ಹುಬ್ಬಳ್ಳಿ-ಧಾರವಾಡ ಸುದ್ದಿ
ಪೂರ್ವ-ಪಶ್ಚಿಮ ಕಾಂಗ್ರೆಸ್ ಪಟ್ಟಿ ಬಹುತೇಕ ಅಂತಿಮ

ಪೂರ್ವ-ಪಶ್ಚಿಮ ಕಾಂಗ್ರೆಸ್ ಪಟ್ಟಿ ಬಹುತೇಕ ಅಂತಿಮ

ಹುಬ್ಬಳ್ಳಿ : ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಅಂತಿಮಕ್ಕೆ ತೀವ್ರ ಕಸರತ್ತು ನಡೆಸಿದ್ದು ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳ ಪೈಕಿ ಸುಮಾರು ಶೇ.೮೦ರಷ್ಟು ಅಭ್ಯರ್ಥಿಗಳ ಆಯ್ಕೆ ಅಂತಿಮಗೊ0ಡಿದ್ದು ಸೆಂಟ್ರಲ್ ಮತ್ತು ಧಾರವಾಡ ೭೧ರ ವ್ಯಾಪ್ತಿಗೆ ಇಂದು ಸಭೆ ನಡೆಯಲಿದೆ.
ಈ ಎರಡೂ ಕ್ಷೇತ್ರಗಳ ಆಯ್ಕೆಯನ್ನು ನಗರದ ಹೊರ ವಲಯದಲ್ಲಿ ಇಂದು ಅಂತಿಮಗೊಳಿಸುವ ಸಾಧ್ಯತೆಗಳಿವೆ.
ಚುನಾವಣಾ ಸಮಿತಿಯ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಧ್ರುವ ನಾರಾಯಣ, ಮಾಜಿ ಸಚಿವರಾದ ತನ್ವೀರ ಸೇಠ, ಶಿವಾನಂದ ಪಾಟೀಲ ಸಮ್ಮುಖದಲ್ಲಿ ನಡೆದ ಸರಣಿ ಸಭೆಯಲ್ಲಿ ಸ್ಥಳೀಯ ಮುಖಂಡರ ನಡುವಣ ಮಾತಿನ ಚಕಮಕಿ ಮಧ್ಯೆ ಪೂರ್ವದಲ್ಲಿ ನಾಲ್ಕೆöÊದು ಹಾಗೂ ಪಶ್ಚಿಮದ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿ ಒಮ್ಮತದಿಂದ ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಪಟ್ಟಿ ಅಖೈರುಗೊಳಿಸಿ ಬೆಂಗಳೂರಿಗೆ ಕಳುಹಿಸಲಿದ್ದು ಅಲ್ಲಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರೇ ಅಂತಿಮಗೊಳಿಸುವರೆನ್ನಲಾಗಿದೆ.
ಪೂರ್ವ ಕ್ಷೇತ್ರದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಕ್ಷೇತ್ರದಲ್ಲಿ ಬಹುತೇಕ ಅರ್ಹರನ್ನು ಗುರುತಿಸಿ ಅಂತಿಮಗೊಳಿಸಿದ್ದರೂ ಅಲ್ಪಸ್ವಲ್ಪ ಭಿನ್ನಮತ ಸಹಜವಾಗಿದ್ದು ವಾರ್ಡ ನಂ ೭೧,೭೨, ೮೨ ಮಾತ್ರ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ.ಇನ್ನೂ ಅಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.
ಪಶ್ಚಿಮ ಮತ್ತು ಪೂರ್ವ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಇಂತಿದೆ-
ವಾ.ನA. 12 -ಮಲ್ಲಿಕಾರ್ಜುನ ತಾವಶಿ, 13-ಹೇಮಂತ ಗುರ್ಲಹೊಸೂರ, 14-ಶಂಭು ಸಾಲಮನಿ, 18-ಚಂದ್ರು ಪೂಜಾರ, 19-ಅನ್ನಪೂರ್ಣಾ ಬ. ಮಲಕಾರಿ, 20-ಕವಿತಾ ದಾನಪ್ಪ ಕಬ್ಬೇರ, 21-ಸುಭಾಶ ಶಿಂಧೆ, 22-ಶ್ರೀಮತಿ ದೇಸಾಯಿ/ ಬಳಬಟ್ಟಿ, 23-ಎಚ್.ಎಂ. ರಾಜು, 25-ನೇತ್ರಾವತಿ ತಳವಾರ, 26-ಲಕ್ಷಿö್ಮ ಜಾಧವ, 27-ಶ್ರೀಮತಿ ಡೊಳ್ಳಿನ, 28-ಕರಿಯಪ್ಪ ಬಿಸಗಲ್/ ಚನ್ನಪ್ಪ ಮಳಗಿ, 29-ರವಿ ದಾಸನೂರ/ ಷಣ್ಮುಖ ಬೆಟಗೇರಿ, 30-ನವೀದ ಮುಲ್ಲಾ, 31-ಶಂಕರ ಹೊಸಮನಿ, 33-ಇಮ್ರಾನ ಯಲಿಗಾರ / ದೀಪಾ ಗೌರಿ, 34-ಮಂಗಳಾ ಗೌರಿ, 60-ಕೌಸರಬಾನು ಬಶೀರ ಗೂಡಮಾಲ್, 61-ದೊರೆರಾಜ ಮಣಿಕುಂಟ್ಲ, 62-ಶ್ರೀಮತಿ ಅಧೋನಿ, 63- ಇಲಿಯಾಸ ಮನಿಯಾರ, 64-ಸುರೇಖಾ ಕುಲಕರ್ಣಿ, 65-ಸುನಿತಾ ಪ್ರಕಾಶ ಬುರಬುರೆ, 66-ಅಶ್ವಿನಿ ಮೆಹರವಾಡೆ, 67-ಅಜ್ಜಪ್ಪ ಬೆಂಡಿಗೇರಿ/ ದುಂಡರೆಡ್ಡಿ, 68-ನಿರಂಜನ ಹಿರೇಮಠ/ ಅಜ್ಜಪ್ಪ ಬೆಂಡಿಗೇರಿ, 69-ಕಮಲಾ ಬೆಳದಡಿ, 70-ಗೀತಾ ಹೊಸಮನಿ, 73-ಶೋಭಾ ವಾಲಿ, 75-ಮನ್ಸೂರಾ ಮುದಗಲ್, 76-ಸಾಯಿರಾಬಾನು ಎ. ಕಿತ್ತೂರ, 77-ಬತುಲ್ ಕಿಲ್ಲೇದಾರ, 78-ಶಿವಗಂಗಾ ಮಹಾಂತಶೆಟ್ಟರ್, 80-ಯಲ್ಲಮ್ಮ ಪಲ್ಲಾಟಿ, 81-ಮಂಜುಳಾ ಜಾಧವ, 82-ವಿದ್ಯಾ ಪಾಟೀಲ/ ಲಕ್ಷಿö್ಮ ಜಾಧವ/ ಶ್ರೀಮತಿ ಅಸುಂಡಿ,

