ಹುಬ್ಬಳ್ಳಿ-ಧಾರವಾಡ ಸುದ್ದಿ
’ಪ್ರಕೃತಿ ಉಳಿಸೋಣ ಬೆಳಸೋಣ’

’ಪ್ರಕೃತಿ ಉಳಿಸೋಣ ಬೆಳಸೋಣ’

“Only One Earth,” ಎಂಬ ಸಂದೇಶದೊಂದಿಗೆ 2022ರ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಅಂದರೆ ಅದು “”Living sustainably in harmony with nature” ಎಂಬುದರ ಮೇಲೆ ಜಾಸ್ತಿ ಒತ್ತು ನೀಡಲಾಗಿದೆ ಅಂದರೆ ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವುದರೊಂದಿಗೆ ಸುಸ್ಥಿರವಾಗಿ ಬದುಕುವುದು., ” ದಶಕೂಪ ಸಮಾವಾಪಿ ದಶಾವಾಪಿ ಸಮೋಹ್ರದಃ //ದಶಹ್ರದಸಮೋ ಪುತ್ರೋ ದಶ ಪುತ್ರೋ ಸಮೋ ದ್ರುಮಃ/” ಹತ್ತು ಬಾವಿಗಳಿಗೆ ಒಂದು ಕೆರೆ ಸಮ 10 ಕೆರೆಗಳಿಗೆ ಒಂದು ಸರೋವರ ಸಮ. 10 ಸರೋವರಗಳಿಗೆ ಒಬ್ಬ ಪುತ್ರ ಸಮ. 10 ಜನ ಪುತ್ರರಿಗೆ ಒಂದು ಮರ ಸಮ. ಒಂದು ಮರಕ್ಕಿರುವ ತಾಕತ್ತು ಏನು ಎಂಬುದನ್ನು ಈ ಶ್ಲೋಕ ಹೇಳುತ್ತದೆ. “ಧರ್ಮೋ ರಕ್ಷತಿ ರಕ್ಷಿತ:” ಎನ್ನುವುದನ್ನು ಈಗ ನಾವು ವೃಕ್ಷೋ ರಕ್ಷತಿ ರಕ್ಷಿತ:”ಎಂದು ಹೇಳಬೇಕಾಗಿರುವ ಅನಿವಾರ್ಯತೆ ಇದೆ.


