ವಾಣಿಜ್ಯ ರಾಜಧಾನಿಯ ಶೈಕ್ಷಣಿಕ ಹಿರಿಮೆ – ಗುಣಮಟ್ಟದ ತಾಂತ್ರಿಕ ಶಿಕ್ಷಣದ ಗರಿಮೆ
ಹುಬ್ಬಳ್ಳಿ : ಇಂದು ಎಲ್ಲ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ಬೆಳೆಯುತ್ತಿದೆ. ಹಲವಾರು ಶಿಕ್ಷಣ ಸಂಸ್ಥೆಗಳು ವಿಷಯಾಧಾರಿತ ಕೋರ್ಸಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಹಿಂದೆ ಉದ್ಯಮಗಳ ಬೀಡಾಗಿದ್ದ ವಾಣಿಜ್ಯ ರಾಜಧಾನಿ ಎಜ್ಯುಕೇಶನ್ ಹಬ್ ಆಗಿ ಪರಿಣಮಿಸಿದೆ. ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಪಾಲಿಟೆಕ್ನಿಕ್ ಪಟ್ಟಿಯಲ್ಲಿ ಹುಬ್ಬಳ್ಳಿಯ ಶ್ರೀಮತಿ ಸಿ.ಐ.ಮುನವಳ್ಳಿ ಪಾಲಿಟೆಕ್ನಿಕ್ ರಾಜ್ಯದ 10 ಟಾಪ್ ಕಾಲೇಜುಗಳಲ್ಲಿ ಒಂದು ಎಂಬ ಹಿರಿಮೆಗೆ ಪಾತ್ರವಾಗಿರುವುದು ರಾಜ್ಯದ ಮೂಲೆ ಮೂಲೆಗಳಿಂದ ವಿವಿಧ ಕೋರ್ಸಗಳನ್ನು ವಿದ್ಯಾರ್ಥಿಗಳು ಅರಸಿ ಬರುತ್ತಿದ್ದಾರೆ.
ಶ್ರೀಮತಿ ಸಿ.ಐ.ಮುನವಳ್ಳಿ ಪಾಲಿಟೆಕ್ನಿಕ್ ತಾಂತ್ರಿಕ ವಿಭಾಗದಲ್ಲಿ ಶಿಕ್ಷಣವನ್ನು ನೀಡಲು ಬೇಕಾದ ಎಲ್ಲ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ, ದೇಶಪ್ರೇಮ, ಶಿಸ್ತು, ಸಚ್ಚಾರಿತ್ರ್ಯ, ಉತ್ತಮ ಹವ್ಯಾಸ, ಸದಭಿರುಚಿಗಳ ಮನೋಭಾವವನ್ನು ಬೆಳೆಸುತ್ತಿರುವುದು ಸಂಸ್ಥೆಯ ಕೀರ್ತಿ ಪತಾಕೆ ಮೇಲಕ್ಕೆ ಹಾರುವಂತೆ ಮಾಡಿದೆ.ಸಂಸ್ಥೆಯಲ್ಲಿ ಡಿಪ್ಲೊಮಾ ಶಿಕ್ಷಣದ ಇಲೆಕ್ಟ್ರಾನಿಕ್ ಆಂಡ್ ಕಮ್ಯೂನಿಕೇಶನ್, ಕಂಪ್ಯೂಟರ್ ಸೈನ್ಸ್, ಸಿವ್ಹಿಲ್, ಮೆಕ್ಯಾನಿಕಲ್, ಇಂಟೀರಿಯರ್ ಡೆಕೋರೇಶನ್, ಆಟೋಮೊಬೈಲ್, ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಪ್ರವೇಶ ದಾಖಲಾತಿ ಆರಂಭಗೊಂಡಿದೆ.
