ಹುಬ್ಬಳ್ಳಿ: ನೆರೆಯ ಮುಂಡಗೋಡದಲ್ಲಿ ಚಾಣಕ್ಯ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ 14 ವಯೋಮಾನದ ಚಾಣಕ್ಯ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ(ಟಿಎಸ್ಸಿಎ) ಚಾಂಪಿಯನ್ ಆಗಿದೆ.
ಶುಕ್ರವಾರ ನಡೆದ ಫೈನಲ್ನಲ್ಲಿ ಬೆಳಗಾವಿಯ ಯೂನಿಯನ್ ಜಿಮ್ಖಾನಾ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟ್ ಮಾಟಿದ ಯೂನಿಯನ್ ಜಿಮ್ಖಾನಾ ತಂಡ ನಿಗದಿತ 25 ಓವರ್ಗಳಲ್ಲಿ5 ವಿಕೆಟ್ಗೆ 163 ರನ್ ಗಳಿಸಿತ್ತು. ಟಿಎಸ್ಸಿಎ 24.5 ಓವರ್ಗಳಲ್ಲಿ 3 ವಿಕೆಟ್ಗೆ 164 ರನ್ ಗಳಿಸಿತು. ವಿಜೇತ ತಂಡದ ಪರ ವೈಭವ ಕರಿಸಕ್ರಣ್ಣವರ(45) ಹಾಗೂ ಪ್ರೀತಂ ಹುಲಕೊಪ್ಪ(42) ಉತ್ತಮ ಪ್ರದರ್ಶನ ನೀಡಿದರು. ವೈಭವ ಕರಿಸಕ್ರಣ್ಣವರ ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಯೂನಿಯನ್ ಜಿಮ್ಖಾನಾದ ಅಶುತೋಷ ಹಿರೇಮಠ ಉತ್ತಮ ಬ್ಯಾಟ್ಸಮನ್, ಸಾಯಿರಾಜ ಸಾಳುಂಕೆ ಉತ್ತಮ ಬೌಲರ್, ಚಾಣಕ್ಯ ಸ್ಪೋರ್ಟ್ಸ್ ಕ್ಲಬ್ನ ಶೌರ್ಯ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದರು.