ಮೊನ್ನೆ ತಾನೆ ಕನಕದಾಸ ಜಯಂತಿಯನ್ನು ಆಚರಿಸಿದ ನಮಗೆ ಮಕ್ಕಳ ದಿನಾಚರಣೆ ಬಗ್ಗೆ ಬರೆಯಬೇಕೆಂದಾಗ ನೆನಪಾಗಿದ್ದು ಅವರ ಹಾಡೇ “ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರ?.” ಎಂಬ ಮಾತು.
ಹೌದು, ಇದು ಅಕ್ಷರಷ: ಅನ್ವಯವಾಗುವದು ಮಕ್ಕಳಿಗೆ.
ಮುಗ್ಧತೆಯ ಪ್ರತಿರೂಪವಾದ ಮಕ್ಕಳಿಗೆ ಅದ್ಯಾವುದರ ಕಲ್ಪನೆಯೂ ಇರುವದಿಲ್ಲ.ಆದರೆ 2000 ದಿಂದಿಚೆ ಹುಟ್ಟಿದ ಮಕ್ಕಳು Because of mobile ಅವರ ಕಲ್ಪನಾ ಶಕ್ತಿ ಬದಲಾಗುತ್ತಾ ಸಾಗಿದೆ. ಆದರೂ ಮಕ್ಕಳು ಮಕ್ಕಳೇ. ಅವರು ಯಾವಾಗಲೂ ತಮ್ಮ ಆತ್ಮತೃಪ್ತಿಗಾಗಿ ಬದಕುತ್ತಾರೆ.ಅವರಲ್ಲಿ ಮನುಷ್ಯ ಸಹಜ ಅಹಂಕಾರ, ದ್ವೇಷ, ಅಸೂಯೆ ಇರುವದಿಲ್ಲ ಬದಲಾಗಿ ಆತ್ಮವಿಶ್ವಾಸ ಗಟ್ಟಿಯಾಗಿರುತ್ತದೆ.ಅದಕ್ಕೆ ಕಣವಿಯವರು ಮಕ್ಕಳ ಕುರಿತು ಈರೀತಿ ಹೇಳುತ್ತಾರೆ.
”ಹೂವ ಕಂಡರೆ ಹಿಗ್ಗಿ ಮೂಸುವನು ಈ ರಸಿಕ
ಬಾನುಲಿಗೆ ತಾನೆ ಹೊಸ ಹಾಡ ಕಲಿಸುವನು
ಬಿಸಿಲ ಕೋಲನು ಹಿಡಿದು ಮೇಲೇರಬಯಸುವನು.”
ಅಂದರೆ ಯಾವುದೇ ಅಂಜಿಕೆ ಅಳಕಿಲ್ಲದೇ ಎಲ್ಲವನ್ನೂ ಮಾಡೇ ತೀರುತ್ತೇನೆ ಎಂಬ ಭಾವ ಅವರಲ್ಲಿರುತ್ತದೆ.ಆಮಗುವಿಗೆ ಜಗದ ಯಾವ ಸಮಸ್ಯೆಯ ಬಗ್ಗೆ ಗೊತ್ತಿಲ್ಲ,ಈ ಲೌಕಿಕ ಜೀವನದ ಬಗ್ಗೆ ಚಿಂತೆಯಿಲ್ಲ.ಸಣ್ಣ-ಸಣ್ಣ ಖುಷಿಗಳಿಗೂ ಸಂಭ್ರಮಿಸುತ್ತದೆ. ಹಬ್ಬಗಳಂತೂ ಅವರನ್ನೂ ಸ್ವರ್ಗಕ್ಕೆ ಕರೆದೊಯ್ಯವಂತೆ ಮಾಡುತ್ತವೆ. ಅದರಲ್ಲೂ ಮುಖ್ಯವಾಗಿ ಅವರ ಜನ್ಮ ದಿನದಂತೂ ಅವರು ತಮ್ಮದೇ ಕನಸು ಕಾಣುತ್ತಾರೆ.ಅವರು ಮಾಡುವ ಪ್ರತಿ ಕೆಲಸದಲ್ಲೂ ತಮ್ಮ ಆತ್ಮ ತೃಪ್ತಿ ಕಾಣಬಯಸುತ್ತಾರೆ.
ಅವರಲ್ಲಿ ನಾವು ಹೂವಿನ ಗುಣವನ್ನು ಕಾಣಬಹುದು.ಏಕೆಂದರೆ ಯಾವುದರ ಬಗ್ಗೆಯೂ ಯೋಚಿಸದೇ ಕೇವಲ ಅರಳುವದಷ್ಟೇ ಅದರ ಕೆಲಸ. ತಂದೆ-ತಾಯಿಗಳಿಗೆ ಪ್ರತಿ ದಿನವೂ ಮಕ್ಕಲ ದಿನಾಚರಣೆಯೇ. ಆದರೆ ಎಲ್ಲ ಮಕ್ಕಲೂ ತಮ್ಮ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಲೆಂದು ಈ ದಿನವನ್ನು ಸಾಮೂಹಿಕವಾಗಿ, ಅದರಲ್ಲೂ ಮುಖ್ಯವಾಗಿ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ.ಆದರೆ ಈಗ ಕಾಲ ಬದಲಾಗಿದೆ. ಎಲ್ಲವೂ ಆ ಪುಟ್ಟ ಆದರೆ ಬ್ರಹ್ಮಾಂಡವನ್ನೇ ತನ್ನ ತುದಿ ಬೆರಳಲ್ಲಿ ಇಟ್ಟ ಮೊಬೈಲ ಮೂಲಕವೇ ನಡೆಯುತ್ತಿದೆ.ಇದರಿಂದ ಏನೋ ನಮ್ಮ ಮಕ್ಕಳು ತುಂಬಾ ಬುದ್ದಿವಂತರಾಗಿದ್ದಾರೆ. Morality ಬೆಳೆಸಬೇಕೆಂಬ ದೃಷ್ಟಿಯಿಂದ ನನ್ನ ಮಕ್ಕಳಿಗೆ ದಿನವೂ ಒಂದು ಕಥೆ ಹೇಳುವ ಪರಿಪಾಠ ಮಾಡಿಕಂಡ ನನ್ನ ಕಥೆಗಳನ್ನು ಕೇಳುವ ಮಕ್ಕಳು ಒಮ್ಮೊಮ್ಮೆ ಕೇಳುವ ಪ್ರಶ್ನೆ ನನಗೆ ಆಶ್ಚರ್ಯ ಮೂಡಿಸುತ್ತದೆ.
ಉದಾಹರಣೆಗ ಸತ್ಯವನ್ನು ರೂಡಿಸಿಕೊಳ್ಳಲೆಂದು ಹೇಳಿದ ಪುಣ್ಯಕೋಟಿ ಕಥೆಗೆ ನನ್ನ ಮಕ್ಕಳು ಕೇಳಿದ ಪ್ರಶ್ನೆ ನನಗೆ ದಿಗ್ಬ್ರಮೆ ಮೂಡಿಸಿತ್ತು.ಮಾಂಸಾಹಾರಿಯಾದ ಹುಲಿ ಸಸ್ಯಾಹಾರಿ ಹಸುವನ್ನು ತಿನ್ನುವದರಲ್ಲೇನು ತಪ್ಪಾ ಎಂದು. ಒಮ್ಮಲೆ ಪ್ರಶ್ನೆಗೆ ಉತ್ತರಿಸಲಾಗದಿದ್ದರೂ ಸಾವರಿಸಿಕೊಂಡು ಈ ರೀತಿ ಉತ್ತರಿಸಿದೆ.ಅದರಲ್ಲಿ ತಪ್ಪೆನೂ ಇಲ್ಲ ಆದರೆ ಸಾವಿನ ದವಡೆಯಲ್ಲಿದ್ದರೂ ತನ್ನ ಮಾತಿಗೆ ತಪ್ಪದೇ ಬಂದ ಹಸುವಿನ ರೀತಿ ಇರುವದು ಬಹಳ ಕಮ್ಮಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ತಿಳಿಸಿ ಹೇಳಿದೆ. ಈ ರೀತಿಯಲ್ಲು ಮಕ್ಕಳು ವಿಚಾರಿಬಲ್ಲರು,ಅದಕ್ಕೆ ಈ ಯುಗದ ನಮ್ಮ ಮಕ್ಕಳಿಗಾಗಿ ನಾವೂ ಇನ್ನಷ್ಟು ಬುದ್ದಿವಂತರಾಗೋಣ.ಮಕ್ಕಳ ಈ ಹಬ್ಬದಲ್ಲಿ ನಾವೂ ಮಕ್ಕಳಾಗೋಣ. Once again Happy children’s day for small and big kids.
ಡಾ.ಭಾಗ್ಯಜ್ಯೋತಿ ಕೋಟಿಮಠ
ಮುಖ್ಯಶಿಕ್ಷಕಿ, ಶಿರೂರ, ತಾ.ನವಲಗುಂದ