ಪಠ್ಯದ ಜತೆ ಕೌಶಲ್ಯಾಭಿವೃದ್ದಿಗೆ ಸಂಸ್ಥೆಯಲ್ಲಿ ಪೂರಕವಾಗಿ ಹಲವು ಪಠ್ಯೇತರ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆಯಲ್ಲದೇ ವಿದ್ಯಾರ್ಥಿಗಳಿಗೆ ಶ್ರದ್ಧೆ, ಸಹನೆ, ಸತತ ಪ್ರಯತ್ನವೇ ವಿದ್ಯಾಕ್ಷೇತ್ರದ ಯಶಸ್ಸಿನ ಮೂರು ಮೆಟ್ಟಿಲುಗಳು ಮನದಟ್ಟು ಮಾಡಿ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಜತೆ ಪೋಷಕರ ಪಾಲಿಗೆ ಮುನವಳ್ಳಿ ಪಾಲಿಟೆಕ್ನಿಕ್‌ನಲ್ಲಿ ಕಲಿತರೆ ಉದ್ಯೋಗ ಗ್ಯಾರಂಟಿ ಎಂಬ ಮಾತು ಉತ್ತರ ಕರ್ನಾಟಕದಾದ್ಯಂತ ಕೀರ್ತಿ ಪಸರಿಸುವಂತೆ ಮಾಡಿದೆ.
1984 ರಲ್ಲಿ ಆರಂಭಗೊಂಡು ನಾಡಿನ ಹಿರಿಮೆಗಳಲ್ಲೊಂದಾದ ಕೆಎಲ್‌ಇ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಪ್ರಾರಂಭಗೊಂಡು ಮೂಲಭೂತ ಸೌಲಭ್ಯ, ಬೋಧನೆಯಲ್ಲಿ ಬದಲಾವಣೆ ಹಾಗೂ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡ ಪರಿಣಾಮ ಸಂಸ್ಥೆಯು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನ, ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲದ ಉಪಕುಲಪತಿಗಳಾದ ಡಾ.ಅಶೋಕ ಶೆಟ್ಟರ್ ಅವರ ಸಲಹೆಯಂತೆ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಶಂಕರಣ್ಣ ಮುನವಳ್ಳಿ, ಆರ್.ಬಿ.ಪಾಟೀಲ್, ವಾಯ್.ಎಸ್.ಪಾಟೀಲ್, ಡಾ.ಪ್ರಸಾದ್ ರಾಮಪುರಿ ಅವರ ಉತ್ತಮ ಆಡಳಿತದೊಂದಿಗೆ ಪ್ರಾಚಾರ್ಯರಾದ ಪ್ರೊ.ವೀರೇಶ ಬಿ ಅಂಗಡಿ ಇತಿಹಾಸ ನಿರ್ಮಿಸುವ ಹಾದಿಯಲ್ಲಿ ವಿದ್ಯಾಸಂಸ್ಥೆ ಮುನ್ನಡೆಯುತ್ತಿದೆ.
ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಪ್ರಯೋಗಾಲಯಗಳು, ಸಕಲ ಸೌಲಭ್ಯ ಹೊಂದಿರುವ ಗ್ರಂಥಾಲಯ, ಮಲ್ಟಿಮೀಡಿಯಾ ಸಲಕರಣೆಗಳನ್ನೊಳಗೊಂಡ ಕ್ಲಾಸ್ ರೂಮ್‌ಗಳು , ಪರಿಣಾಮಕಾರಿಯಾಗಿ ಬೋಧಿಸಬಲ್ಲ ಉಪನ್ಯಾಸಕ ವರ್ಗ ಉದ್ಯಮವಲಯದ ಬೇಡಿಕೆಗೆ ಅನುಗುಣವಾಗಿ ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ನೀಡಲು ಪೂರಕವಾದ ಕೌಶಲ್ಯಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ.ಪಿಯುಸಿ ಮುಗಿದ ನಂತರ ಅವಕಾಶಗಳ ಹೆಬ್ಬಾಗಿಲು ತೆರೆಯುತ್ತದೆ.ಆದರೆ ಎಸ್ ಎಸ್ ಎಲ್ ಸಿ ಮುಗಿದ ನಂತರ ತಾಂತ್ರಿಕ ಶಿಕ್ಷಣದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಪೂರೈಸಿದರೆ,ಒಂದು ವರ್ಷದ ರಿಯಾಯತಿಯೊಂದಿಗೆ ನೇರವಾಗಿ ಹಾಗೂ ಸುಲಭವಾಗಿ ಎಂಜನೀಯರಿಂಗ್ ಕೋರ್ಸಗೆ ಪ್ರವೇಶ ಸಿಗಲಿದೆಯಲ್ಲದೇ ಭವ್ಯ ಭವಿಷ್ಯದ ಹೆಬ್ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳಲಿದೆ.
