ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರಕಾರಿ ಹುದ್ದೆಗೆ ಸರಿಸಮಾನದ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಪ್ರರಕಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಕಟ್ಟಿ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇಂದ್ರ ಸರ್ಕಾರದ ಎನ್.ಇ.ಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಕಾಯ್ದೆ ಹೆಸರಿನಲ್ಲಿ ನಗರದ ಎಸ್.ಜಿ.ಎಸ್.ಎಸ್ ಎಚ್.ಆರ್. ಕನ್ಸಲ್ಟೆನ್ಸಿಯ ರಾಘವೇಂದ್ರ ಕಟ್ಟಿ ಮತ್ತು ಮಧ್ಯವರ್ತಿ ಶರಣಪ್ಪ ತಿಕೋಟಿಕರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಿ ಹುದ್ದೆಗೆ ಸರಿಸಮಾನದ ಹುದ್ದೆ ನೀಡುವುದಾಗಿ ರಾಘವೇಂದ್ರ ಕಟ್ಟಿ ಹಾಗೂ ಆತನ ಏಜೆಂಟ್ ಶರಣಪ್ಪ ತಿಕೋಟಿಕರ್ ವಿರುದ್ಧ420 ವೋಸ, ವಂಚನೆ ಹಾಗೂ 506 ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿದೆ.
ಮೂವರು ವಿದ್ಯಾರ್ಥಿಗಳಾದ ಸಾಗರ ಶೀಳಿನ, ಮಲ್ಲಿಕಾರ್ಜುನ ಕೂಡಗಿ ಮತ್ತು ಶಿವರಾಜ ಅವಟಿ ಎಂಬುವರಿಂದ ಒಟ್ಟು 22,65,000 ರೂ. ಪಡೆದು ನೌಕರಿ ಕೊಡಿಸದೆ ಹಣವೂ ಮರಳಿಸದೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ .