ಹುಬ್ಬಳ್ಳಿ-ಧಾರವಾಡ ಸುದ್ದಿ
ಬದುಕು ರೂಪಿಸಿದ ಪ್ರಜ್ವಲಿತ ಜ್ಯೋತಿ ’ಅಪ್ಪ’

ಬದುಕು ರೂಪಿಸಿದ ಪ್ರಜ್ವಲಿತ ಜ್ಯೋತಿ ’ಅಪ್ಪ’

ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ನಾನೊಬ್ಬ ಜವಾಬ್ದಾರಿ ವ್ಯಕ್ತಿಯಾಗಿ ರೂಪಿತವಾಗುವವರೆಗೂ, ನನ್ನ ಸೋಲಲ್ಲಿ ತಾನು ದುಃಖಿಸುತ್ತ ನನ್ನ ಗೆಲ್ಲುವಲ್ಲಿ ತನ್ನ ಗೆಲುವು ಕಾಣುತ್ತಾ, ನನ್ನೆಲ್ಲಾ ತಪ್ಪು ತಿದ್ದುವದ ರೊಂದಿಗೆ ನನ್ನೆಲ್ಲಾ ಆಸೆಗಳಿಗೆ ಭರವಸೆಯಾಗಿ ನನ್ನ ಬದುಕಿನ ರೆಕ್ಕೆ ಯಾಗಿ ನನಗೆ ಗುಟುಕು ನೀಡಿ ನನ್ನನ್ನು ಆಗಸದಲ್ಲಿ ಖುಷಿಯಾಗಿ ಸ್ವಚ್ಛಂದವಾಗಿ ಹಾರಾಡುವಂತೆ ಮಾಡಿದ, ಆ ದೃವ ನಕ್ಷತ್ರ ನನ್ನ ಆದರ್ಶ ನನ್ನಪ್ಪ.

ಹೌದು ಇದು ಸತ್ಯ ಎಲ್ಲರ ಬಾಳಿನಲ್ಲೂ ತಾಯಿಯಷ್ಟೇ ತಂದೆಯು ಕೂಡ ನಮ್ಮ ಬದುಕನ್ನು ರೂಪಿಸುವಲ್ಲಿ ತಮ್ಮದೇ ಆಗಿರುವ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ
ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಅವರು ಡಿವಿಜಿ ಯವರು ಈ ರೀತಿ ಹೇಳುತ್ತಾರೆ,

“ಒಂದು ಕೊಂಬೆಯು ಬಾಡಲಿ ನ್ನೊಂದು ಚಿಗುರುವುದು /
ಸಂದಿಹುದು ಚಿರನವತೆಯಶ್ವತ್ಥ ಮರಕೆ ಎಂದೆಂದು ಮಂತಿರುವುದೀ
ವಿಶ್ವ ವೃಕ್ಷವದರೊಂದು ರಂಬೆಯೋ ನೀನು ಮಂಕುತಿಮ್ಮ”
ಹೌದು ಇದು ಸತ್ಯ ನಾವೆಲ್ಲಾ ಮನುಷ್ಯರು ಒಂದು ವೃಕ್ಷದ ಚಿಕ್ಕ ಚಿಕ್ಕ ಸಸಿಗಳ ಆಗಿ ಮುಂದೆ ಅವೇ ವೃಕ್ಷ ಗಳಾಗುತ್ತೇವೆ. ಬದುಕುತ್ತವೆಃ ಬಾಳುತ್ತವೆ. ಆ ವಂಶವೃಕ್ಷಗಳು ತಂದೆ-ತಾಯಿ ಯಾದರೆ ನಾವೆಲ್ಲಾ ಅದರ ಒಂದು ಸಸಿಗಳು. ಹಿಂದೊಂದು ಕಾಲವಿತ್ತು ತಂದೆಯೆಂದರೆ ಗಾಂಭೀರ್ಯ. ತಂದೆಯೆಂದರೆ ಭಯ. ತಂದೆಯೆಂದರೆ ನಮ್ಮ ಮನೆತನ ನಡೆಸುವ ವ್ಯಕ್ತಿ. ಪ್ರತಿ ಪ್ರಮುಖ ನಿರ್ಧಾರಕ್ಕೆ ತಂದೆಯದೇ ಕೊನೆಯ ಅಂಕಿತ ಎಂಬುದು.
ಆದರೆ ಕಾಲ ಈಗ ಬದಲಾಗಿದೆ ತಂದೆಯೆಂದರೆ ಶಿಕ್ಷಕ. ತಂದೆಯೆಂದರೆ ಗೆಳೆಯ. ತಂದೆಯೆಂದರೆ ಆದರ್ಶ. ನನ್ನ ಜೀವನದ ಮುನ್ನುಡಿಯ ವ್ಯಕ್ತಿಯೇ ತಂದೆ. understanding is deeper than knowledge. There are many people who know you but only some  people understand you.
ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಎಲ್ಲವನ್ನೂ ತಿಳಿದುಕೊಂಡು ನಮಗೆ ಬಯಸುವ ಅದಕ್ಕಿಂತ ಮೊದಲೇ ಕೊಡುವುದು ತಂದೆ. ನಾವು ಚಿಕ್ಕವರಿದ್ದಾಗ ಸೀಸದ ಕಡ್ಡಿ ಬಳಸುತ್ತೇವೆ ಏಕೆಂದರೆ ಚಿಕ್ಕವರಿದ್ದಾಗ ಬರೆದ ತಪ್ಪುಗಳನ್ನು ತಿದ್ದಲು ರಬ್ಬರ್ ಇರುವ ಹಾಗೆ. ಚಿಕ್ಕವರಿದ್ದಾಗ ನಮ್ಮ ತಪ್ಪುಗಳನ್ನು ತಿದ್ದಿ ಅವುಗಳಿಗೊಂದು ರೂಪ ಕೊಡುವ ಕೆಲಸ ನಮ್ಮ ತಂದೆ ತಾಯಿಗಳದ್ದು.
ಹೀಗೆ ತಂದೆಯ ಬಗ್ಗೆ ಹೇಳುತ್ತಾ ಹೋದರೆ ಮಾತು ಮುಗಿಯದು. ನಾನು ನನ್ನ ತಂದೆಯ ಬಗ್ಗೆ ಮಾತನಾಡುವಾಗ ಮೌನವಾಗಿ ಬಿಡುತ್ತೇನೆ ಏಕೆಂದರೆ ಯಾವುದೇ ಶಬ್ದಗಳು ನನ್ನಿಂದ ಹೊರಡುವುದೇ ಇಲ್ಲ ಅಷ್ಟೊಂದು ಭಾರವಾದ ಭಾವ ನನ್ನಲ್ಲಿ ಬಂದುಬಿಡುತ್ತದೆ. ಏನೇ ಇರಲಿ ಈ ನನ್ನ ಬದುಕನ್ನು ರೂಪಿಸಿಕೊಟ್ಟ ನನ್ನ ಪ್ರಜ್ವಲಿತ ಜ್ಯೋತಿಯಾದ ನನ್ನ ತಂದೆಗೆ ಈ ಮೂಲಕ ನನ್ನ ನಮನ ಇದು ನನ್ನೊಬ್ಬಳ ಮಾತಲ್ಲ ಪ್ರತಿ ವ್ಯಕ್ತಿ ತನ್ನ ತಂದೆಗೆ ಹೇಳುವ ಮಾತು.ಏಕೆಂದರೆ ಪ್ರತಿ ತಂದೆಯ ಇಚ್ಛೆ ತನ್ನ ಮಗು ಜೀವನದ ಅತ್ಯಂತ ಕಷ್ಟದ ದಿನಗಳಲ್ಲೂ ಬದುಕಿನ ಉತ್ಸಾಹ ಕಳೆದು ಕೊಳ್ಳದೇ ಯಶಸ್ವಿ ವ್ಯಕ್ತಿಯಾಗಬೇಕೆಂಬುದು. ಉತ್ತಮ ವಿಚಾರಗಳೊಂದಿಗೆ, ಉತ್ತಮ ವ್ಯಕ್ತಿಯಾಗಿ ಬದುಕಬೇಕೆಂಬುದು.

”Hats off for all fathers”

bhagyajyoti

ಡಾ.ಭಾಗ್ಯಜ್ಯೋತಿ ಕೋಟಿಮಠ,
ಮುಖ್ಯಶಿಕ್ಷಕಿ, ಶಿರೂರು

administrator

Related Articles

Leave a Reply

Your email address will not be published. Required fields are marked *