುನಾವಣೆಗೆ ಸಜ್ಜಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ, ಕಲಬುರಗಿ ಅಲ್ಲದೇ ಹುಬ್ಬಳ್ಳಿ ಮೂಲದ ಒಬ್ಬರು ಮೂರು ಪಾಲಿಕೆಗಳ ಚುನಾವಣೆ ಡಿಸೆಂಬರ್‌ವರೆಗೆ ಮುಂದೂಡಬೇಕೆAದು ಇಂದೇ ಸುಪ್ರೀಂ ಕೋರ್ಟ್ನ ಮೊರೆ ಹೋಗಲಿದ್ದಾರೆನ್ನಲಾಗಿದೆ.
ಪ್ರಸಕ್ತ ಕೋವಿಡ್ ಮೂರನೇ ಅಲೆ, ಅಲ್ಲದೇ ಸಚಿವ ಸಂಪುಟದ ಮುಂದೂಡಿಕೆ ನಿರ್ಣಯವನ್ನು ಮುಂದಿಟ್ಟು ಚುನಾವಣಾ ಆಯೋಗ ಪ್ರಕಟಿಸಿದ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ತರಲು ಮುಂದಾಗಿದ್ದಾರೆನ್ನಲಾಗಿದ್ದರೂ ಅಧಿಕೃತವಾಗಿ ಯಾರೂ ದೃಢಪಡಿಸಿಲ್ಲ.
ಕಳೆದ ದಿ. 4ರಂದು ಹೈಕೋರ್ಟ ಚುನಾವಣಾ ಆಯೋಗಕ್ಕೆ ಸ್ಪಷ್ಟ ನಿರ್ಧಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿದ್ದು, ಚುನಾವಣಾ ವೇಳಾಪಟ್ಟಿಯ ವಿವರದೊಂದಿಗೆ ಕೋರ್ಟ್ಗೆ ನಾಳೆ ಮಾಹಿತಿ ನೀಡಲಿದೆ ಎನ್ನಲಾಗಿದೆ.
ಅವಧಿ ಸಂಸ್ಥೆಗಳ ಪೂರ್ಣಗೊಂಡಿರುವ ರಾಜ್ಯದ ಕೆಲ ನಗರ ಸ್ಥಳೀಯ “ಚುನಾವಣೆಗೆ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ, ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎನ್. ಓಕ್ ನೇತೃತ್ವದ ವಿಭಾಗಿಯ ಪೀಠವೇ ನಿರ್ದೇಶನ ನೀಡಿರುವುದರಿಂದ ಪಾಲಿಕೆ ಚುನಾವಣೆ ಮುಂದೂಡಲ್ಪಡುವ ಸಾಧ್ಯತೆ ಕಡಿಮೆಯಿದ್ದು, ನಾಳೆ ವಿಚಾರಣೆಗೆ ಬರಲಿದೆ.
ತನ್ಮಧ್ಯೆ ಧಾರವಾಡ ಹೈಕೋರ್ಟನಲ್ಲಿ ಸಲ್ಲಿಕೆಯಾಗಿರುವ ಮೀಸಲಾತಿ ನಿಗದಿ ಹಾಗೂ ಪರಿಶಿಷ್ಟರಿಗೆ ಅನ್ಯಾಯ ಕುರಿತ ಅರ್ಜಿ ವಿಚಾರಣೆ ದಿ.16ಕ್ಕೆ ಮುಂದೂಡಿಕೆಯಾಗಿದೆ.
ಮೆಮೊ: ಹೈಕೋರ್ಟ್ನ ಧಾರವಾಡ ಪೀಠದಲ್ಲಿ ಅರ್ಜಿ ಬಾಕಿ ಇರುವಾಗ ರಾಜ್ಯ ಚುನಾವಣಾ ಆಯೋಗ ಬೆಳಗಾವಿ ಪಾಲಿಕೆ ಚುನಾವಣೆ ಘೋಷಿಸಿದ್ದು, ಇದರ ವಿರುದ್ಧ ಇಂದು ಮೆಮೊ ಸಲ್ಲಿಸಲು ಅರ್ಜಿದಾರರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಚುನಾವಣಾ ಆಯೋಗದ ಸೂಚನೆಯಂತೆ ಹು.ಧಾ.ಪಾಲಿಕೆ ಚುನಾವಣೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಈ ಹಿಂದೆ ಬಳ್ಳಾರಿ ಮಹಾನಗರಪಾಲಿಕೆ ಚುನಾವಣೆ ವೇಳೆ ಸಹ ಕೆಲವರು ಚುನಾವಣೆ ಮುಂದೂಡಿಕೆ ಸಂಬAಧ ಕೋರ್ಟ ಮೆಟ್ಟಿಲು ಹತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಒಮ್ಮೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ ನಂತರ ತಡೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

administrator

Related Articles

Leave a Reply

Your email address will not be published. Required fields are marked *