ದಾಖಲೆ ಫಲಿತಾಂಶ : ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತ ಬಂದಿದ್ದು ರಾಜ್ಯಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಪ್ರತಿಭಾನ್ವಿತರಿಗೆ ಉಚಿತ ಶಿಕ್ಷಣ : ಪಾಲಿಟೆಕ್ನಿಕ್‌ನಲ್ಲಿ ಪ್ರತಿಭಾವಂತ, ಅರ್ಹ ವಿದ್ಯಾರ್ಥಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಾಗೂ ಖಾಸಗಿ ಸಂಘ ಸಂಸ್ಥೆಗಳಿಂದ ಮತ್ತು ಹಲವಾರು ದತ್ತಿ ನಿಧಿಗಳಿಂದ ಇರುವ ವಿದ್ಯಾರ್ಥಿ ವೇತನ ಹಾಗೂ ಬಹುಮಾನಗಳನ್ನು ದೊರೆಯಲಿದೆಯಲ್ಲದೇ ಆನಂದ ಗ್ರೂಪ್ ಕಂಪನಿಯ ಧಾರವಾಡ ಬಳಿಯ ಸ್ಪೈಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಪ್ರತಿಭಾವಂತ 10 ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯಲ್ಲಿ ಉಚಿತ ಪ್ರವೇಶಾತಿ ನೀಡಲಾಗುತ್ತಿದೆಯಲ್ಲದೇ ಸಾಮಾಜಿಕ ಬದ್ಧತೆ ತೋರಿಸಿದೆ.
ಪ್ಲೇಸ್ಮೆಂಟ್‌ನಲ್ಲೂ ಮೂಂಚೂಣಿಯಲ್ಲಿ : ಪಾಲಿಟೆಕ್ನಿಕ್‌ನಲ್ಲಿ ಪ್ರತ್ಯೇಕ ಪ್ಲೆಸ್‌ಮೆಂಟ್ ಸೆಲ್ ಕೂಡ ಇದ್ದು, ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗುತ್ತಿದೆ. ಪ್ಲೇಸಮೆಂಟ್ ಆಫೀಸರ್ ಪ್ರೋ. ಎಸ್.ವಿ.ಕಂಠಿ ಅವರ ನೇತೃತ್ವದಲ್ಲಿ ತಮ್ಮಲ್ಲಿ ಓದಿದ ವಿದ್ಯಾರ್ಥಿಗಳಿಗೂ ಉದ್ಯೋಗ ಕೊಡಿಸುವ ಯತ್ನದಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದು ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯ, ತರಬೇತಿ, ವಿವಿಧ ಕೈಗಾರಿಕೆಗಳ ಸಂದರ್ಶನ ಮತ್ತು ತರಬೇತಿ, ಸ್ವಂತ ಉದ್ದಿಮೆ ಪ್ರಾರಂಭಿಸಲು ಸಲಹೆ-ಸೂಚನೆ, ಎನ್ ಎಸ್ ಎಸ್ ಘಟಕ, ಎನ್.ಸಿ.ಸಿ. ಮುಂತಾದವುಗಳು ವಿದ್ಯಾರ್ಥಿಗಳ ಯಶಸ್ಸಿಗೆ ಪೂರಕವಾಗಿವೆ.
