ಹುಬ್ಬಳ್ಳಿ-ಧಾರವಾಡ ಸುದ್ದಿ

ಅರಿವಿನ ದೀಪ ಬೆಳಗಿಸುವ ಗುರು

ಮಹಾಭಾರತದಲ್ಲಿ ಇರುವುದೆಲ್ಲವೂ ನಮ್ಮ ಬದುಕಿನಲ್ಲಿದೆ. ನಮ್ಮ ಬದುಕಿನಲ್ಲಿರು ವುದೆಲ್ಲವೂ ಮಹಾಭಾರತದಲ್ಲಿದೆ. ಹೌದು ಐದನೇ ವೇದವೆಂದೇ ಕರೆಯಲ್ಪಡುವದು ಮಹಾಭಾರತ. ಮಹಾಭಾರತದಲ್ಲಿ ಏನಿಲ್ಲ. ಎಲ್ಲವೂ ಇದೆ. ದ್ವೇಷ- ಪ್ರೀತಿ, ಕೆಡಕು- ಒಳಿತು, ನಕಾರಾತ್ಮಕತೆ ಸಕಾರಾತ್ಮಕತೆ, ಆಧುನಿಕ ಕಾಲದ ಸಂದೇಶ ರವಾನೆಗಳು, ಪ್ರಣಾಳ ಶಿಶು, ವಿಮಾನ ಎಲ್ಲವೂ, ಎಲ್ಲವೂ ಇದೆ,


ಅಲ್ಲಿ ಒಂದು ಸಂದೇಶ ಮುಖ್ಯವಾಗಿ ಇದೆ ಎಷ್ಟೇ ಕೆಡಕುಗಳು ಉಂಟಾದರೂ ಕೊನೆಗೆ ಜಯ ಸಿಗುವುದು ಒಳಿತಿಗೆ, ಎಂಬ ಅರ್ಥ. ಇಂತಹ ಒಂದು ಮಹಾಭಾರತದ ಕರ್ತೃ ವೇದವ್ಯಾಸರು ಆ ವೇದವ್ಯಾಸರ ಜನ್ಮದಿನದ ನಿಮಿತ್ಯ ಆಚರಿಸುವ ಪೂರ್ಣಿಮೆ ಎಂದು ವ್ಯಾಸ ಪೂರ್ಣಿಮೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಗೌತಮ ಬುದ್ಧರು ಸಾರನಾಥದಲ್ಲಿ ತಮ್ಮ ಮೊದಲ ಗುರು ಉಪದೇಶವನ್ನು ಐದು ಜನ ಶಿಷ್ಯರಿಗೆ ನೀಡಿದ ದಿನವೂ ಇದಾಗಿದೆ. ಈ ದಿನ ಗುರುವಿನ ಪೂಜೆಯು ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ.

ನನಗೆ ಪಾಠ ಕಲಿಸಿದ ಪ್ರತಿಯೊಬ್ಬರು ನನಗೆ ಗುರುವಾಗಿ ಕಣ್ಣ ಮುಂದೆ ನಿಲ್ಲುತ್ತಾರೆ ಮುಖ್ಯವಾಗಿ ನನಗೆ ಕೈ ಹಿಡಿದು ನಡೆಸಿದ ಅಮ್ಮ, ನನಗೆ ಬುದ್ಧಿ ಹೇಳಿದಂತಹ ತಂದೆ ನನ್ನ ಜೀವನದಲ್ಲಿ ನನ್ನ ಅಕ್ಕ- ತಂಗಿಯರು, ನನ್ನ ಅಣ್ಣ- ತಮ್ಮಂದಿರು, ನನ್ನ ಜೊತೆಗೆ ಯಾವಾಗಲೂ ಇರುವ ನನ್ನ ಗೆಳೆಯರು-ಗೆಳತಿಯರು, ಮುಂದೆ ನನ್ನ ವೈವಾಹಿಕ ಜೀವನದಲ್ಲಿ ಬರುವ ಗಂಡ ಅಥವಾ ಹೆಂಡತಿ ಹೀಗೆ ಬೆಳೆಯುತ್ತಾ ಹೋಗುತ್ತದೆ ಪಟ್ಟಿ. ಸಾಮಾಜಿಕವಾಗಿ ನಾನೊಂದು ಶಾಲೆಯಲ್ಲಿ ಕಲಿತಾಗ ನನಗೆ ಅಕ್ಷರ ಹೇಳಿದಂತಹ ಮೊದಲ ಗುರು ಮುಂದೆ ನನ್ನ ಜೀವನದ ಬೇಕಾದಷ್ಟು ಸಂದರ್ಭಗಳಲ್ಲಿ ನನಗೆ ಪಾಠ ಹೇಳಿದಂತಹ ಅನೇಕ ಗುರುಗಳ ಗುರು -ಪರಂಪರೆ ನನ್ನಲ್ಲಿ ಸಾಲಾಗಿ ನಿಲ್ಲುತ್ತದೆ. ಇದು ನನ್ನೊಬ್ಬಳಿಗೆ ಸೀಮಿತವಲ್ಲ. ಬದಲಿಗೆ ಪ್ರತಿಯೊಂದು ಮಾನವನಿಗೂ ಕೂಡ ಇದು ಅನ್ವಯವಾಗುತ್ತದೆ. ಇಂತಹ ಗುರುಪೂರ್ಣಿಮಯಂದು ಎಲ್ಲ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯಗಳು.

ಇಷ್ಟೆಲ್ಲಾ ಹೇಳಿದ ಮೇಲೆ ನನಗನಿಸುವುದು ನಮ್ಮ ಜೀವನದ ಮುಖ್ಯ ಗುರು ಯಾರಂಬುದನ್ನ ಬಸವಣ್ಣನವರು ತಮ್ಮ ವಚನದಲ್ಲಿ ಸುಂದರವಾಗಿ ಹೇಳುತ್ತಾರೆ ಅದಕ್ಕೆ ಉತ್ತರ ಈ ವಚನದಲ್ಲಿ ಇದೆ
ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ.
ಮರದ ದೇವರು ದೇವರಲ್ಲ: ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ.
ಸೇತು ಬಂದ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ
ಪುಣ್ಯತೀರ್ಥಕ್ಷೇತ್ರಗಳಲ್ಲಿರುವ ದೇವರುಗಳು ದೇವರಲ್ಲ.
ತನ್ನ ತಾನರಿದು ತಾನಾರೆಂದು ತಿಳಿದೊಡೆ ತನಗೆ ತಾನೇ ದೇವ ನೋಡ
ಅಪ್ರಮಾಣ ಕೂಡಲಸಂಗಮದೇವ” ಹೌದು ನನಗೆ ನಾ ಗುರುವಾಗಿ ತಿಳಿದಾಗಲೆ ಜಗದ ಈ ಬದುಕಲ್ಲಿ ಸಾಧಿಸಲು ಸಾಧ್ಯ.


ಡಾ.ಭಾಗ್ಯಜ್ಯೋತಿ ಕೋಟಿಮಠ.

 

administrator

Related Articles

Leave a Reply

Your email address will not be published. Required fields are marked *