ಪಶ್ಚಿಮದಲ್ಲಿ ಹಳೆ ಕೈ ಸದಸ್ಯರಿಗೆ ಟಿಕೆಟ್ ನಕಾರ
ಹಲವರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕೆ?
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್‌ಗಳಿಗೆ ಒಬ್ಬರೂ ಮಣೆ ಹಾಕಿಲ್ಲವಾಗಿದ್ದು ಅನೇಕರು ಸ್ವತಂತ್ರವಾಗಿ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.
ಹಳಬರ ಪೈಕಿ ಹಿರಿಯ ಸದಸ್ಯ ಸುಭಾಸ ಶಿಂಧೆಯವರಿಗೆ ೨೧ರಿಂದ ಕಾಂಗ್ರೆಸ್ ಟಿಕೆಟ್ ನೀಡಲು ಬಯಸಿದರೂ ಸ್ವತ: ಅಭ್ಯರ್ಥಿ ಹಿಂದೇಟು ಹಾಕುತ್ತಿದ್ದು, 14ನೇ ವಾರ್ಡಿನಿಂದ ಟಿಕೆಟ್ ಬಯಸಿದ್ದಾರೆನ್ನಲಾಗಿದೆ. ಅಲ್ಲದೇ ಬಿಜೆಪಿ ಸಹ ಈ ವಾರ್ಡಗೆ ಟಿಕೆಟ್ ಘೋಷಿಸಿಲ್ಲವಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಈ ಹಿಂದೆ ಕೈ ಪಾಲಿಕೆ ಸದಸ್ಯರಾಗಿದ್ದ ಶೈಲಾ ಕಾಮರೆಡ್ಡಿ (22),ರಘು ಲಕ್ಕಣ್ಣವರ, ಮಹಾವೀರ ಶಿವಣ್ಣವರ, ಕರೆಪ್ಪ ಬಿಸಗಲ್, ಕಿಸಾನ್ ಮೋರ್ಚಾದ ಸಿದ್ದಾರೂಢ ಶಿಶನಳ್ಳಿ, ಮಹಾನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ ಸಹಿತ ಅನೇಕರು ಸ್ವತಂತ್ರರಾಗಿ ಸೆಡ್ಡು ಹೊಡೆಯುವ ಸಾಧ್ಯತೆಗಳು ಇಲ್ಲದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

 

೭೧ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ?
ಪೂರ್ವ ಕ್ಷೇತ್ರದಲ್ಲಿ 71ರ ಕಾಂಗ್ರೆಸ್ ಟಿಕೆಟ್ ದೊರೆಯದೇ ಹೋದಲ್ಲಿ ಪಾಲಿಕೆ ಮಾಜಿ ವಿಪಕ್ಷ ನಾಯಕ ಗಣೇಶ ಟಗರಗುಂಟಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಬಹುಸಂಖ್ಯಾತ ಮುಸ್ಲಿಂರೇ ಈ ಪ್ರದೇಶದಲ್ಲಿರುವುದರಿಂದ ಆ ಸಮುದಾಯದವರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದು ಅಂತಿಮವಾಗಿ ಮೂವರ ಹೆಸರು ಪಟ್ಟಿಯಲ್ಲಿದೆ ಎನ್ನಲಾಗಿದೆ.
ಅಲ್ಲದೇ ಪೂರ್ವ ಕ್ಷೇತ್ರದ ಪ್ರಭಾವಿ ಯುವ ಮುಖಂಡರೊಬ್ಬರು ತಮ್ಮ ಪತ್ನಿಗೆ ಕಡೆಯ ವಾರ್ಡನಲ್ಲಿ ಟಿಕೆಟ್ ದೊರೆಯದಿದ್ದಲ್ಲಿ ಬಿಜೆಪಿಗೆ ಹೋಗುವರೆಂಬ ಮಾತೂ ನಿನ್ನೆಯಿಂದ ಪ್ರಭಲವಾಗಿ ಕೇಳಿ ಬರುತ್ತಿದೆ.

 

administrator

Related Articles

Leave a Reply

Your email address will not be published. Required fields are marked *