ಹಾವೇರಿ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ;
ಕೋಟಿಗೂ ಅಧಿಕ ಮೌಲ್ಯದ ಹಣ, ಕಾರುಗಳ ಜಪ್ತಿ
ಹಾವೇರಿ: ಕುಖ್ಯಾತ ಮಂಕಿಕ್ಯಾಪ್ ಅಂತರಾಜ್ಯ ದರೋಡೆಕೋರರ ಬಂಧನ ಮಾಡಿ 1 ಕೋಟಿ ಗೂ ಹೆಚ್ಚು ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಹನುಮಂತರಾಯ್ ಪತ್ರಿಕಾಗೋಷ್ಢಿಯಲ್ಲಿ ತಿಳಿಸಿದರು.
ರಾಜ್ಯವನ್ನೆ ಬೆಚ್ಚಿಬಿಳಿಸಿದ್ದ ಕಳ್ಳರ ಗ್ಯಾಂಗ್ ಇದಾಗಿತ್ತಿ. ಇವರು ಪ್ರೆಸ್ ಲೋಗೊ, ಆಂಜನೇಯ ಸ್ವಾಮಿ ಸ್ಟಿಕ್ಕರ್ ಹಾಗೂ ಪಾಸ್ಟ್ ಟ್ಯಾಗ್ ಬಳಸಿ ದರೋಡೆ ಮಾಡುತ್ತಿದ್ದರು. ಹೆದ್ದಾರಿಗಳಲ್ಲಿ ಮಾತ್ರ ದರೋಡೆ ಮಾಡುವ 4 ಕಳ್ಳರ ಗ್ಯಾಂಗ್ ಇದಾಗಿತ್ತು. ಇವರು ಬಂಗಾರ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಂದ ಹಣ ದೋಚುತ್ತಿದ್ದರು. ಬಂಧಿತರಿಂದ ದೊಡ್ಡ ಮೊತ್ತದ ನಗದು ಹಣ ಹಾಗೂ ಬೆಲೆಬಾಳುವ ಕಾರುಗಳ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಂಥೋನಿ, ಅಬ್ಬಾಸ್, ನಿಶಾದಬಾಬು ಹಾಗೂ ಭರತ್ ಕುಮಾರ ಬಂಧಿತ ದರೋಡೆಕೋರರು. ಕೇರಳ ರಾಜ್ಯದಿಂದ ಬಂದು ಹಾವೇರಿ, ಗದಗ, ಹುಬ್ಬಳ್ಳಿ, ದಾವಣಗೆರೆ ಮಾರ್ಗಗಳ ಮಧ್ಯೆ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 34 ಲಕ್ಷ 50 ಸಾವಿರ ನಗದು, 6ಲಕ್ಷ ಮೌಲ್ಯದ ಬಲೇನೊ ಕಾರು, 15 ಲಕ್ಷ ಮೌಲ್ಯದ ಕ್ರೇಟಾ ಕಾರು, 15 ಲಕ್ಷ ಮೌಲ್ಯದ ಇನ್ನೊವಾ ಕಾರು, 29 ಲಕ್ಷ ಮೌಲ್ಯದ 5512 ಆಡಿ ಕಾರು, 6 ಲಕ್ಷ ಮೌಲ್ಯದ ಇಕೋ ಸ್ಪೋರ್ಟ್ಸ್ ಕಾರು ಹಾಗೂ ಏರ್ ಗನ್, ಲ್ಯಾಪ್ ಟ್ಯಾಪ್, ಡೊಂಗಲ್, ಮೊಬೈಲ್‌ಗಳ ವಶಪಡಸಿಕೊಳ್ಳಲಾಗಿದೆ. ಒಟ್ಟು ಬಂಧಿತ ದರೋಡೆಕೋರರಿಂದ 1,08,44,000 ಸಾವಿರ ಮೌಲ್ಯದ ವಸ್ತುಗಳ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದು ರಾಜ್ಯದಲ್ಲಿಯೇ ವಿಶೇಷ ಪ್ರಕರಣವಾಗಿದೆ. ಈ ಭಾಗದಲ್ಲಿ ಇದು ಪಸ್ಟ್ ಕೇಸ್, ಈ ವರೆಗೂ ಯಾರು ಕೂಡಾ ಇಂತಹ ಪ್ರಕರಣ ಭೇದಿಸಿಲ್ಲಾ. ಇವರದ್ದು ಒಟ್ಟು 10-12 ಜನರ ಗ್ಯಾಂಗ್ ಇದ್ದು, ಈಗ ನಾಲ್ಕು ಜನರು ಮಾತ್ರ ಸಿಕ್ಕಿದ್ದಾರೆ. ಪಕ್ಕಾ ಕ್ರೀಮಿನಲ್ ಮೈಂಡ್ ಉಪಯೋಗಿಸಿ ಟೋಲ್ ಗೆಟ್ ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದರು. ಪದೆ ಪದೆ ಯಾವ ಕಾರು ಹೋಗುತ್ತದೆ, ಪಾಸ್ಟ್ ಕಾರ್ಡ್‌ನಿಂದ ಹಣ ಡ್ರಾ ಆಗುವ ಒಂದೆ ಕಾರಿನ ಮೇಲೆ ನಿಗಾ ಇಡುತ್ತಿದ್ದರು. ಬಂಗಾರ ವ್ಯಾಪರಸ್ಥರು, ಉದ್ಯಮಗಳಿಂದ ಹೆದರಿಸಿ ಹಣ ದರೋಡೆ ಮಾಡುತ್ತಿದ್ದರು ಎಂದು ಹೇಳಿದರು.
ಕಳೆದ ತಿಂಗಳು ಬ್ಯಾಡಗಿ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರಿಂದ 50 ಲಕ್ಷ ಹಣ ದೋಚಿದ್ದರು. ಈ ಪ್ರಕರಣ ಬೆನ್ನು ಹತ್ತಿದಾಗಲೇ ಗೊತ್ತಾಗಿದ್ದು ಈ ಗ್ಯಾಂಗ್ ಕೇರಳಿದಿಂದ ಬಂದಿದೆ ಅಂತಾ. ಹೀಗಾಗಿ ಟೋಲ್‌ಗಳಲ್ಲಿ ವಾಚ್ ಮಾಡಿ, ಕೇರಳಕ್ಕೆ ತೆರಳಿ ನಮ್ಮ ತಂಡ ವಿಚಾರಣೆ ನಡೆಸಿತು ಎಂದು ಪ್ರಕರಣದ ಮಾಹಿತಿ ನೀಡಿದರು.
ಸದರಿ ಪ್ರಕರಣ ಬೇಧಿಸಿದ ಪೊಲೀಸ್ ಅಧೀಕ್ಷರು ವಿಜಯಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್, ಪೊಲೀಸ್ ಉಪಾಧೀಕ್ಷಕ ಶಿವಾನಂದ ಚಲವಾದಿ, ಸಿದ್ದಾರೂಡ ಬಡಿಗೇರ, ಸಂತೋಷ್ ಪಾಟೀಲ, ಬಸವರಾಜ, ಸಂಪತ್, ಮಹಾಂತೇಶ ಮರದಬುಡುಕಿನ, ಮಂಜುನಾಥ ಕುಪ್ಪೆಲೂರ, ರವಿ ನಾಯ್ಕ, ಶರತ್, ಕಾಶಿನಾಥ, ವೆಂಕಟೇಶ ಲಮಾಣಿ, ಡಿ.ಎನ್. ಹೋಳಗಿನವರ, ಎಸ್.ಜಿ.ಸೋಮಸಾಗರ, ಆರ್.ಎಂ.ಸವೂರ್, ಎನ್.ಎಂ.ಗೋರಮ ನವರ, ಆನಂದ ದೊಡ್ಡ ಕುರುಬರ, ಮಹೇಶ ಹೊರಕೇರಿ, ಸತೀಶ ಮಾರನಕಟ್ಟೆ, ಮಾರುತಿ ಹಾಲಭಾವಿ, ರಾಘವೇಂದ್ರ ದೇವಗಿರಿ, ಪಿ.ಆರ್.ಭಾವಿಕಟ್ಟಿ ಇವರಿಗೆ ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ ಎಸ್ಪಿ ಹನುಮಂತರಾಯ್ ಅವರು ನಗದು ಬಹುಮಾನ ಘೋಷಿಸಿದರು.