ಹುಬ್ಬಳ್ಳಿ-ಧಾರವಾಡ ಸುದ್ದಿ
ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದ್ದ ಮೌಲಾನಾ ಅಜಾದ್

ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದ್ದ ಮೌಲಾನಾ ಅಜಾದ್

We must not for a moment forget, it is a birthright of every individual to receive at    least the basic education without which he cannot fully discharge his duties as a citizen ಎಂದು ಹೇಳಿದ ಮೌಲಾನಾ ಅಬ್ದುಲ್ ಕಲಾಂ ಅಜಾದ್.
ಭಾರತದ ಪ್ರಥಮ ಶಿಕ್ಷಣ ಸಚಿವರಾಗಿದ್ದ ಭಾರತ ರತ್ನ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ 11 ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸ ಲಾಗುತ್ತಿದೆ. ಅವರು ಜನಿಸಿದ್ದು ನವೆಂಬರ್ 11, 1888ರಲ್ಲಿ.
ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ ‘ಆಜಾದ್’ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ತಂದೆ ಮೌಲಾನಾ ಸಯ್ಯಿದ್ ಸುಮಾರು 12 ಪುಸ್ತಕ ಬರೆದವರು. ತಾಯಿ ಶೇಖಾ ಅಲಿಯಾಸ್, ಮೆದಿನಾ ದ ದೊಡ್ಡ ವಿದ್ವಾಂಸರ ಮಗಳು. ಮನೆಯಲ್ಲೇ ಆಜಾದ್ ರವರಿಗೆ ಶಿಕ್ಷಣ ಆಯಿತು. ಉರ್ದು, ಹಿಂದಿ, ಅರೇಬಿಕ್, ಪರ್ಶಿಯನ್, ಇಂಗ್ಲಿಷ್ ಭಾಷೆಗಳನ್ನೂ, ಗಣಿತ, ತತ್ತ್ವಶಾಸ್ತ್ರ, ಇತಿಹಾಸ, ಶರಿಯಾತ್ ಮತ್ತು ವಿಜ್ಞಾನವನ್ನು ಕರಗತ ಮಾಡಿಕೊಂಡರು. ಅವರ ತಂದೆ ಮೆಕ್ಕಾದಲ್ಲಿ ಬಹು ದೊಡ್ಡ ವಿದ್ವಾಂಸರು. ಕಲ್ಕತ್ತಾಗೆ ಬಂದ ಅವರ ತಂದೆಯವರನ್ನು, ಅವರ ವಿದ್ವತ್ತಿಗೆ ಮಾರುಹೋಗಿ ಜನರು ಬಲವಂತ ಮಾಡಿ ಭಾರತದಲ್ಲಿಯೇ ಉಳಿಸಿಕೊಂಡರು.
ಪತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು. ಖಿಲಾಫತ್ ಚಳವಳಿಯ ನೇತೃತ್ವ ವಹಿಸಿದ್ದ ಆಜಾದರು ಮಹಾತ್ಮ ಗಾಂಧೀಜಿಯವರ ನಿಕಟವರ್ತಿ ಗಳಾದರು. ಮಹಾತ್ಮರು ಆಯೋಜಿಸಿದ್ದ ಅಸಹಕಾರ ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ ಯುವಕ ಎಂದು ಹೆಸರಾದರು.
ಅಕ್ಟೋಬರ್ 1920 ರಂದು ಅವರನ್ನು ’ಜಾಮಿಯಾ ಮಿಲಿಯಾ ಇಸ್ಲಾಮಿಯಾ’ ಸ್ಥಾಪನಾ ಸಮಿತಿಗೆ ಆಯ್ಕೆ ಮಾಡಲಾಯಿತು. ಆಲೀಘಡದಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾನಿಲಯವನ್ನು ದಿಲ್ಲಿಗೆ ಸ್ಥಳಾಂತರಿಸಿದರು. ಈ ವಿಶ್ವವಿದ್ಯಾಲಯದ ಮುಖ್ಯ ದ್ವಾರಕ್ಕೆ ಇವರ ಹೆಸರನ್ನೇ ಇಡಲಾಗಿದೆ.
ಸ್ವಾತಂತ್ರ್ಯದ ಸಮಯದಲ್ಲಿ ದೇಶದ ವಿಭಜನೆಯ ಕೂಗನ್ನು ಬೆಂಬಲಿಸದಿದ್ದ ಅವರು ಭಾರತದ ಪರವಾಗಿಯೇ ಇದ್ದರು. ಹಿಂದೂ ಮುಸ್ಲಿಂ ಭಾವೈಕ್ಯತೆ ಯನ್ನು ಸದಾ ಮಾನ್ಯ ಮಾಡುತ್ತಿದ್ದರು. ಆಜ಼ಾದ್ ಅವರು 20ನೇ ಶತಮಾನ ಕಂಡ ದೊಡ್ಡ ಉರ್ದು ವಿದ್ವಾಂಸರು. ಅವರ ಪ್ರಮುಖ ಬರೆವಣಿಗೆಗಳು- India Wins Freedom, ಘುಬರ್-ಎ-ಖತಿರ್, ತಜ಼್ಕಿರಾಹ್, ತರ್ಜುಮನುಲ್ ಕುರಾನ್.
ಸ್ವತಂತ್ರ ಭಾರತದಲ್ಲಿ ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಅವರು ಹುಟ್ಟಿದ ಈ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಣೆಗೆ ತರಲಾಗಿದೆ. ಆಗ ಅವರು ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವ ರಾಷ್ಟ್ರೀಯ ಶಿಕ್ಷಣವನ್ನು ಜಾರಿಗೆ ತಂದಿದ್ದರು.
ಸ್ವತಂತ್ರ ಭಾರತದಲ್ಲಿ ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಅವರು ಹುಟ್ಟಿದ ಈ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಣೆಗೆ ತರಲಾಗಿದೆ
ಐಐಟಿ ಮತ್ತು ಯುಜಿಸಿ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

bhagyajyoti
ಭಾಗ್ಯಜ್ಯೋತಿ ಕೋಟಿಮಠ
ಮುಖ್ಯಶಿಕ್ಷಕಿ, ಶಿರೂರು, ತಾ.ನವಲಗುಂದ
administrator

Related Articles

Leave a Reply

Your email address will not be published. Required fields are marked *