ಹುಬ್ಬಳ್ಳಿ-ಧಾರವಾಡ ಸುದ್ದಿ
ಬಿಜೆಪಿ 2ನೇ ಪಟ್ಟಿ: ಘಟಾನುಘಟಿಗಳಿಗೆ ಶಾಕ್ ಸಾಧ್ಯತೆ    ರಾತ್ರಿ ವೇಳೆಗೆ ಎರಡನೇ ಲಿಸ್ಟ ಬಿಡುಗಡೆ

ಬಿಜೆಪಿ 2ನೇ ಪಟ್ಟಿ: ಘಟಾನುಘಟಿಗಳಿಗೆ ಶಾಕ್ ಸಾಧ್ಯತೆ ರಾತ್ರಿ ವೇಳೆಗೆ ಎರಡನೇ ಲಿಸ್ಟ ಬಿಡುಗಡೆ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಮೊದಲ ೩೦ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು ಎರಡನೆ ಪಟ್ಟಿಯಲ್ಲಿ ಅನೇಕ ಘಟಾನುಘಟಿಗಳಿಗೆ ಕೊಕ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಮಧ್ಯರಾತ್ರಿಯೊಳಗೆ ಇನ್ನೊಂದು ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದ್ದು ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಇಂದು ಆಗಮಿಸಿದ್ದು ಸಂಜೆ ಕೋರ ಕಮೀಟಿ ಸಭೆಯಲ್ಲಿ ೨೫ರಿಂದ ೩೦ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದು ನಾಳೆ ಅಥವಾ ನಾಡಿದ್ದು ಪೂರ್ಣ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಗಳಿವೆ.
ಮಾಜಿ ಸಿಎಂ ಜಗದೀಶ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಮಹಾನಗರ ಅಧ್ಯಕ್ಷ ಅರವಿಂದ ಬೆಲ್ಲದ ಸೇರಿದಂತೆ ಇವರುಗಳಿಗೆ ಆಕಾಂಕ್ಷಿಗಳ ಒತ್ತಡ ಸಾಕು ಸಾಕಾಗಿಸಿದ್ದು ಕಳೆದ ಅವಧಿಯಲ್ಲಿ ಪಾಲಿಕೆ ಸದಸ್ಯರಾಗಿದ್ದ ಅನೇಕರಿಗೆ ಕಾಂಗ್ರೆಸ್ ರೀತಿಯಲ್ಲೇ ಬಿಜೆಪಿ ಶಾಕ್ ನೀಡಲಿದೆ ಎನ್ನಲಾಗುತ್ತಿದೆ. ಉಣಕಲ್ಲಿನ ಒಂದು ವಾರ್ಡಗೆ ಹಾಗೂ ವಿದ್ಯಾನಗರದ ಎರಡು ವಾರ್ಡಗಳಿಗೆ ಕಳೆದ ಬಾರಿ ಪಾಲಿಕೆಯಲ್ಲಿದ್ದವರಿಗೆ ಈ ಬಾರಿ ತೀವ್ರ ವಿರೋಧ ವ್ಯಕ್ತವಾಗಿದ್ದು ಅವರಿಗೆ ಟಿಕೆಟ್ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಮಾಹಿತಿಯಿದೆ.
ಸಂಭವನೀಯ ಎರಡನೆ ಪಟ್ಟಿಯ ಅಭ್ಯರ್ಥಿಗಳು ಇಂತಿದ್ದಾರೆ-
ವಾರ್ಡ ನಂ. 15-ಸಂಜಯ ಕಪಟಕರ, 35-ಮಲ್ಲಿಕಾರ್ಜುನ ಗುಂಡೂರ, 36-ರಾಜಣ್ಣ ಕೊರವಿ, 38-ತಿಪ್ಪಣ್ಣ ಮಜ್ಜಗಿ, 47-ರೂಪಾ ಶೆಟ್ಟಿ/ಗೌರಿ ಡಂಗನವರ, 57-ಕಲ್ಪನಾ ನಾಯಕ/ಮೀನಾಕ್ಷಿ ವಂಟಮೂರಿ, 66-ಕಮಲಾಕ್ಷಿ ಸಜ್ಜನರ, 64-ರುಕ್ಮಿಣಿ ಶೇಜವಾಡಕರ, 67-ಶಿವು ಮೆಣಸಿನಕಾಯಿ

ಉಣಕಲ್ ಪ್ರದೇಶದಲ್ಲಿ ಮುಂದುವರಿದ ಮೇಲಾಟ!
ಉಣಕಲ್ ಪ್ರದೇಶದಲ್ಲಿ ಮೂವರು ಅಭ್ಯರ್ಥಿಗಳ ಅವಿರೋಧ ಆಯ್ಕೆ ಮಾಡಿ ಇತಿಹಾಸ ನಿರ್ಮಿಸಲು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೆಲ ಮಾಜಿ ಸಿಎಂ ಜಗದೀಶ ಶೆಟ್ಟರ್ ಮುಂದಾಗಿದ್ದು ಮಾಧ್ಯಮಗಳಲ್ಲಿ ಬಂದ ನಂತರವೂ ಈ ತಂತ್ರ ಮುಂದುವರಿದಿದೆ ಎನ್ನಲಾಗಿದೆ.
ನಿನ್ನೆ ಸಹ ಕೆಲ ಪಕ್ಷಗಳ ಆಕಾಂಕ್ಷಿಗಳ ಮನೆಯವರಿಗೆ ತಮ್ಮದೇ ಆದ ಭಾಷೆಯಲ್ಲಿ ಕೆಲವರು ಹೇಳುವ ಯತ್ನ ಮಾಡಿದ್ದಾರೆನ್ನಲಾಗಿದೆ.
ಆಕಾಂಕ್ಷಿಗಳಾಗಿದ್ದ ಹಲವರು ಈ ಬಾರಿ ನಮ್ಮ ಕೈ ಕಟ್ಟಿ ಹಾಕಲಾಗಿದೆ ಎಂದು ಬಹಿರಂಗವಾಗಿ ಅಸಹಾಯಕತೆ ತೋಡಿಕೊಳ್ಳುತ್ತಿದ್ದು ಒಂದು ವೇಳೆ ಯಾರಾದರೂ ಸ್ಪರ್ಧೆಗಿಳಿದಲ್ಲಿ 1993 ರ ಮುಂಗೈ ಜೋರಿನ ಪರಿಣಾಮ ಪುನರಾವರ್ತನೆಯಾದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರಲಾರಂಬಿಸಿವೆ.

 

ಮಾಜಿ ಸದಸ್ಯರ ಬಂಡಾಯದ ಬಾವುಟ:
ಬಿಜೆಪಿಯಲ್ಲಿ ಅನೇಕ ಮಾಜಿ ಕಾರ್ಪೋರೇಟರ್‌ಗಳಿಗೆ ಕೈ ತಪ್ಪಲಿರುವ ಹಿನ್ನೆಲೆಯಲ್ಲಿ ಕೆಲವರು ಬಂಡಾಯದ ರೂಪದಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುವ ಸಿದ್ದತೆಯಲ್ಲಿದ್ದಾರೆ.
ಕೆಲವರಿಗೆ ಬೇರೆ ಪಕ್ಷಗಳು ತಾಂಬೂಲ ಇಟ್ಟರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

administrator

Related Articles

Leave a Reply

Your email address will not be published. Required fields are marked *