ಈ ಪರಿಸರ ದಿನದ ನಿಮಿತ್ಯ ವಾದರೂ ಕಾರ್ಯಕ್ರಮಗಳು ನಡೆದು ಜನರಲ್ಲಿ ಪರಿಸರ ಉಂಟಾಗಲಿ ಎಂಬುದು ಎಲ್ಲರ ಆಶಯ.ಆದರೆ ಅದು ಕೇವಲ ನೆಪಮಾತ್ರವಾ ಗಿರದೇ ಪ್ರತಿದಿನವೂ ನಮ್ಮ ಈ ಪ್ರಕೃತಿಗೆ ಗೌರವ ಕೊಡುವುದು, ಅಂದರೆ ಪ್ರಕೃತಿಯನ್ನು ರಕ್ಷಿಸುವುದು ಪೂಜಿಸುವುದು ಮುಖ್ಯ. ” ಆಮಂತ್ರ ಮಕ್ಷರಠ ನಾಸ್ತಿ ನಾಸ್ತಿ ಮೂಲ ಮನೌಷದಂ/ ಅಯೋಗ್ಯ ಪುರುಷಃ ನಾಸ್ತಿ ಯೋಜಕ ಸ್ತತ್ರ ದುರ್ಲಭಃ” ಮಂತ್ರ ವಿಲ್ಲದ ಅಕ್ಷರ ವಿಲ್ಲ. ಔಷಧ ವಿಲ್ಲದ ಗಿಡಮೂಲಿಕೆ ಇಲ್ಲ. ಅಯೋಗ್ಯ ನಾದ ಮನುಷ್ಯನಿಲ್ಲ. ಆದರೆ ಇಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ಯೋಚಿಸುವವರ ಕೊರತೆಯಿದೆ.
ಈ ಸುಭಾಷಿತದಲ್ಲಿ ನಾವು ತಿಳಿಯ ಬೇಕಾಗಿತ್ತು ಇಷ್ಟೇ. ಯಾವುದೇ ಗಿಡವನ್ನು ನಾವು ಅಪ್ರಯೋಜಕ ಎಂದು ಹೇಳಲಿಕ್ಕೆ ಆಗದು ಪ್ರತಿಯೊಂದು ಗಿಡದಲ್ಲಿ ಏನೋ ಒಂದು ಔಷಧಿಯ ಗುಣವಿದೆ ಅಥವಾ ಸೌಂದರ್ಯವಿದೆ ಅಥವಾ ಮೋಹಕ ಶಕ್ತಿ ಇದೆ. ಇಲ್ಲವೇ ಪ್ರಾಣವಾಗಿದೆ. ಹೀಗಾಗಿ ಪ್ರಕೃತಿದತ್ತವಾಗಿರುವ ಆ ಗಿಡದಲ್ಲಿಯ ಅಮೃತತ್ವವನ್ನು ತಿಳಿದುಕೊಳ್ಳಬೇಕಾಗಿತ್ತು ನಮ್ಮೆಲ್ಲರ ಕರ್ತವ್ಯ ಅಷ್ಟೇ ಅಲ್ಲ ಅದನ್ನು ರಕ್ಷಿಸುವುದು ಕೂಡ ನಮ್ಮ ಕರ್ತವ್ಯ.
ಅಹಿಂಸಾ ಪರಮೋಧರ್ಮ ಎಂದು ಹೇಳುವುದು ಕೇವಲ ಮನುಷ್ಯ ಜಾತಿಗೆ ಮಾತ್ರ ಸೀಮಿತವಾಗಿರದೆ ಅದನ್ನು ನಾವು ಪ್ರಕೃತಿಗೂ ಕೂಡ ಹೇಳುವ ಅವಶ್ಯಕತೆ ಇದೆ. ಅಷ್ಟೇ ಅಲ್ಲ ನಾವು ಅದನ್ನು ಈ ರೀತಿ ಕೂಡ ಹೇಳಬಹುದು. ಪರಿಸರ ಪರಮೋಧರ್ಮ. ಅಂದರೆ ಮನುಷ್ಯನ ಎಲ್ಲ ಆಸೆ ಈಡೇರಿಸುವ ಶಕ್ತಿಯು ಈ ಪ್ರಕೃತಿ ಮಾತೆಗಿದೆ. ಆದರೆ ದುರಾಸೆಗಳನ್ನು ಈಡೇರಿಸುವ ಶಕ್ತಿ ಪ್ರಕೃತಿಗೆ ಇಲ್ಲ. ಆಸೆಗಳಿಗೆ ಕಡಿವಾಣ ಹಾಕುವ ಮನುಷ್ಯನು ತಾನು ಬದುಕಬೇಕು, ತನ್ನಂತೆ ಇತರ ಜೀವಿಗಳು ಬದುಕಬೇಕೆಂಬ ಮಾನವೀಯ ಗುಣವನ್ನು ಬೆಳೆಸಿಕೊಳ್ಳುವದೊಂದಿಗೆ ಪರಿಸರ ರಕ್ಷಣೆಯ ಗುರಿಯನ್ನು ಹೊಂದಬೇಕಾಗಿದೆ. ಆಧುನಿಕವಾಗಿ ಬೆಳೆಯುತ್ತಿರುವ ನಾವು ಜನಪದರನ್ನು ನೋಡಿ ಕಲಿಯ ಬೇಕಾದ್ದು ಬಹಳಷ್ಟಿದೆ. ” ಕಲ್ಲು ಕೊಟ್ಟವ್ವಗ ಎಲ್ಲ ಭಾಗ್ಯವು ಬರಲಿ, ಪಲ್ಲಕ್ಕಿಯೇರಿ ಮಗಧದಲ್ಲಿ ಮಲ್ಲಿಗೆ ಮೂಡುವಂತಹ ಸೊಸೆ ಬರಲಿ” ಎಂದು ಬೀಸುವ ಕಲ್ಲಿನ ಕೊಟ್ಟವರನ್ನು ಕೂಡ ಹರಿಸಿದ್ದಾರೆ ಪ್ರಕೃತಿಗೆ ಹೋಲಿಸಿದ್ದಾರೆ. ಹಾಡಿ ಹೊಗಳಿದ್ದಾರೆ ಇದನ್ನ ನೋಡಿ ನಾವು ಕಲಿಯಬೇಕಾಗಿದೆ ಪ್ರಕೃತಿಯನ್ನು ಉಳಿಸೋಣ ಬೆಳೆಸೋಣ ಮುಂದಿನ ಜನಾಂಗಕ್ಕೆ ನಾವು ಕೊಡುವ ಒಂದು ಉಡುಗೊರೆ ಎಂದರೆ ಅದೊಂದೇ.

ಡಾ.ಭಾಗ್ಯಜ್ಯೋತಿ ಕೋಟಿಮಠ,
ಮುಖ್ಯಶಿಕ್ಷಕಿ, ಶಿರೂರು

administrator

Related Articles

Leave a Reply

Your email address will not be published. Required fields are marked *