ತಾಂತ್ರಿಕ ಶಿಕ್ಷಣದ ತಿಳುವಳಿಕೆಗಾಗಿ ಹುಬ್ಬಳ್ಳಿ-ಧಾರವಾಡ ಅವಳಿನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ತಮ್ಮ ಸಂಸ್ಥೆಗೆ ಕರೆ ತಂದು ಅವರಿಗೆ ಅದರ ಮಹತ್ವವನ್ನು ಮನವರಿಕೆ ಮಾಡಿಕೊಡಲಾಗುವುದಲ್ಲದೇ ವೃತ್ತಿ ತರಬೇತಿ ಅಳವಡಿಸಿಕೊಂಡರೆ ಕಾರ್ಖಾನೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ಲಭ್ಯ ಎನ್ನುವುದನ್ನು ತಿಳಿಸಲಾಗುವುದು.ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಬಡ ಹೆಣ್ಣುಮಕ್ಕಳಿಗೆ ಎಸ್‌ಎನ್‌ಎಸ್ ಪೌಂಡೇಶನ್‌ದ ಸಹಯೋಗದೊಂದಿಗೆ ಉಚಿತ ಡಿಪ್ಲೋಮಾ ಶಿಕ್ಷಣ ಕೊಡಲಾಗುತ್ತಿದೆ.
ಪ್ರೊ. ವೀರೇಶ ಅಂಗಡಿ, ಪ್ರಾಚಾರ್ಯರು,
(ಮೊ.ನಂ 99456 86808)
ಉತ್ತಮ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಗುರಿ ತಲುಪಲು ಸಾಧ್ಯ ಎಂಬ ಕಲ್ಪನೆಯಲ್ಲಿ ಕೆ.ಎಲ್.ಇ ಸಂಸ್ಥೆ ಇಂದಿನ ಅವಶ್ಯಕತೆಗೆ ತಕ್ಕಂತೆ ಸಶಕ್ತ, ಸ್ವಾಲವಂಬಿಯಾಗುವ ಶಿಕ್ಷಣ ನೀಡುತ್ತ ಬಂದಿದೆ. ಅಲ್ಲದೇ ಕಾಲೇಜಿನ ಫಲಿತಾಂಶವೇ ಎಲ್ಲವನ್ನೂ ಹೇಳುತ್ತದೆ. ಇಲ್ಲಿನ ವಿದ್ಯಾರ್ಥಿಗಳು ತರಬೇತಿಯ ಜತೆ ಶಿಸ್ತು, ಕಲಿಕೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಪ್ರತಿಯೊಂದು ಆಯಾಮದಲ್ಲಿ ಪರಿಪೂರ್ಣತೆ ಸಾಧಿಸಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಹಾಗೂ ಪಾಲಕರ ಮೆಚ್ಚುಗೆಗೆ ಕಾರಣವಾಗಿದೆ.
– ಶಂಕರಣ್ಣ ಮುನವಳ್ಳಿ, ನಿರ್ದೇಶಕರು, ಕೆಎಲ್‌ಇ ಸಂಸ್ಥೆ
ಕಾಲೇಜಿಗೆ ತಾಯಿಯ ಹೆಸರು
ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸಂಸ್ಥೆಯ ಶಾಲಾ ಕಾಲೇಜುಗಳು ಇಂದು ಈ ಎತ್ತರಕ್ಕೆ ಬೆಳೆಯಲು ಕಳೆದ ಮೂರು ದಶಕಗಳಿಂದ ಸಂಸ್ಥೆಯ ನಿರ್ದೇಶಕರಾಗಿರುವ ಶಂಕ್ರಣ್ಣ ಮುನವಳ್ಳಿ ಎಂಬುದರಲ್ಲಿ ಅತಿಶಯೋಕ್ತಿ ಏನಿಲ್ಲ. ವ್ಯಾಪಾರ, ಸಮಾಜ ಸೇವೆಯಲ್ಲಿ ಸದ್ದಿಲ್ಲದೇ ತೊಡಗಿಸಿಕೊಂಡು ಇವರು ಮೊದಲು ಕೆಎಲ್‌ಇ ಪಾಲಿಟೆಕ್ನಿಕ್ ಎಂದು ಕರೆಯಲಾಗುತ್ತಿದ್ದ ಕಾಲೇಜಿಗೆ ಆರ್ಥಿಕ ನೆರವಿನೊಂದಿಗೆ ತಮ್ಮ ತಾಯಿ ಚನ್ನಬಸಮ್ಮ ಈಶ್ವರಪ್ಪ ಮುನವಳ್ಳಿ ಎಂದು 2010ರ ಅಗಸ್ಟ್ 17ರಂದು ಮರುನಾಮಕರಣ ಮಡಿ ತಮ್ಮ ತಾಯಿಯ ಪ್ರೀತಿಯನ್ನು ಚಿರಸ್ಥಾಯಿಯಾಗಿಸಿದರಲ್ಲದೇ ತಾಂತ್ರಿಕ ಶಿಕ್ಷಣದ ಕ್ರಾಂತಿಗೂ ಮುನ್ನುಡಿ ಬರೆದಿದ್ದಾರೆ.
ಮುನವಳ್ಳಿ ಪಾಲಿಟೆಕ್ನಿಕ್ ನಂ.1 ಆಯ್ಕೆ
* ನಾಡಿನ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಬ್ರಾಂಡ್
* 37 ವರ್ಷಗಳಿಂದ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿರುವುದು.
* ಕೆಎಲ್‌ಇ ವಿ.ವಿ.ಕ್ಯಾಂಪಸ್‌ನಲ್ಲೇ ಎಲ್ಲ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಕಾಲೇಜ್ ಕಟ್ಟಡ
* ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಅವಕಾಶ
* ವಿದ್ಯಾರ್ಥಿಗಳಿಗೆ ಮನ ಮುಟ್ಟುವ ತರಬೇತಿ
* ನುರಿತ ಉಪನ್ಯಾಸಕ ವೃಂದ, ಎಆಯ್‌ಸಿಟಿಇ ಮತ್ತು ಡಿಟಿಇ ಆಧಾರಿತ ಪಠ್ಯಕ್ರಮದಲ್ಲಿ ಸುವ್ಯಸ್ಥಿತ ಬೋಧನೆ,
* ಗುಣಮಟ್ಟದ ಪ್ರಯೋಗಾಲಯಗಳು, ಸುಸಜ್ಜಿತ ಸಭಾಂಗಣ, ಸುವಿಶಾಲ ಗ್ರಂಥಾಲಯ, ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಕಂಪ್ಯೂಟರ್ ವ್ಯವಸ್ಥೆ, * ಪ್ರತಿ ಸೆಮಿಸ್ಟರ್‌ಗಳಿಗೆ ಮೂರು ಬಾರಿ ಪಾಲಕರೊಂದಿಗೆ ವಿದ್ಯಾರ್ಥಿಗಳು ಬೆಳವಣಿಗೆ ಕುರಿತು ಸಂವಹನ,
* ಎಲ್ಲ ವಿದ್ಯಾರ್ಥಿಗಳಿಗೂ ಪ್ರತಿ ಸೆಮಿಸ್ಟರ್‌ಗಳಿಗೆ ಗ್ರಂಥಾಲಯದಿಂದ ಆಯಾ ವಿಭಾಗಗಳ ಎಲ್ಲ ಪುಸ್ತಕಗಳ ವಿತರಣೆ.
