ಹುಬ್ಬಳ್ಳಿ-ಧಾರವಾಡ ಸುದ್ದಿ

26ರಿಂದ ಡಿಜಿ ಫೋಟೋ ಎಕ್ಸ್‌ಪೋ

ಹುಬ್ಬಳ್ಳಿ: ಹುಬ್ಬಳ್ಳಿ ಫೋಟೋಗ್ರಾಫರ್‍ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿ ಯೇಶನ್ ಮತ್ತು ಕರ್ನಾಟಕ ವಿಡಿಯೋಗ್ರಾಫರ್ಸ್ ಅಸೋಸಿಯೇಶನ್ ಜಂಟಿ ಸಹಯೋಗದೊಂದಿಗೆ ನಗರದಲ್ಲಿ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮತ್ತು ಮಾರಾಟ ಮೇಳ ಡಿಜಿ ಫೋಟೋ ಎಕ್ಸ್‌ಪೋವನ್ನು ಫೆ. 26 ಮತ್ತು 27 ರಂದು ಎರಡು ದಿನಗಳ ಕಾಲ ನಗರದ ಅಮರಗೋಳದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಲ್ಟಿಫರಪಸ್ ಎಕ್ಜಿಬಿಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಉಭಯ ಅಸೋಸಿಯೇಶನ್ ಅಧ್ಯಕ್ಷರಾದ ಕಿರಣ ಬಾಕಳೆ ಹಾಗೂ ಬೆಂಜಮಿನ್ ಹೇಳಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರದರ್ಶನದಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಬರುವ ವಿವಿಧ ಕಂಪನಿಗಳಿಂದ ೮೦ಕ್ಕೂ ಅಧಿಕ ಮಳಿಗೆ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಸುಮಾರು 70 ಕ್ಕೂ ಹೆಚ್ಚು ಮಳಿಗೆ ಗಳು ನೋಂದಾಯಿತವಾಗಿವೆ. ಇಲ್ಲಿ ವಿವಿಧ ರೀತಿಯ ಕ್ಯಾಮರಾ, ಅತ್ಯುತ್ತಮ ಛಾಯಾಚಿತ್ರಗಳು ಪ್ರದರ್ಶನವಾಗಲಿವೆ ಎಂದರು.
ಛಾಯಾ ಚಿತ್ರಗ್ರಾಹಕರಿಗೆ ಹೊಸ ತಂತ್ರಜ್ಞಾನದ ಪರಿಚಯವನ್ನು ಮಾಡಿಕೊಡ ಲಾಗುತ್ತಿದೆಯಲ್ಲದೇ ಇದು ಅವರಿಗೆ ಒಂದು ವಿಶೇಷ ಸಂದರ್ಭವಾಗಿದೆ. ವಿಶೇಷವಾಗಿ ನಿಕಾನ, ಸೋನಿ ಡಿಜಿಟಲ್, ನ್ಯಾಶನಲ್ ಪ್ಯಾನಾಸೋನಿಕ್, ಮೊನಾರ್ಚ್ ವಿಡಿಯೋ, ಚಾಯ್ಸ್‌ಎಚ್.ಡಿ, ಮೆಟ್ರೋಮೆಡಿಯ, ಷಾಡೋ, ಸೈನ್‌ಅಪ್ ಮೊದಲಾದ ಮಳಿಗೆಗಳು ಪ್ರದರ್ಶನದಲ್ಲಿ ಇರಲಿವೆ ಎಂದು ತಿಳಿಸಿದರು.
ಎರಡು ದಿನಗಳ ಅವಧಿಯಲ್ಲಿ ಉತ್ತರಕರ್ನಾಟಕದ ಛಾಯಾಗ್ರಾಹಕರಿಗಾಗಿ ನುರಿತ ಛಾಯಾಚಿತ್ರಗ್ರಾಹಕರಿಂದ ತರಬೇತಿ ಕಾರ್ಯಾಗಾರ ಏರ್ಪಡಿಸ ಲಾಗಿದೆ. ಜತೆಗೆ ಕ್ಯಾಮರಾಗಳ ಉಚಿತ ಸರ್ವಿಸಿಂಗ್ ಮತ್ತು ತಪಾಸಣೆಯೂ ನಡೆಯಲಿದೆ. ಕಾರ್ಯಾಗಾರದಲ್ಲಿ ಫೆ. 26 ರಂದು ಮಧ್ಯಾಹ್ನ 2.30ಕ್ಕೆ ಖ್ಯಾತ ಛಾಯಾಚಿತ್ರ ಗ್ರಾಹಕ ಫೋಕಸ್ ರಘು ಅವರಿಂದ ನಿಕಾನ ಕ್ಯಾಮರಾ ಕುರಿತು ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಉತ್ತರಕರ್ನಾಟಕದ 10 ಹಿರಿಯ ಛಾಯಾಗ್ರಾಹಕರಿಗೆ ”ಕರ್ನಾಟಕ ಛಾಯಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಜವಳಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ವರು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಕರ್ನಾಟಕ ವಾಣಿಜ್ಯೋಮಿ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಅವರು ಹಿರಿಯ ಛಾಯಾ ಗ್ರಾಹಕರನ್ನು ಸನ್ಮಾನಿಸುವರು ಎಂದರು.
ಗೋಷ್ಠಿಯಲ್ಲಿ ಜಗದೀಶ, ಕೃಷ್ಣಪ್ಪ, ದಿನೇಶ ದಾಬಡೆ, ಜಯೇಶ್ ಇರಕಲ್, ಅನಿಲ್ ತುರಮರಿ, ರವಿ ಪಟ್ಟಣ, ದತ್ತು ದೋಂಗಡಿ, ಆನಂದ ರಾಜೋಳಿ, ಪ್ರವಿಣ ಹಣಗಿ, ವಿನಾಯಕ ಸಪಾರೆ, ರಶಿದ, ರವಿಂದ್ರ ಕಾಟಿಗರ, ಶಂಕರ ಮಿಸ್ಕಿನ, ವಜಿರ ಅಹ್ಮದ, ವಿಜಯ ಮೆಹರವಾಡೆ, ಪ್ರಕಾಶ ಬಸವಾ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *