ದಿಡ್ಡಿ ಓಣಿ ಹನುಮಪ್ಪ, ಜಂಗ್ಲಿಪೇಟೆಯಲ್ಲಿ ಭಜನೆ
ಹುಬ್ಬಳ್ಳಿ: ಕೋರ್ಟ್ ಆದೇಶದ ಹೊರತಾಗಿಯೂ ಹಲವು ಮಸೀದಿಗಳಲ್ಲಿ ಧ್ವನಿವರ್ಧಕಗಳಲ್ಲಿ ಆಜಾನ್ ಹೇಳುತ್ತಿರುವುದನ್ನು ವಿರೋಧಿಸಿರುವ ಶ್ರೀ ರಾಮೇಸೇನ ಹಾಗೂ ವಿವಿಧ ಹಿಂದು ಪರ ಸಂಘಟನೆಯ ಮುಖಂಡರು ಜಿಲ್ಲೆಯ ಸುಮಾರು ೫೦ ದೇವಸ್ಥಾನಗಳಲ್ಲಿ ಸುಪ್ರಭಾತ ಅಭಿಯಾನ ಆರಂಭಿಸಿದೆ ಎನ್ನಲಾಗಿದೆ.
ಇಂದು ಬೆಳಗಿನ ಜಾವ ನಗರದ ದಿಡ್ಡಿ ಓಣಿಯ ಹಣಮಂತ ದೇವಸ್ನಾನ ಸೇರಿದಂತೆ ಜಂಗ್ಲಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ಸೇರಿದಂತೆ ಇತರೆಡೆ ದೇವಸ್ಥಾನದಲ್ಲಿ ಭಜನೆ, ಹನುಮಾನ್ ಚಾಲೀಸ್ ಹಾಗೂ ಸುಪ್ರಭಾತ್‌ವನ್ನು ಹಮ್ಮಿಕೊಳ್ಳಲಾಗಿತ್ತು.
ಮಸೀದಿಗಳ ಮೇಲೆ ಸ್ಪೀಕರ್‌ಗಳನ್ನು ಅಕ್ರಮವಾಗಿ ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮಸೀದಿಗಳ ಮೇಲಿನ ಧ್ವನಿ ವರ್ಧಕದ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಮೀನಾಮೇಷ ಏಣಿಸುತ್ತಿದೆ ಎಂದು ಮುಖಂಡ ಅಣ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮಂದಿರಗಳಲ್ಲಿ ಹಾಗೂ ಮಸೀದಿಗಳ ಎದುರು ದೊಡ್ಡ-ದೊಡ್ಡ ಸೌಂಡ್ ಬಾಕ್ಸ್‌ಗಳ ಮೂಲಕ ಹನುಮಾನ್ ಚಾಲೀಸ್ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಮುಂದುವರಿಸುವ ಎಚ್ಚರಿಕೆಯನ್ನು ಹಿಂದು ಸಂಘಟನೆಯ ಕಾರ್ಯಕರ್ತರು ನೀಡಿದ್ದಾರೆ.
ಎಲ್ಲೆಡೆ ಪೊಲೀಸ್ ಭದ್ರತೆ ಹಾಕಲಾಗಿದ್ದು ಅವಳಿನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಪೊಲೀಸ್ ಆಯುಕ್ತ ಲಾಭೂರಾಂ ಹೇಳಿದ್ದಾರೆ.