* ಕ್ಯಾಂಪಸ್ ಸಂದರ್ಶನ ಹಾಗೂ ನೂರಕ್ಕೆ ನೂರರಷ್ಟು ಉದ್ಯೋಗ ದೊರಕಿಸುವ ಪ್ಲೇಸ್‌ಮೆಂಟ್ ಸೆಲ್.
ಲಭ್ಯವಿರುವ ಕೋರ್ಸ್‌ಗಳು
> ಇಲೆಕ್ಟ್ರಾನಿಕ್ & ಕಮ್ಯೂನಿಕೇಶನ್
> ಕಂಪ್ಯೂಟರ್ ಸೈನ್ಸ್
> ಸಿವ್ಹಿಲ್
> ಮೆಕ್ಯಾನಿಕಲ್
> ಇಂಟೀರಿಯರ್ ಡೆಕೋರೇಶನ್
> ಆಟೋಮೊಬೈಲ್
> ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್
> ಆರ್ಕಿಟೆಕ್ಚರ್
ಡಿಪ್ಲೊಮಾ ಶಿಕ್ಷಣ
> ಎಸ್.ಎಸ್.ಎಲ್.ಸಿ ಯ ನಂತರ ಮೂರು ವರ್ಷದ ಕೋರ್ಸ್
> ಐ.ಟಿ.ಐ ನಂತರ ಎರಡು ವರ್ಷ
> ಬಿ.ಇ ಶಿಕ್ಷಣಕ್ಕೆ ನೇರವಾಗಿ ಎರಡು ವರ್ಷಕ್ಕೆ ಪ್ರವೇಶಾವಕಾಶ
> ಉದ್ಯೋಗಕ್ಕೆ ಮತ್ತು ಸ್ವ-ಉದ್ಯೋಗಕ್ಕೆ ವ್ಯಾಪಕ ಅವಕಾಶ
ಸುಸಜ್ಜಿತ ಹಾಸ್ಟೆಲ್ ಸೌಕರ್ಯ
ಬೇರೆ ಊರಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದ್ದು, ಉತ್ತಮ ಊಟದ ವ್ಯವಸ್ಥೆ, ವಸತಿ ನಿಲಯಕ್ಕೆ ವಿಶೇಷ ಭದ್ರತೆ ಕಲ್ಪಿಸಲಾಗಿದ್ದು, ಮೇಲ್ವಿಚಾರಕರು ವಿದ್ಯಾರ್ಥಿಗಳ ಮೇಲೆ ನಿಗಾ ಇಡುತ್ತಾರೆ.
ಸಂಪರ್ಕಕ್ಕೆ
ಶ್ರೀಮತಿ ಸಿ.ಐ.ಮುನವಳ್ಳಿ ಪಾಲಿಟೆಕ್ನಿಕ್, ಬಿವ್ಹಿಬಿ ಇಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್, ವಿದ್ಯಾನಗರ, ಹುಬ್ಬಳ್ಳಿ- 580031 ದೂರವಾಣಿ: 0836-23712204 ಮೊಬೈಲ್ : 9481493204 ಗೆ ಸಂಪರ್ಕಿಸಿ.
ಕ್ಯಾಂಪಸ್ ಸಂದರ್ಶನದಲ್ಲಿ ಈಗಾಗಲೇ ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉದ್ಯೋಗ ಪಡೆದು ನೆಮ್ಮದಿ ನಿಟ್ಟುಸಿರುಬಿಟ್ಟಿದ್ದಾರೆ. ಈ ಪ್ರಕ್ರಿಯೆ ನಿರಂತರ ಮುಂದುವರೆಯುವದು.- ಪ್ರೊ. ಸಂತೋಷ ಕಂಠಿ, ತರಬೇತಿ ಮತ್ತು ಪ್ಲೇಸ್‌ಮೆಂಟ್ ಆಫೀಸರ್,
ಮೊ.ನಂ -9880271208